ಆರೋಗ್ಯದ ದೃಷ್ಟಿಯಿಂದ ದ್ರಾಕ್ಷಿ ಸೇವನೆ ಮಾಡುವುದು ಅತಿ ಉತ್ತಮ
ದ್ರಾಕ್ಷಿ ಸೇವನೆ ದೇಹಕ್ಕೆ ಅಗತ್ಯವಾದ ಪೋಷಕಾಂಶಗಳನ್ನು ಒದಗಿಸುತ್ತದೆ, ಅಷ್ಟೇ ಅಲ್ದೆ ಮೈಗ್ರೇನ್ ಸಮಸ್ಯೆ ಹಾಗೂ ಸಕ್ಕರೆ ಕಾಯಿಲೆ ನಿಯಂತ್ರಿಸಲು ದ್ರಾಕ್ಷಿ ಸೇವನೆ ಹೇಗೆ ಸಹಕಾರಿ ಅನ್ನೋದನ್ನ ಮುಂದೆ ನೋಡಿ.
ಒಂದು ಕಪ್ ದ್ರಾಕ್ಷಿಯಲ್ಲಿ 62 ಕ್ಯಾಲೋರಿ, 1.3 ಗ್ರಾಂ ಫ್ಯಾಟ್ ಹಾಗೂ 15 ಗ್ರಾಂ ಶುಗರ್ ಇರುತ್ತದೆ. ಇದನ್ನು ಸೇವಿಸುವುದರಿಂದ ಶುಗರ್ ಲೆವಲ್ ಕಂಟ್ರೋಲ್‍ನಲ್ಲಿ ಇರುತ್ತದೆ. ಇದರ ಹೊರತಾಗಿ ಇದರಲ್ಲಿ 1.8 ಮಿಲಿಗ್ರಾಂ ಸೋಡಿಯಂ, ಶೇ.3ರಷ್ಟು ಡೈಯಟ್ರಿ ಫೈಬರ್, ಶೇ.5ರಷ್ಟು ಪೋಟ್ಯಾಶಿಯಂ, ಶೇ.5ರಷ್ಟು ಕಾರ್ಬೋಹೈಡ್ರೆಟ್, 0.6ಗ್ರಾಂ ಪ್ರೋಟಿನ್, ಶೇ.1ರಷ್ಟು ವಿಟಮಿನ್ ಎ, ಶೇ.6ರಷ್ಟು ವಿಟಮಿನ್ ಸಿ, ಶೇ.1ರಷ್ಟು ಕ್ಯಾಲಿಶಿಯಂ, ಶೇ.1ರಷ್ಟು ಐರನ್, ಶೇ.1ರಷ್ಟು ಮ್ಯಾಗ್ನೇಶಿಂ ಹಾಗೂ ಶೇ.5ರಷ್ಟು ವಿಟಮಿನ್ ಬಿ-6 ಅಂಶಗಳು ಇರುತ್ತದೆ.
ಡಯಾಬಿಟಿಸ್: ದ್ರಾಕ್ಷಿ ಸಿಹಿ ಆಗಿರುವುದರಿಂದ ಡಯಾಬಿಟಿಸ್ ಸಮಸ್ಯೆಯಿಂದ ಬಳಲುತ್ತಿರುವವರು ತಿನ್ನಲು ಹಿಂದೇಟು ಹಾಕುತ್ತಾರೆ. ಈ ಕಲ್ಪನೆ ತಪ್ಪು. ದ್ರಾಕ್ಷಿ ಸೇವನೆಯಿಂದ ಬ್ಲಡ್ ಶುಗರ್ ಲೆವಲ್ ಕಂಟ್ರೋಲ್‍ನಲ್ಲಿ ಇರುವುದಕ್ಕೆ ಸಹಾಯ ಮಾಡುತ್ತದೆ. ಹಾಗಾಗಿ ಡಯಾಬಿಟಿಸ್ ಇರುವವರು ದ್ರಾಕ್ಷಿಯನ್ನು ವೈದ್ಯರ ಸಲಹೆ ಮೇರೆಗೆ ಮಿತ ಪ್ರಮಾಣದಲ್ಲಿ ಸೇವಿಸಬಹುದು.
ಮೈಗ್ರೇನ್: ನಿಮಗೆ ಮೈಗ್ರೇನ್ ಇದ್ದರೆ ಒಂದು ಗ್ಲಾಸ್ ದ್ರಾಕ್ಷಿ ರಸವನ್ನು ಕುಡಿಯಬೇಕು. ಇದರಿಂದ ಮೈಗ್ರೇನ್ ಕಡಿಮೆಯಾಗುತ್ತದೆ. ದಿನನಿತ್ಯ ದ್ರಾಕ್ಷಿ ರಸದ ಸೇವನೆಯಿಂದ ಒತ್ತಡವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ.
