ಜೇಸಿಐ ಕುಂದಾಪುರ ಜೇಸಿ ಸಪ್ತಾಹ : ನಗೆ ಮುಂಗಾರು

ಕುಂದಾಪುರ : ಜೇಸಿಐ ಕುಂದಾಪುರದ ವತಿಯಿಂದ ಸೆಪ್ಟೆಂಬರ್ 23 ರಿಂದ 29 ರ ವರೆಗೆ ನಡೆಯುವ ಜೇಸಿ ಸಪ್ತಾಹ 2019 ಅಂಗವಾಗಿ ಅವಿಭಜಿತ ದಕ್ಷಿಣ ಕನ್ನಡ ಜಿಲ್ಲಾ ಮಟ್ಟದ ಹಾಸ್ಯ ಪ್ರಹಸನ ಸ್ಪರ್ಧೆ “ನಗೆ ಮುಂಗಾರು” ಏರ್ಪಡಿಸಲಾಗಿದೆ. ಉಡುಪಿ, ದಕ್ಷಿಣ ಕನ್ನಡ ಜಿಲ್ಲೆಯ ತಂಡಗಳು ಭಾಗವಹಿಸಬಹುದಾದ ಈ ಸ್ಪರ್ಧೆಯ ಪ್ರಶಸ್ತಿ ವಿಜೇತ ತಂಡಗಳಿಗೆ ಅತ್ಯುತ್ತಮ ಬಹುಮಾನವಿದೆ. ಪ್ರಥಮ ರೂ. 33,333 + ಶಾಶ್ವತ ಫಲಕ, ದ್ವಿತೀಯ ರೂ. 22,222+ ಶಾಶ್ವತ ಫಲಕ , ತೃತೀಯ ರೂ. 11,111+ ಶಾಶ್ವತ ಫಲಕ. ಸೆಪ್ಟೆಂಬರ್ 23, 24, 25, 26 ರಂದು ಸಂಜೆ 8.00 ಕ್ಕೆ ಸರಿಯಾಗಿ ಪ್ರತೀ ದಿನಕ್ಕೆ 4 ತಂಡಗಳಂತೆ ಒಟ್ಟು 16 ತಂಡಗಳಿಗೆ ಅವಕಾಶ ಇವುಗಳಲ್ಲಿ ಅತ್ಯುತ್ತಮ ನಿರ್ವಹಣೆ ನೀಡಿದ 4 ತಂಡಗಳು ಸೆಪ್ಟೆಂಬರ್ 28 ರಂದು ನಡೆಯುವ ಪೈನಲ್ಸ್‌ಗೆ ಆಯ್ಕೆಯಾಗಲಿವೆ. ಹೆಸರು ನೋಂದಾಯಿಸಲು ಕೊನೆಯ ದಿನಾಂಕ ಸೆಪ್ಟೆಂಬರ್ 15 ಎಂದು ಜೇಸಿಐ ಕುಂದಾಪುರದ ಅಧ್ಯಕ್ಷರಾದ ಜೇಸಿಐ ಸೆನೆಟರ್ ಅಶೋಕ ತೆಕ್ಕಟ್ಟೆ ಇವರ ಪ್ರಕಟಣೆ ತಿಳಿಸಿರುತ್ತದೆ. ಹೆಚ್ಚಿನ ವಿವರಗಳಿಗೆ ಸಂಪರ್ಕಿಸಬೇಕಾದ ಸಂಖ್ಯೆ : 9686503454

Leave a Reply

Your email address will not be published. Required fields are marked *

error: Content is protected !!