ಜೇಸಿಐ ಕಾಪು : ಜೇಸಿ ಸಪ್ತಾಹ ಉದ್ಘಾಟನೆ

ಕಾಪು : ಮಕ್ಕಳ ಪೋಷಣೆ ತಾಯಂದಿರ ಅತೀ ಅಗತ್ಯದ ಜವಾಬ್ದಾರಿಯಾಗಿದ್ದು, ಮಗುವಿನ ಪೋಷಣೆಯ ಹಿಂದೆ ತಾಯಿಯ ತ್ಯಾಗ, ಶ್ರಮ ಮತ್ತು ಕರ್ತವ್ಯ ಪ್ರಶಂಸನೀಯವಾಗಿದೆ. ಮಕ್ಕಳ ಪೋಷಣೆ ಮತ್ತು ಗರ್ಭಿಣಿಯರ ಆರೋಗ್ಯಕ್ಕೆ ಪೂರಕವಾಗಿ ಜನರಲ್ಲಿ ಅರಿವು ಮೂಡಿಸುವ ಕಾರ್ಯಕ್ರಮಕ್ಕೆ ಸಹಾಭಾಗಿತ್ವ ನೀಡುವ ಮೂಲಕ ಜೇಸಿಐ ಕಾಪು ಇತರೆಲ್ಲಾ ಸಂಸ್ಥೆಗಳಿಗೂ ಮಾದರಿಯಾಗುವ ಪ್ರಯತ್ನ ಮಾಡಿದೆ. ಇಂತಹ ಸೇವಾ ಸಂಘಟನೆಗಳಿಗೆ ಸರಕಾರ ಮತ್ತು ಸಾರ್ವಜನಿಕರು ಪೂರ್ಣ ರೀತಿಯ ಸಹಕಾರ ನೀಡುವುದು ಅತ್ಯಗತ್ಯವಾಗಿದೆ ಎಂದು ಜಿಲ್ಲಾ ಕಾನೂನು ಸೇವೆಗಳ ಪ್ರಾಽಕಾರದ ಸದಸ್ಯ ಕಾರ್ಯದರ್ಶಿ, ಹಿರಿಯ ನ್ಯಾಯಾಽಶೆ ಕಾವೇರಿ ಹೇಳಿದರು.

ಕಾಪು ಜೇಸಿಐನ ಜೇಸಿ ಸಪ್ತಾಹದ ಅಂಗವಾಗಿ ಜೇಸಿಐ ಕಾಪು, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಶಿಶು ಅಭಿವೃದ್ಧಿ ಯೋಜನೆ, ಜಿಲ್ಲಾ ಕಾನೂನು ಸೇವೆಗಳ ಪ್ರಾಽಕಾರ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಕಾಪು ಪುರಸಭೆ ಮತ್ತು ನಗರಾಭಿವೃದ್ಧಿ ಕೋಶ ಉಡುಪಿ ಇವರ ಸಹಕಾರದೊಂದಿಗೆ ಕಾಪು ಶ್ರೀ ಲಕ್ಷ್ಮೀ ಜನಾರ್ದನ ದೇವಸ್ಥಾನದ ಸಭಾಭವನದಲ್ಲಿ ಜರಗಿದ ತಾಲೂಕು ಮಟ್ಟದ ಪೋಷಣ್ ಅಭಿಯಾನ್, ಪೋಷಣ್ ಮಾಸ ಮತ್ತು ಆರೋಗ್ಯವಂತ ಶಿಶು ಸ್ಪರ್ಧೆ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಅವರು ಮಾತನಾಡಿದರು.

