ಉಡುಪಿಯಲ್ಲಿ ಘಮಘಮಿಸಿದ ಹಲಸು

ಉಡುಪಿ : ಎತ್ತ ನೋಡಿದರ್‍ತ ಜನಜಂಗುಳಿ , ಎಲ್ಲರೂ ತಿನ್ನೋದ್ರಲ್ಲೇ ಬ್ಯೂಸಿ. ಯೆಸ್ ಇದು ಹಲಸಿನ ಕರಾಮತ್ತು. ಒಂದು ಕಾಲದಲ್ಲಿ ಬಡವರ ಹಣ್ಣು ಎಂದೇ ಮೂಲೆ ಗುಂಪಾಗಿದ್ದ ಹಲಸು ಇಂದು ರಾಜನಂತೆ ತಲೆಯೆತ್ತಿ ನಿಂತಿದ್ದು, ಹಲಸಿನ ಉತ್ಪನ್ನಗಳಿಗೆ ಸಕತ್ ಡಿಮ್ಯಾಂಡ್ ಇತ್ತು. ಅಂದಹಾಗೇ ಹಲಸಿನ ಹಣ್ಣಿನ ವೆರೈಟಿ ವೆರೈಟಿ ಫುಡ್ ಎಲ್ಲಿತ್ತು ಅಂತಿರಾ. ದೊಡ್ಡನಗುಡ್ಡೆಯ ಪುಷ್ಪ ಹರಾಜು ಕೇಂದ್ರದ ಆವರಣದಲ್ಲಿ ನಡೆದ ಜಿಲ್ಲಾ ಮಟ್ಟದ ಹಲಸು ಮೇಳದ ಶ್ರೀಮಂತಿಕೆ ಇದಾಗಿತ್ತು. ತೋಟಗಾರಿಕೆ ಇಲಾಖೆ ವತಿಯಿಂದ ನಡೆದ ಹಲಸುಮೇಳ.

ಹಲಸು ಮೇಳ ಕಾರ್‍ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಜಿಲ್ಲಾ ಪಂಚಾಯತ್ ಅಧ್ಯಕ್ಷರಾದ ದಿನಕರ್ ಬಾಬು, ಇಂದಿನ ಮಕ್ಕಳಿಗೆ ಹಲಸಿನ ಮಹತ್ವ ತಿಳಿದಿಲ್ಲ, ಪೋಷಕರು ಇದರ ಮಹತ್ವ ಮತ್ತು ಉಪಯೋಗವನ್ನು ಮಕ್ಕಳಿಗೆ ತಿಳಿ ಹೇಳಬೇಕು, ಆರೋಗ್ಯಕ್ಕೆ ಪೂರಕವಾದ ಪೌಷ್ಠಿಕಾಂಶ ಹಲಸಿನಲ್ಲಿದೆ.  ತುಳುನಾಡಿನಲ್ಲಿ ಭೂತಾರಾಧನೆಯಂದು ಹಲಸನ್ನು ನೈವೇದ್ಯ ಉಪಯೋಗಿಸುತ್ತಾರೆ,  ಆದ್ದರಿಂದ ನಮ್ಮ ಸಂಸ್ಕೃತಿಯಲ್ಲಿ ಹಲಸಿಗೆ ಮಹತ್ವದ ಸ್ಥಾನವಿದೆ, ಎಲ್ಲರೂ ತಮ್ಮ ತಮ್ಮ ಮನೆಯಲ್ಲಿ ಹಲಸಿನ ಗಿಡವನ್ನು ಬೆಳೆಸಿ ಪೋಷಿಸುವ ಕೆಲಸ ಮಾಡಬೇಕು ಎಂದರು. ಕಾರ್‍ಯಕ್ರಮದಲ್ಲಿ ಜಿಲ್ಲಾ ಪಂ ಉಪಾಧ್ಯಕ್ಷೆ ಶಿಲಾ ಕೆ.ಶೆಟ್ಟಿ, ಸದಸ್ಯೆ ಗೀತಾಂಜಲಿ ಸುವರ್ಣ ಮತ್ತಿತರರು ಉಪಸ್ಥಿತರಿದ್ದರು.

