ರಾಜ್ಯದಲ್ಲಾಗಿರುವ ರಾಜಕೀಯ ಬಿಕ್ಕಟ್ಟಿಗೆ ಬಿಜೆಪಿ ನೇರ ಹೊಣೆ – ಐವನ್ ಡಿಸೋಜ

ಮಂಗಳೂರು: ರಾಜ್ಯದಲ್ಲಾಗಿರುವ ರಾಜಕೀಯ ಬಿಕ್ಕಟ್ಟಿಗೆ ಬಿಜೆಪಿ ನೇರ ಹೊಣೆಯಾಗಿದೆ. ಬಿಜೆಪಿಯ ಕೇಂದ್ರದ ನಾಯಕರು ಆಪರೇಷನ್ ಕಮಲಕ್ಕೆ ಪ್ಲಾನ್ ಹಾಕಿದ್ದು, ಸತತ ಆರು ಬಾರಿ ಸಮ್ಮಿಶ್ರ ಸರ್ಕಾರವನ್ನ ಕೆಡವಲು ಬಿಜೆಪಿ ಹೊರಟಿದೆ ಆದ್ರೆ ಈ ಬಾರಿಯೂ ನಮ್ಮ ಸಮ್ಮಿಶ್ರ ಸರ್ಕಾರವನ್ನ ಕೆಡವಲು ಸಾಧ್ಯವಿಲ್ಲ.

ಸರ್ಕಾರವನ್ನ ಅಸ್ಥಿರಗೊಳಿಸಲು ಬಿಜೆಪಿಯು ಪ್ರಯತ್ನ ಮಾಡುತ್ತಿದೆ. ಇದು ಪ್ರಜಾಪ್ರಭುತ್ವದ ಕಗ್ಗೊಲೆ. ಬಿಜೆಪಿಯ ನೈಜಗುಣ ಏನೆಂದು ಶಾಸಕರನ್ನು ಸ್ಪೆಶಲ್ ಫ್ಲೈಟ್‌ನಲ್ಲಿ ಕರೆದು ಕೊಂಡು ಹೋಗುವಾಗ್ಲೇ ಗೊತ್ತಾಗಿದೆ. ಹಾಗಾಗಿ ರಾಜ್ಯದಲ್ಲಿ ಲ್ಯಾಂಡ್ ಮಾರ್ಕ್ ಜಡ್ಜ್‌ಮೆಂಟ್‌ನ್ನು ಸ್ಪೀಕರ್ ಅವರು ಕೊಡಬೇಕು.

ಈ ಮೂಲಕ ಬಿಜೆಪಿಯ ನೈಜ ಬಣ್ಣವನ್ನು ಕರ್ನಾಟಕದ ಜನತೆಗೆ ತೋರಿಸಿಕೊಡಬೇಕು. ಬಿಜೆಪಿಯ ಆಪರೇಷನ್ ಕಮಲದ ಬಗ್ಗೆ ಹೋರಾಟ ಮಾಡುತ್ತೇವೆ. ನಮ್ಮ ಶಾಸಕರು ರಾಜೀನಾಮೆಯನ್ನ ಹಿಂಪಡೆಯುತ್ತಾರೆ ಎಂಬ ವಿಶ್ವಾಸ ನಮಗಿದೆ ಎಂದು ಮಂಗಳೂರಿನಲ್ಲಿ ಮುಖ್ಯಮಂತ್ರಿಗಳ ಸಂಸದೀಯ ಕಾರ್ಯದರ್ಶಿ ಮತ್ತು ವಿಧಾನ ಪರಿಷತ್ ಸದಸ್ಯರಾದ ಐವನ್ ಡಿಸೋಜ ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ.

Leave a Reply

Your email address will not be published. Required fields are marked *

error: Content is protected !!