ಸ್ತನ ಕ್ಯಾನ್ಸರ್: ಸಂಶೋಧನೆ ಪ್ರಕಾರ, ದಿನ 1 ಕಪ್ ದ್ರಾಕ್ಷಿ ಸೇವಿಸುವುದರಿಂದ ಸ್ತನದ ಕ್ಯಾನ್ಸರ್ ಶೇ.50ರಷ್ಟು ಕಡಿಮೆ ಆಗುತ್ತದೆ. ಇದರ ಹೊರತಾಗಿ ಹೃದಯದ ಸಮಸ್ಯೆಯನ್ನು ಕೂಡ ದೂರ ಮಾಡುತ್ತದೆ.
ರಕ್ತದ ಕೊರತೆ: ದ್ರಾಕ್ಷಿಯಲ್ಲಿ ಐರನ್ ಅಂಶ ಹೆಚ್ಚು ಇರುತ್ತದೆ. ಇದನ್ನು ಸೇವಿಸುವುದರಿಂದ ರಕ್ತದ ಕೊರತೆಯನ್ನು ಕಡಿಮೆ ಮಾಡುತ್ತದೆ. ಎನಿಮಿಯಾ ಇರುವವರು 1 ಗ್ಲಾಸ್ ದ್ರಾಕ್ಷಿ ಜ್ಯೂಸಿಗೆ 2 ಚಮಚ ಜೇನು ತುಪ್ಪ ಬೆರೆಸಿ ದಿನನಿತ್ಯ ಕುಡಿಯಬೇಕು. ಇದರಿಂದ ದೇಹದಲ್ಲಿ ಹಿಮೋಗ್ಲೋಬಿನ್ ಹೆಚ್ಚುತ್ತದೆ.
ಟಿಬಿ ಹಾಗೂ ಬ್ಲಡ್ ಇಂಫೆಕ್ಷನ್: ದ್ರಾಕ್ಷಿಯಲ್ಲಿ ಗ್ಲೂಕೋಸ್, ಮ್ಯಾಗ್ನೀಶಿಯಂ ಹಾಗೂ ಸೀಟ್ರಿಕ್ ಆ್ಯಸಿಡ್ ಅಂಶಗಳು ಇರುತ್ತದೆ. ಇದರಿಂದ ಟಿಬಿ ಹಾಗೂ ಬ್ಲಡ್ ಇಂಫೆಕ್ಷನ್ ಸಮಸ್ಯೆಯಿಂದ ದೂರ ಇರಿಸುತ್ತದೆ.
ಗ್ಲೋಯಿಂಗ್ ಸ್ಕೀನ್: ನಿಮ್ಮ ಮುಖದಲ್ಲಿ ಸುಕ್ಕು ಇದ್ದರೆ ದ್ರಾಕ್ಷಿಯ ಫೇಸ್ ಪ್ಯಾಕ್ ಹಾಕಿಕೊಳ್ಳುವುದರಿಂದ ತ್ವಚ್ಛೆಯ ಸಮಸ್ಯೆ ದೂರವಾಗುತ್ತದೆ. ಇದಕ್ಕಾಗಿ ದ್ರಾಕ್ಷಿ, ಅವಕಾಡೋ ಪಲ್ಪ್, 2 ಚಮಚ ಜೇನು ಹಾಗೂ ರೋಸ್ ವಾಟರ್ ಎಲ್ಲವನ್ನು ಮಿಶ್ರಣ ಮಾಡಿ. ಬಳಿಕ ಅದನ್ನು ಮುಖಕ್ಕೆ ಹಾಕಿ 15 ನಿಮಿಷದ ಬಿಡಬೇಕು. ಬಳಿಕ ನೀರಿನಿಂದ ಮುಖ ತೊಳೆದರೆ ನಿಮ್ಮ ಮುಖದಲ್ಲಿ ಗ್ಲೋ ಕಾಣಿಸುತ್ತದೆ.
ಸನ್‍ಬರ್ನ್: ಬೇಸಿಗೆಯಲ್ಲಿ ಸನ್‍ಬರ್ನ್ ಸಮಸ್ಯೆ ಹೆಚ್ಚು ಕಾಡುತ್ತಿರುತ್ತದೆ. ದ್ರಾಕ್ಷಿ ಸೇವಿಸುವುದರಿಂದ ಸನ್‍ಬರ್ನ್ ಸಮಸ್ಯೆ ಕಡಿಮೆಯಾಗುತ್ತದೆ. ಡಯಟ್ ವೇಳೆ ದ್ರಾಕ್ಷಿ ಸೇವನೆ ಮತ್ತು ದಿನನಿತ್ಯ ಇದರ ರಸದಿಂದ ಮುಖವನ್ನು ಮಸಾಜ್ ಮಾಡಿದರೆ ಸನ್‍ಬರ್ನ್ ಸಮಸ್ಯೆ ದೂರವಾಗುತ್ತದೆ.