ಜೇಸಿ ಸಪ್ತಾಹವನ್ನು ಉದ್ಘಾಟಿಸಿದ ಜೇಸಿಐ ಭಾರತದ ರಾಷ್ಟ್ರೀಯ ನಿರ್ದೇಶಕ ಸಂದೀಪ್ ಕುಮಾರ್ ಮಾತನಾಡಿ, ಕಾಪು ಜೇಸಿಐ ಕಳೆದ 23 ವರ್ಷಗಳಿಂದಲೂ ಕಾಪು ಪರಿಸರದ ಎಲ್ಲಾ ವರ್ಗದ ಜನರ ಆಭಿರುಚಿಗೂ ಪೂರಕವಾಗುವ ಕಾರ್ಯಕ್ರಮವನ್ನು ನಡೆಸಿಕೊಂಡು ಬರುತ್ತಿದೆ. ಈ ಬಾರಿಯೂ ಒಂದು ವಾರದಲ್ಲಿ ಅದ್ಭುತ ಕಾರ್ಯಕ್ರಮಗಳನ್ನು ಹಾಕಿಕೊಂಡಿದ್ದು, ಜೇಸಿ ಸಪ್ತಾಹವು ರಾಷ್ಟ್ರ ಮಟ್ಟದ ಅತ್ಯುತ್ತಮ ಜೇಸಿ ಸಪ್ತಾಹವಾಗಿ ಮೂಡಿ ಬರಲಿ ಎಂದು ಶುಭ ಹಾರೈಸಿದರು.

ಉಡುಪಿ ಜಿಲ್ಲಾ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪನಿರ್ದೇಶಕಿ ಗ್ರೇಸಿ ಗೊನ್ಸಾಲ್ವಿಸ್ ಮಾತನಾಡಿ, ಆರೋಗ್ಯವಂತ ಗರ್ಭಿಣಿಯರಿಂದ ಮಾತ್ರ ಆರೋಗ್ಯವಂತ ಶಿಶುವನ್ನು ನಿರೀಕ್ಷಿಸಲು ಸಾಧ್ಯವಿದೆ. ಗರ್ಭಿಣಿಯರ ಆರೋಗ್ಯಕ್ಕೆ ಪೂರಕವಾಗಿ ಅವರಿಗೆ ಆರೋಗ್ಯವಂತ ಪರಿಸರವನ್ನು ಒದಗಿಸುವುದು ನಮ್ಮೆಲ್ಲರ ಕರ್ತವ್ಯವಾಗಿದೆ. ಅದಕ್ಕಾಗಿ ಗರ್ಭಿಣಿಯರ ಸಧೃಡ ಆರೋಗ್ಯಕ್ಕೆ ಪೂರಕವಾಗುವ ಪೌಷ್ಟಿಕಾಂಶಯುತವಾದ ಆಹಾರವನ್ನು ಒದಗಿಸುವ ಅಗತ್ಯವಿದ್ದು, ಅದಕ್ಕಾಗಿ ಈ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ ಎಂದರು.

ಕಾಪು ಪುರಸಭಾ ಮುಖ್ಯಾಽಕಾರಿ ರಾಯಪ್ಪ, ಕಾಪು ಪ್ರಾಥಮಿಕ ಆರೋಗ್ಯ ಕೇಂದ್ರದ ಮಕ್ಕಳ ತಜ್ಞ ಡಾ| ಅಮರನಾಥ ಶಾಸ್ತ್ರಿ, ಜೇಸಿಐ ನಿಕಟಪೂರ್ವ ವಲಯಾಧ್ಯಕ್ಷ ರಾಕೇಶ್ ಕುಂಜೂರು, ಉಡುಪಿ ಜಿಲ್ಲಾ ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕ ಅರುಣ್ ಪ್ರಭಾ, ಪ್ರಭಾರ ಶಿಶು ಅಭಿವೃದ್ಧಿ ಯೋಜನಾಽಕಾರಿ ವೀಣಾ ವಿವೇಕಾನಂದ, ಕೌಶಲ್ಯಾಭಿವೃದ್ಧಿ ಅಽಕಾರಿ ಗೀತಾ, ಕುಷ್ಠ ರೋಗ ನಿವಾರಣಾ ಅಽಕಾರಿ ಡಾ| ನಿಂಬಾಳ್ಕರ್, ಆಯುಷ್ಮಾನ್ ಭಾರತ್ ಯೋಜನೆಯ ಜಿಲ್ಲಾ ಸಂಯೋಜಕ ಜಗನ್ನಾಥ್, ಕಾಪು ಜೇಸಿಐ ಪೂರ್ವಾಧ್ಯಕ್ಷ ಅರುಣ್ ಶೆಟ್ಟಿ ಪಾದೂರು ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು.

