“ಜಾನ್ ಹೇ ಥೋ ಜಹಾನ್ ಹೇ” ಮೋದಿ ಹೇಳಿದ ಕಿವಿ ಮಾತು
ನವದೆಹಲಿ (ಉಡುಪಿ ಟೈಮ್ಸ್ ವರದಿ ): ಕೊರೋನಾ ವಿರುದ್ಧ ಹೋರಾಡಲು ಭರದಲ್ಲಿ ಎಲ್ಲರೂ ಒಗ್ಗಾಟಗಬೇಕಿದೆ. ಹಾಗಾಗಿ ನಾವು ಸಾಮಾಜಿಕ ಅಂತರವನ್ನು ಕಾಪಾಡಿಕೊಳ್ಳಬೇಕಾಗಿದೆ. ಕೊರೋನಾ ನಿಯಂತ್ರಣಕ್ಕೆ ಕೇಂದ್ರ ಸರ್ಕಾರ ಸನ್ನದ್ದವಾಗಿದೆ. ಆದರೆ ದೇಶದ ಜನತೆ ಕೈಜೋಡಿಸಬೇಕಾಗಿದೆಎಂದು ಕೈ ಮುಗಿದು ಪ್ರಾರ್ಥಿಸಿ ಕೊಳ್ಳುತ್ತಿದ್ದೇನೆ ಎಂಬುದಾಗಿ ಪ್ರಧಾನಿ ಜನರಲ್ಲಿ ಮನವಿ ಮಾಡಿದರು
ಮನೆಯಲ್ಲಿ ಇರಿ ಮನೆಯಲ್ಲಿ ಇರಿ ಹಾಗು ಮನೆಯಲ್ಲಿಯೇ ಇರಿ
1. ಸುಳ್ಳು ವದಂತಿಗಳನ್ನು ನಂಬಬೇಡಿ ಹಾಗು ಹಬ್ಬಿಸಬೇಡಿ
2. ಕರೋನದ ವಿರುದ್ಧ ಹೋರಾಟದ ಬಗ್ಗೆ ಕ್ರಿಯೇಟಿವ್ ಆಗಿ ಯೋಚನೆಗಳನ್ನು ಮಾ
3. ವೈದ್ಯರ ಸಲಹೆ ಇಲ್ಲದೆ ಯಾವುದೇ ಔಷಧಿಗಳನ್ನು ತೆಗೆದುಕೊಳ್ಳಬೇಡಿ
4. ಮನೆಗಳಲ್ಲಿ ಕುಳಿತು ನಿಮ್ಮ ಕುಟುಂಬದ ಬಗ್ಗೆ ಯೋಚಿಸಿ
5. ದೇಶದಲ್ಲಿ ಎಲ್ಲಿ ಇದ್ದಿರೋ ಅಲ್ಲೇ ಇರಿ
6. ಇಂತಹ ಪರಿಸ್ಥಿಯಲ್ಲಿ ನಮಗಾಗಿ ಶ್ರಮಿಸುತ್ತಿರುವ ವೈದ್ಯರು , ನರ್ಸ್ , ಅರೆ ವೈದ್ಯಕೀಯ ಸಿಬ್ಬಂದಿಗಳು , ಪೊಲೀಸರು , ಅಂಬ್ಯುಲೆನ್ಸ್ ಚಾಲಕರು , ದಾದಿಯರು, ಪತ್ರಕರ್ತರ ಬಗ್ಗೆ ಮನೆಯಲ್ಲಿಯೇ ಪ್ರಾರ್ಥನೆ ಮಾಡಿ.
7. ನಿಮ್ಮ ಜೀವ ನಮಗೆ ಅವಶ್ಯಕ ಹಾಗಾಗಿ ಮನೆಯಲ್ಲಿಯೇ ಇರಿ 8. ಯಾರು ರಸ್ತೆಗೆ ಇಳಿಯಬೇಡಿ
9. ಜನರು ಮಾಡಬೇಕಾಗಿರುವುದು 3 ವಿಚಾರ ಮನೆಯಲ್ಲಿ ಇರಿ, ಮನೆಯಲ್ಲಿ ಇರಿ ಹಾಗು ಮನೆಯಲ್ಲಿಯೇ ಇರಿ .