ದೇಶದಾದ್ಯಂತ ಮಾರ್ಚ್ 22 ರಂದು ಜನತಾ ಕರ್ಪ್ಯೂ ಜಾರಿ – ಪ್ರಧಾನಿ ಮೋದಿ

ನವದೆಹಲಿ: (ಉಡುಪಿ ಟೈಮ್ಸ್ ವರದಿ ) ಕೊರೋನಾ ಮಹಾಮಾರಿ ಹರಡದಂತೆ ಮಾರ್ಚ್ 22 ರಂದು ಬೆಳಿಗ್ಗೆ 07 ಗಂಟೆಯಿಂದ ರಾತ್ರಿ 9 ಗಂಟೆಯವರೆಗೆ ಜನತಾ ಕರ್ಪ್ಯೂ ಜಾರಿಯಲ್ಲಿರುತ್ತೆ. ಈ ಸಮಯದಲ್ಲಿ ಯಾರು ಮನೆಯಿಂದ ಹೊರಗೆ ಬರಬಾರದು ಎಂಬುದಾಗಿ ಪ್ರಧಾನಿ ಮೋದಿ ತಿಳಿಸಿದರು, ಅಷ್ಟೇ ಅಲ್ಲದೆ ಸಂಜೆ 5 ಗಂಟೆಗೆ ಮನೆಗಳ ಕಿಟಕಿ ಬಾಗಿಲುಗಳನ್ನುತೆರೆದು ಚಪ್ಪಾಳೆ ತಟ್ಟುವುದರ ಮೂಲಕ ಕೊರೋನಾ ಹರಡದಂತೆ ಹೋರಾಡುತ್ತಿರುವ ಸಿಬ್ಬಂದಿಗಳಿಗೆ ಅಭಿನಂದನೆ ಸಲ್ಲಿಸಿ ಎಂಬುದಾಗಿ ಪ್ರಧಾನಿ ಮೋದಿ ಜನತೆಗೆ ತಿಳಿಸಿದರು.


ವಿಶ್ವವೇ ಇಂದು ಅತಿದೊಡ್ಡ ವಿಪತ್ತು ಎದುರಿಸುತ್ತಿದೆ. ನೈಸರ್ಗಿಕ ವಿಕೋಪಗಳಾದರೆ ಅದು ಕೆಲ ದೇಶಗಳಿಗಷ್ಟೇ ಸೀಮಿತವಾಗಿರುತ್ತದೆ. ಆದರೆ ಈ ಬಾರಿ, ಇಡೀ ಮನುಕುಲವನ್ನೇ ಈ ಕೊರೊನಾ ವೈರಸ್‌ ಎಂಬ ಮಹಾಮಾರಿ ಅಪಾಯಕ್ಕೆ ತಳ್ಳಿದೆ ಎಂದು ಮೋದಿ ದೇಶವನ್ನುದ್ದೇಶಿ ಮಾಡಿದ ಭಾಷಣದಲ್ಲಿ ಹೇಳಿದರು, ಪ್ರಧಾನಿ ಮಾರ್ಚ್ 22 ರಂದು ಜನರಿಂದ ಜನರಿಗಾಗಿ ಜನತಾ ಕರ್ಪ್ಯೂ ಜಾರಿಯಲ್ಲಿರುತ್ತದೆ. ನನ್ನ ದೇಶ ಕರೋನವನ್ನ ಎದುರಿಸಲು ಸದ್ರಡವಾಗಿದೆ ಎಂಬ ಸಂದೇಶವನ್ನ ನೀಡಬೇಕು ಎಂದರು.


ವಯೋ ವೃದ್ಧರ ಮೇಲೆ ಪ್ರಧಾನಿ ಕರುಣೆ – ವಯೋವೃದ್ದರು ದಯವಿಟ್ಟು ಮನೆಯಲ್ಲಿ ಇರಿ ಎಂಬುದಾಗಿ ತಿಳಿಸಿದರು . 60-65ಕ್ಕಿಂತ ಮೇಲ್ಪಟ್ಟವರಂತೂ ಮನೆಯಿಂದ ಹೊರ ಬರಲೇಬೇಡಿ. ಈ ಕುರಿತು ಸಂಕಲ್ಪ‌ ಹಾಗೂ ಸಂಯಮ ಇರಲಿ ಜನತಾ ಕರ್ಫ್ಯೂ, ನೀವಾಗಿಯೇ ಕರ್ಫ್ಯೂ ಹೇರಿಕೊಳ್ಳಿ – ಈ ಭಾನುವಾರ. ಯಾರೂ ಮನೆಯಿಂದ ಹೊರ ಬಾರದೆ, ಮನೆಯೊಳಗೇ‌ ಇದ್ದುಕೊಳ್ಳಿ ಎಂದಿದ್ದಾರೆ ಮೋದಿ.