ಅಭಿವೃದ್ಧಿ ಮತ್ತು ಬೆಳವಣಿಗೆ ವಿಭಾಗದ ವಲಯ ನಿರ್ದೇಶಕಿ ಸೌಮ್ಯಾ ರಾಕೇಶ್, ಕಾಪು ಜೇಸಿಐನ ನಿಕಟ ಪೂರ್ವಾಧ್ಯಕ್ಷ ರಮೇಶ್ ನಾಯ್ಕ್, ಸಪ್ತಾಹದ ಮಹಾನಿದೇರ್ಶಕಿ ಸಾವಿತ್ರಿ ನಾಯ್ಕ್ ಉಪಸ್ಥಿತರಿದ್ದರು.

ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿದ್ದ ಜೊಸೆಫ್ ಎಂ. ರೆಬೆಲ್ಲೊ ಅವರು ಮಳೆ ನೀರು ಕೊಯ್ಲು ಮತ್ತು ಜಲಸಂರಕ್ಷಣೆಯ ಕುರಿತಾಗಿ ಮಾಹಿತಿ ನೀಡಿದರು. ವಿವಿಧ ಅಂಗನವಾಡಿ ಕಾರ್ಯಕರ್ತರು ಪೌಷ್ಟಿಕಾಂಶ ಆಹಾರ ಪದಾರ್ಥಗಳನ್ನು ಸಿದ್ಧ ಪಡಿಸಿ ತಂದು, ಅದರ ಬಗ್ಗೆ ಮಾಹಿತಿ ನೀಡಿದರು. ಆರು ತಿಂಗಳ ಒಳಗಿನ ಮಕ್ಕಳಿಗೆ ಸಾಂಕೇತಿಕವಾಗಿ ಅನ್ನಪ್ರಾಶನ ಮಾಡಿಸಲಾಯಿತು. ಮಾತೃಪೂರ್ಣ ಯೋಜನೆಯಡಿ ಗರ್ಭಿಣಿಯರಿಗೆ ಸೀಮಂತ ಬಡಿಸಲಾಯಿತು.


ಕಳತ್ತೂರು ಶಾಲೆಗೆ ವಾಷ್ ಬೇಸಿನ್ ನೀಡಲಾಯಿತು. ಕಾಪು ಸುತ್ತಮುತ್ತಲಿನ ವಿವಿಧ ಅಂಗನವಾಡಿ ಮಕ್ಕಳಿಗೆ ಮೂರು ವಿಭಾಗಗಳಲ್ಲಿ ಆರೋಗ್ಯವಂತ ಶಿಶು ಸ್ಪರ್ಧೆ ನಡೆಸಿ, ಬಹುಮಾನ ವಿತರಿಸಲಾಯಿತು.

ಅಧ್ಯಕ್ಷತೆ ವಹಿಸಿದ್ದ ಕಾಪು ಜೇಸಿಐನ ಅಧ್ಯಕ್ಷೆ ಶಾರದೇಶ್ವರಿ ಗುರ್ಮೆ ಸ್ವಾಗತಿಸಿದರು. ಕಾರ್ಯದರ್ಶಿ ಸುಖಲಾಕ್ಷಿ ಬಂಗೇರ ವಂದಿಸಿದರು.

Leave a Reply

Your email address will not be published. Required fields are marked *

error: Content is protected !!