ಜಾಮಿಯಾ ಶೂಟೌಟ್: ಗನ್ ನೀಡಿದ ಕುಸ್ತಿಪಟು ಅಜೀತ್ ಅಂದರ್

ನವದೆಹಲಿ: ಜಾಮಿಯಾ ಮಿಲ್ಲಿಯಾ ಇಸ್ಲಾಮಿಯಾ ವಿಶ್ವಿವಿದ್ಯಾಲಯದ ಹೊರಗಡೆ ಪೌರತ್ವ ತಿದ್ದುಪಡಿ ಕಾಯ್ದೆ ವಿರೋಧಿ ಪ್ರತಿಭಟನಾಕಾರರ ಮೇಲೆ ಗುಂಡಿನ ದಾಳಿ ನಡೆಸಿದ್ದ ಅಪ್ರಾಪ್ತನಿಗೆ ಗನ್ ಪೂರೈಸಿದ್ದ ಕುಸ್ತಿಪಟುವನ್ನು ದೆಹಲಿ ಕ್ರೈಂ ಬ್ರಾಂಚ್ ಪೊಲೀಸರು ಸೋಮವಾರ ಬಂಧಿಸಿದ್ದಾರೆ.

ಅಪ್ರಾಪ್ತನಿಗೆ ಪಿಸ್ತೂಲ್ ಮಾರಾಟ ಮಾಡಿದ್ದ ಉತ್ತರ ಪ್ರದೇಶದ ಜೇವರ್​ ಸಮೀಪದ ಶಾಜಪುರ ಗ್ರಾಮದ ಕುಸ್ತಿಪಟು ಅಜೀತ್​(25) ನನ್ನು ಪೊಲೀಸರು ಬಂಧಿಸಿದ್ದಾರೆ. ಅಜಿತ್ ಉತ್ತರ ಪ್ರದೇಶ ವಿವಿಯಲ್ಲಿ ಬಿ.ಇಡಿ ಅಭ್ಯಾಸ ಮಾಡುತ್ತಿದ್ದ ಎನ್ನಲಾಗಿದೆ.

32 ಕೆ.ಜಿ. ವಿಭಾಗದ ಜೂನಿಯರ್​ ರೆಸ್ಟಲಿಂಗ್​ನಲ್ಲಿ ಚಾಂಪಿಯನ್​ ಆಗಿದ್ದ ಅಜಿತ್ ಹಿನ್ನೆಲೆ ಬಗ್ಗೆ ತನಿಖೆ ನಡೆಸುತ್ತಿದ್ದೇವೆ. ಆತನ ಬಂಧನದ ಬಗ್ಗೆ ಕಾನೂನಿನ ರಿತ್ಯಾ ಕ್ರಮ ಕೈಗೊಳ್ಳಲಾಗಿದೆ ಎಂದು ಶೂಟೌಟ್​ ಪ್ರಕರಣದ ತನಿಖಾ ತಂಡದ ಮುಖ್ಯಸ್ಥ ​ ತಿಳಿಸಿದ್ದಾರೆ.

Leave a Reply

Your email address will not be published. Required fields are marked *

error: Content is protected !!