ಕೊರೋನಾ ನೈಸರ್ಗಿಕ ಮಾದರಿಯಲ್ಲಿ ಹಿಮ್ಮೆಟ್ಟಿಸಬೇಕು – ಭಾರತದ ನಾಗರಿಕರಿಂದ ಏನನ್ನಾದರೂ ಬಯಸಿದಾಗ ನನಗೆ ಈ ವರೆಗೆ ನಿರಾಶೆಯಾಗಿಲ್ಲ . ಜನರ ಆಶೀರ್ವಾದದಿಂದ ನಾವು ಗುರಿಯತ್ತ ಧಾವಿಸುತ್ತಿದ್ದೇವೆ. ಇಂದು ನಾನು ಭಾರತೀಯ ನಾಗರಿಕರ ಬಳಿ ಮನವಿಯೊಂದನ್ನು ಮಾಡುತ್ತಿದ್ದೇನೆ. ಮುಂದಿನ ಕೆಲ ವಾರಗಳನ್ನು ನಾನು ಜನರ ಬಳಿ ಕೇಳುತ್ತಿದ್ದೇನೆ. ಕೊರೊನಾ ವೈರಸ್‌ಗೆ ಔಷಧವಿಲ್ಲ. ಹೀಗಾಗಿ ನೈಸರ್ಗಿಕ ಮಾದರಿಯಲ್ಲಿ ನಾವು ಅದನ್ನು ಹಿಮ್ಮೆಟ್ಟಿಸಬೇಕಿದೆ ಎಂದಿದ್ದಾರೆ ಮೋದಿ.

.
ಕೊರೊನಾ ವೈರಸ್‌ ಕುರಿತು ಭಾರತೀಯರು ಎಚ್ಚರಿಕೆಯಿಂದ ಇರಬೇಕಾಗಿದೆ. ಜನ ಸರ್ಕಾರದ ಸಲಹೆ ಸೂಚನೆಗಳನ್ನು ಕಟ್ಟು ನಿಟ್ಟಾಗಿ ಪಾಲಿಸಬೇಕಾಗಿದೆ. ನಮ್ಮನನ್ನು ನಾವು ರಕ್ಷಿಸಿಕೊಳ್ಳಬೇಕಾಗಿದೆ. ಅಗತ್ಯ ಬಿದ್ದರೆ ಮಾತ್ರವೇ ಮನೆಯಿಂದ ಹೊರಬನ್ನಿ. ಸಾಮಾಜಿಕ ಸಂಪರ್ಕದಿಂದ ದೂರವಿರಿ, ಜನತಾ ಕರ್ಫ್ಯೂ ಬಗ್ಗೆ ಜನತೆ ಸಮಾಜದಲ್ಲಿ ಜಾಗೃತಿ ಮೂಡಿಸಬೇಕು. ಪ್ರತಿಯೊಬ್ಬರೂ ಸಾಧ್ಯವಾದರೆ 10 ಮಂದಿಗೆ ಈ ಬಗ್ಗೆ ತಿಳಿಸಬೇಕು ಎಂದು ಮೋದಿ ಮನವಿ ಮಾಡಿದ್ದಾರೆ.

4 thoughts on “ದೇಶದಾದ್ಯಂತ ಮಾರ್ಚ್ 22 ರಂದು ಜನತಾ ಕರ್ಪ್ಯೂ ಜಾರಿ – ಪ್ರಧಾನಿ ಮೋದಿ

  1. I pledge myself to follow Janata Curfew on 22nd March, 2020 from 7 am to 9 pm. And i shall cheer &salute every supporter at 5 pm for 5 minutes.

Leave a Reply

Your email address will not be published. Required fields are marked *

error: Content is protected !!