ಅಘೋಷಿತ ಬಂದ್: ಜನಸಾಮಾನ್ಯರಿಗೆ ನೆರವು ನೀಡಲು ಜಯಪ್ರಕಾಶ್ ಹೆಗ್ಡೆಆಗ್ರಹ
ಉಡುಪಿ – ಕೊರೋನಾ ವೈರಸ್ ಭೀತಿಯಿಂದಾಗಿ ರಾಜ್ಯದಾದ್ಯಂತ ಜಾರಿಯಲ್ಲಿರುವ ಅಘೋಷಿತ ಬಂದ್ ನಿಂದಾಗಿ ಅನೇಕ ಜನ ತತ್ತರಿಸಿ ಹೋಗಿದ್ದಾರೆ ಇವರಿಗೆ ಸೂಕ್ತವಾದ ನೆರವನ್ನು ಸರಕಾರ ನೀಡಬೇಕೆಂದು ಮಾಜಿ ಸಂಸದ ಜಯಪ್ರಕಾಶ್ ಹೆಗ್ಡೆ ಸರ್ಕಾರದ ಬಳಿ ಆಗ್ರಹಿಸಿದ್ದಾರೆ . ರಸ್ತೆ ಬದಿಯ ಸಣ್ಣ ವ್ಯಾಪಾರಸ್ಥರು, ಆಟೋ ಚಾಲಕರು, ಕ್ಯಾಬ್ ಮಾಲೀಕರು,ಬಾಡಿಗೆಗೆ ವಾಹನ ಓಡಿಸುವವರು ತತ್ತರಿಸಿ ಹೋಗಿದ್ದಾರೆ. ಪ್ರತಿದಿನದ ದುಡಿಮೆಯನ್ನೇ ನಂಬಿಕೊಂಡು ಜೀವನ ನಡೆಸುತ್ತಿರುವ ಎಲ್ಲಾ ವರ್ಗದವರು ಈ ಸಂಕಷ್ಟದಲ್ಲಿ ಸಿಲುಕಿದ್ದಾರೆ. ಇಂತಹವರಿಗೆ ಗೃಹ ಸಾಲ, ವಾಹನ ಸಾಲ, ಮನೆ ಬಾಡಿಗೆ, ಅಂಗಡಿ ಬಾಡಿಗೆ ಕಟ್ಟಲು ಸಾಧ್ಯವಾಗುತ್ತಿಲ್ಲ.
ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ತಕ್ಷಣವೇ ಇಂತಹವರ ನೆರವಿಗೆ ಬರಬೇಕು. ಇವರ ಗೃಹ ಸಾಲ, ವಾಹನ ಸಾಲ ಮರುಪಾವತಿಗೆ ಕೆಲವೊಂದು ತಿಂಗಳುಗಳ ಕಾಲ ವಿನಾಯಿತಿ ನೀಡಿ, ಪರಿಸ್ಥಿತಿ ಸುಧಾರಿಸುವವರೆಗೆ ಸಾಲದ ಮೇಲಿನ ಬಡ್ಡಿಯನ್ನು ವಿಧಿಸದಂತೆ ಸರ್ಕಾರಿ, ಖಾಸಗಿ ಹಾಗೂ ಸಹಕಾರಿ ಬ್ಯಾಂಕ್ ಗಳಿಗೆ ಆದೇಶ ಹೊರಡಿಸುವಂತೆ ಸರ್ಕಾರವನ್ನು ಕೋರುತ್ತೇನೆ. ದಿನಗೂಲಿ ನೌಕರರ ಜೀವನೋಪಾಯಕ್ಕಾಗಿ ಸರ್ಕಾರ ಆರ್ಥಿಕ ನೆರವು ನೀಡಬೇಕು ಎಂಬುದಾಗಿ ಆಗ್ರಹಿಸಿದ್ದಾರೆ.