 

ಹಲಸಿನ ಹಬ್ಬದಲ್ಲಿ ಬಾಯಿ ಚಪ್ಪರಿಸುವಂತೆ ಮಾಡಿದ ಅದೆಷ್ಟು ಬಗೆ ಬಗೆಯ ತಿನಿಸುಗಳು… ಹಲಸಿನ ಗಟ್ಟಿ, ಹಲ್ವ, ದೋಸೆ, ಕಡುಬು, ಪಾಯಸ,ಮುಲ್ಕ, ಬನ್ಸ್, ವಡೆ, ಪೋಡಿ, ಬೋಂಡಾ , ಕೇಸರಿಬಾತ್, ಬರ್ಫಿ, ಮಂಚೂರಿ, ಕಬಾಬ್, ಹಲಸಿನ ಬೀಜದ ಹೋಳಿಗೆ, ವಡೆ, ಪಕೋಡ, ಜಾಮೂನ್, ಐಸ್-ಕ್ರೀಮ್, ಹಪ್ಪಳ, ಚಿಪ್ಸ್, ಉಪ್ಪುಸೊಳೆ ಹೀಗೆ ಒಂದೇ ಎರಡೇ ಇವನ್ನೆಲ್ಲ ಸವಿಯಲು ಜನ ಮುಗಿ ಬಿದ್ದಿದ್ದರು. ಸ್ಟಾಲಿನಲ್ಲಿ ಹಲಸಿನ ವಿವಿಧ ತಿನಿಸುಗಳಿಗೆ ದಿನವಿಡೀ ಭಾರೀ ಬೇಡಿಕೆಯಿತ್ತು. ಅಂತೂ ಇಂತೂ  ಹಲಸಿನ ತಿನಿಸುಗಳಾದ ಇವುಗಳ ಮಾರಾಟಗಾರರಿಗೆ ಮಾತ್ರ ಭರ್ಜರಿ ವ್ಯಾಪಾರ.

 

ಹಲಸಿನ ತಿನಿಸುಗಳ ಸ್ಟಾಲುಗಳು ಮಾತ್ರವಲ್ಲದೆ, ಹಲಸಿನ ವಿವಿಧ ತಳಿಗಳ ಕಸಿಗಿಡಗಳ ಮತ್ತು ತರತರದ ಹಣ್ಣುಗಳ ಕಸಿಗಿಡಗಳನ್ನು ಮಾರುವ ಸ್ಟಾಲುಗಳಿದ್ದವು. ಹಲಸು ಮೇಳದಲ್ಲಿ 24 ಮಳಿಗೆಗಳಿದ್ದು,  ಹಾಸನ ಶಿವಮೊಗ್ಗ ಮತ್ತು ಉಡುಪಿ ಜಿಲ್ಲೆಯ ಇತರ ಭಾಗಳಿಂದ ರೈತರು ಬಂದು ಮಳಿಗೆಯಿಟ್ಟು , ಸಾಣೂರು, ಚಂದ್ರಪಲ್ಕೆ, ಸಕ್ಕರೆ ಬರ್ಕೆ ಹೀಗೆ ವಿವಿಧ ಬಗೆಯ ಹಲಸನ್ನು ಗ್ರಾಹಕರಿಗಾಗಿ ಕಡಿಮೆ ಬೆಲೆಯಲ್ಲೇ ಮಾರಾಟ ಮಾಡಿದರು.

 

 

 

ಕೆಲಸದ ಒತ್ತಡದಿಂದ ಸೋತವರಿಗೆ ವಿಕೆಂಡ್ ಮಾತ್ರ ಡಬಲ್ ಧಮಾಕವಾಗಿತ್ತು, ಮಳೆನೂ ಕಡಿಮೆಯಿದ್ದೂ ಮಕ್ಕಳಿಗೂ ಕೂಡ ಭರ್ಜರಿ ಔಟಿಂಗ್ ಆಂಡ್ ಸಕತ್ ಬ್ಯಾಟಿಂಗ್ ಅನ್ನುವಂತಿತ್ತು ಈ ಹಲಸಿನ ಮೇಳ. ಒಟ್ಟಾರೆ ವಯಸ್ಸಿನ ಅಂತರವಿಲ್ದೇ ಎಲ್ಲರೂ ಮೇಳದಲ್ಲಿ ಭಾಗವಹಿಸಿ, ಹಲಸಿನ ವಿವಿಧ ಖ್ಯಾದ್ಯ ಸವಿದು ಮನೆ ತೆರಳುವಾಗ ಹಲಸಿನ ಗಿಡ ಖರೀದಿಸಿದರು.

Leave a Reply

Your email address will not be published. Required fields are marked *

error: Content is protected !!