ಜೆಸಿಐ ಕುಂದಾಪುರ : ವಲಯ ತರಬೇತುದಾರರ ಕಮ್ಮಟ

ಕುಂದಾಪುರ : “ತರಬೇತಿಯೇ ಜೀವಾಳವಾಗಿರುವ ಜೇಸಿಐನಲ್ಲಿ ಅತ್ಯುತ್ತಮ ಗುಣಮಟ್ಟದ ತರಬೇತುದಾರರನ್ನು ರೂಪಿಸುವ ಸಲುವಾಗಿ ಹಮ್ಮಿಕೊಳ್ಳಲಾಗಿರುವ ಈ ಕಾರ್‍ಯಕ್ರಮವು ಅಭೂತಪೂರ್ವ ಯಶಸ್ಸು ಕಾಣಲಿ” ಎಂದು ಜೇಸಿಐ ಭಾರತದ ಪೂರ್ವ ರಾಷ್ಟ್ರೀಯ ಉಪಾಧ್ಯಕ್ಷ ಹಾಗೂ ಜೇಸಿಐ ಕುಂದಾಪುರದ ಪೂರ್ವಾಧ್ಯಕ್ಷರೂ ಆದ ಜೇಸಿಐ ಸೆನೆಟರ್ ಸದಾನಂದ ನಾವಡ ನುಡಿದರು.

ಅವರು ಜೇಸಿಐ ಕುಂದಾಪುರದ ಆತಿಥ್ಯದಲ್ಲಿ ಹಮ್ಮಿಕೊಳ್ಳಲಾದ ರಾಷ್ಟ್ರೀಯ ಕಾರ್‍ಯಕ್ರಮ ಜೇಸಿಐ ವಲಯ ಹನ್ನೊಂದು ಮತ್ತು ಹದಿನೈದರ  ವ್ಯಾಪ್ತಿಯ  “ವಲಯ ತರಬೇತುದಾರರ ಕಮ್ಮಟ”ದ ಮುಖ್ಯ ಅತಿಥಿಯಾಗಿ ಮಾತನಾಡಿದರು.

ಕಾರ್‍ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಜೇಸಿಐ ವಲಯ ಹದಿನೈದರ ಅಧ್ಯಕ್ಷ ಜೆಎಫ್‌ಪಿ ಅಶೋಕ ಚೂಂತಾರು ಮಾತನಾಡಿ, “ಅತ್ಯುತ್ತಮ ತರಬೇತುದಾರರ ಮಾರ್ಗದರ್ಶನದ ಮೂಲಕ ನಡೆಯಲಿರುವ ಈ ಕಾರ್‍ಯಕ್ರಮದಲ್ಲಿ ಭಾಗವಹಿಸಿದ ಎಲ್ಲರೂ ಉತ್ತಮ ನಿರ್ವಹಣೆಯ ಮೂಲಕ ತೇರ್ಗಡೆ ಹೊಂದಲಿ” ಎಂದು ಶುಭ ಹಾರೈಸಿದರು.

 

 

 

 

ಕಾರ್‍ಯಕ್ರಮದ ಅಧ್ಯಕ್ಷತೆಯನ್ನು ಜೇಸಿಐ ಹದಿನೈದರ ತರಬೇತಿ ವಿಭಾಗದ ನಿರ್ದೇಶಕರಾದ ಜೇಸಿಐ ಸೆನೆಟರ್ ಅಕ್ಷತಾ ಗಿರೀಶ್ ವಹಿಸಿದ್ದರು. ಗೌರವ ಉಪಸ್ಥಿತರಾಗಿ ಜೇಸಿಐ ಕುಂದಾಪುರದ ಪೂರ್ವಾಧ್ಯಕ್ಷರಾದ ಖ್ಯಾತ ವಕೀಲರೂ ಆಗಿರುವ ಜೇಸಿ ಎ.ಎಸ್.ಎನ್. ಹೆಬ್ಬಾರ್, ಜೇಸಿಐ ಭಾರತದ ಪೂರ್ವ ಕಾನೂನು ಸಲಹೆಗಾರರಾದ ಜೇಸಿ ಶ್ರೀಧರ ಪಿ.ಎಸ್., ನಿಕಟ ಪೂರ್ವ ವಲಯಾಧ್ಯಕ್ಷ ಜೇಸಿ ರಾಕೇಶ ಕುಂಜೂರು, ವಲಯ ಹದಿನೈದರ ‘ಎ’ ಪ್ರಾಂತ್ಯದ ಉಪಾಧ್ಯಕ್ಷ ಜೇಸಿಐ ಸೆನೆಟರ್ ಅಬ್ದುಲ್ ಜಬ್ಬಾರ್ ಸಾಹೇಬ್, ಉಪಸ್ಥಿತರಿದ್ದರು.

