ರಾಜ್ಯ ಕ್ರೈಸ್ತ ಅಭಿವೃದ್ಧಿ ನಿಗಮದ ನೂತನ ಅಧ್ಯಕ್ಷರಾಗಿ ಜೋಯ್ಲಸ್ ಡಿಸೋಜ ಆಯ್ಕೆ

ಬೆಂಗಳೂರು :  ಕರ್ನಾಟಕ ರಾಜ್ಯ ಕ್ರೈಸ್ತ ಅಭಿವೃದ್ಧಿ ನಿಗಮದ ನೂತನ ಅಧ್ಯಕ್ಷರನ್ನಾಗಿ ದಕ್ಷಿಣ ಕನ್ನಡ ಜಿಲ್ಲೆಯ ಯುವ ಮುಂದಾಳು, ಬಿಜೆಪಿ ನಾಯಕ ಜೋಯ್ಲಸ್ ಡಿಸೋಜ ಅವರನ್ನು ರಾಜ್ಯ ಸರಕಾರ ಆಯ್ಕೆ ಮಾಡಿದೆ.
ತತ್ಕ್ಷಣದಿಂದ ಕ್ರಿಶ್ಚಿಯನ್ ಅಭಿವೃದ್ಧಿ ಸಮಿತಿಗೆ ಮುಂದಿನ ಆದೇಶ ಬರುವ ತನಕ ಅಧ್ಯಕ್ಷ ಮತ್ತು ಸದಸ್ಯರನ್ನು ಕರ್ನಾಟಕ ರಾಜ್ಯಪಾಲರ ಆದೇಶಾನುಸಾರ ಮತ್ತು ಅವರ ಹೆಸರಿನಲ್ಲಿ ಸರಕಾರದ ಅಧೀನ ಕಾರ್ಯದರ್ಶಿ ಅಲ್ಪಸಂಖ್ಯಾತರ ಕಲ್ಯಾಣ ಹಜ್ ಮತ್ತು ವಕ್ಫ್ ಇಲಾಖೆ ಘೋಷಣೆ ಮಾಡಿದೆ.
ಮೂಡುಬಿದ್ರೆ ವಿಧಾನಸಭಾ ಕ್ಷೇತ್ರದಲ್ಲಿ ಕ್ರೈಸ್ತ ಸಮಾಜದ ಯುವ ನಾಯಕನಾಗಿ, ತನ್ನ ಎಳೆಯ ವಯಸ್ಸಿನಲ್ಲಿ ವಿವಿಧ ಪ್ರಮುಖ ಸಂಘ ಸಂಸ್ಥೆಗಳ ಪದಾಧಿಕಾರಿಯಾಗಿ ಮತ್ತು ಮಂಗಳೂರು ಕಂಬಳ ಸಮಿತಿಯ ಉಪಾಧ್ಯಕ್ಷರಾಗಿಯೂ ಸೇವೆ ಸಲ್ಲಿಸಿದ್ದು, ಮಾತ್ರವಲ್ಲದೆ ದಕ್ಷಿಣ ಕನ್ನಡ ಜಿಲ್ಲಾ ಬಿಜೆಪಿ ಅಲ್ಪಸಂಖ್ಯಾತ ಮೋರ್ಚಾದ ಅಧ್ಯಕ್ಷರಾಗಿಯೂ ಸೇವೆ ಸಲ್ಲಿಸುತ್ತಿದ್ದಾರೆ. ಕಳೆದ ಹಲವಾರು ವರ್ಷಗಳಲ್ಲಿ ಬಿಜೆಪಿ ಪಕ್ಷದ ಸಂಘಟನೆಯಲ್ಲಿ ಮುಂಚೂಣಿಯಲ್ಲಿ ತೊಡಗಿಸಿಕೊಂಡಿರುವ ಜೋಯ್ಲಸ್ ಡಿಸೋಜ ಅವರ ಪಕ್ಷ ಸಂಘಟನೆಯ ಚತುರತೆಯನ್ನು ಗುರುತಿಸಿ ಭಾರತೀಯ ಜನತಾ ಪಕ್ಷ ಅವರಿಗೆ ಅವಕಾಶವನ್ನು ನೀಡಿದೆ.
ಸದಾ ಜನರ ಕಷ್ಟಗಳಿಗೆ ಸ್ಪಂದಿಸುತ್ತಿರುವ ಜೊಯ್ಲಸ್ ಡಿಸೋಜಾ ಅವರ ಆಯ್ಕೆಗೆ ಕ್ಷೇತ್ರದ ಶಾಸಕ ಉಮಾನಾಥ ಕೋಟ್ಯಾನ್ ಸಹಿತ ಬಿಜೆಪಿ ಮುಖಂಡರು ಹರ್ಷ ವ್ಯಕ್ತಪಡಿಸಿದ್ದಾರೆ.

1 thought on “ರಾಜ್ಯ ಕ್ರೈಸ್ತ ಅಭಿವೃದ್ಧಿ ನಿಗಮದ ನೂತನ ಅಧ್ಯಕ್ಷರಾಗಿ ಜೋಯ್ಲಸ್ ಡಿಸೋಜ ಆಯ್ಕೆ

  1. A 43-year-old woman has filed a complaint against her husband under the Muslim Women (Protection of Rights on Marriage) Bill, 2019. This is the second triple talaq case registered in Udupi district in a span of one month.

Leave a Reply

Your email address will not be published. Required fields are marked *

error: Content is protected !!