 

 

ಜೇಸಿಐ ರಾಷ್ಟ್ರೀಯ ತರಬೇತುದಾರರಾದ ಜೇಸಿಐ ಸೆನೆಟರ್ ಅಮಿತ್ ಕೆ. ಹಿಂಗೋರಾನಿ ಕೊಯಮತ್ತೂರು, ಜೇಸಿ ಕೆ. ಕೃಷ್ಣಮೂರ್ತಿ ಉಜಿರೆ ಮತ್ತು ಜೇಸಿ ಪೂನಮ್ ಶಿರ್‌ಸತ್ ಗೋವಾ ತರಬೇತಿ ನೀಡಿದರು. ಕಾರ್‍ಯಕ್ರಮದಲ್ಲಿ ಗೋವಾ, ಮಂಗಳೂರು, ಉಡುಪಿ ಭಾಗದ ಬೇರೆ ಬೇರೆ ತರಬೇತುದಾರ ಆಕಾಂಕ್ಷಿಗಳು ಭಾಗವಹಿಸಿದ್ದರು. ಜೇಸಿಐ ವಲಯ ಹದಿನೈದರ ಕಾರ್‍ಯದರ್ಶಿ ರಾಘವೇಂದ್ರ ಪ್ರಭು ಕರ್ವಾಲೋ, ವಲಯ ಉಪಾಧ್ಯಕ್ಷರಾದ ಜೇಸಿ ಕಾರ್ತಿಕೇಯ ಮಧ್ಯಸ್ಥ, ದೇವೆಂದ್ರ ನಾಯಕ್, ವಲಯಾಧಿಕಾರಿಗಳಾದ ಸೌಮ್ಯಾ ರಾಕೇಶ್, ಕೇಶವ ಆಚಾರ್ ಕೋಟ, ಗಿರೀಶ್ ಎಸ್.ಪಿ. ವಲಯ ತರಬೇತುದಾರ ಸುಭಾಶ್ ಬಂಗೇರ, ಜೇಸಿಐ ಕುಂದಾಪುರ ಪೂರ್ವಾಧ್ಯಕ್ಷರುಗಳಾದ ಜೇಸಿ ದಿನೇಶ ಗೋಡೆ, ಜೇಸಿ ಜಗದೀಶ ಜೋಗಿ, ನಿಕಟ ಪೂರ್ವಾಧ್ಯಕ್ಷ ಜೇಸಿ ಶ್ರೀನಾಥ ಗಾಣಿಗ, ಕಾರ್‍ಯಕ್ರಮ ನಿರ್ದೇಶಕರಾದ ಜೇಸಿ ರಾಕೇಶ್ ಶೆಟ್ಟಿ ವಕ್ವಾಡಿ, ಜೇಸಿಐ ಕುಂದಾಪುರದ ಕೋಶಾಧಿಕಾರಿ ಚೇತನ ದೇವಾಡಿಗ, ಸದಸ್ಯರಾದ ಡಾ| ಪ್ರಿಯಾಂಕ ಜೋಗಿ, ಚಂದನ್, ಸತೀಶ ಮೊಗವೀರ, ಗಿರೀಶ ಐತಾಳ್, ರಾಘವೇಂದ್ರ ಹರಪನಕೆರೆ, ರವೀಶ್ ಕೊರವಡಿ, ರವೀಂದ್ರ ಕೋಡಿ, ನಾಗರತ್ನ ಚಂದ್ರಶೇಖರ, ನಾಗರತ್ನ ಜಿ. ಹೇರ್ಳೆ ಉಪಸ್ಥಿತರಿದ್ದರು.

ಅತಿಥೇಯ ಘಟಕ ಜೇಸಿಐ ಕುಂದಾಪುರದ ಅಧ್ಯಕ್ಷರಾದ ಜೇಸಿಐ ಸೆನೆಟರ್ ಅಶೋಕ ತೆಕ್ಕಟ್ಟೆ ಸ್ವಾಗತಿಸಿದರು. ಕಾರ್‍ಯದರ್ಶಿ ಜೇಸಿ ದೀಕ್ಷಿತಾ ಗೋಡೆ ವಂದಿಸಿದರು.

Leave a Reply

Your email address will not be published. Required fields are marked *

error: Content is protected !!