ಖಾದಿ ಮತ್ತು ಗ್ರಾಮೋದ್ಯೋಗ ಆಯೋಗದಿಂದ ಸರ್ಟಿಫಿಕೇಟ್ ವಿತರಣೆ

ಉಡುಪಿ : ಖಾದಿ ಮತ್ತು ಗ್ರಾಮೋದ್ಯೋಗ ಆಯೋಗದಿಂದ ಸರ್ಟಿಫಿಕೇಟ್ ವಿತರಣೆ 
ದೇಶದಲ್ಲಿ ಸ್ವ ಉದ್ಯೋಗ ಮಾಡಲು ಬಹಳಷ್ಟು ಅವಕಾಶಗಳಿವೆ. ಸ್ವಉದ್ಯೋಗ ಮಾಡಲು ಸರಕಾರಗಳಿಂದ ಬಹಳಷ್ಟು ಸೌಲಭ್ಯಗಳು ಕೂಡ ಸಿಗುತ್ತವೆ.

ಸ್ವ ಉದ್ಯಮ ಮಾಡುವುದರಿಂದ ಬಹಳಷ್ಟು ಮಂದಿಗೆ ಉದ್ಯೋಗ ಮಾಡಲು ಅವಕಾಶ ಸಿಗುತ್ತದೆ. ಇದರಿಂದ ದೇಶ ಅಭಿವೃದ್ಧಿ ಹೊಂದುತ್ತದೆ ಎಂದು ಖಾದಿ ಮತ್ತು ಗ್ರಾಮೋದ್ಯೋಗ ಆಯೋಗ ಉಡುಪಿ ವಲಯದ ಉಪ ತರಬೇತುದಾರರಾದ ಪುಷ್ಪಲತಾ ಹೆಗಡೆ ತಿಳಿಸಿದರು.

ಉಡುಪಿ ಕಿದಿಯೂರು ಹೊಟೇಲ್ ಸಭಾಂಗಣದಲ್ಲಿ ಸಿಲ್ಕ್ ಶೇರ್ ತರಬೇತು ಕಾರ್ಯಾಗಾರದಲ್ಲಿ ಖಾದಿ ಮತ್ತು ಗ್ರಾಮೋದ್ಯೋಗ ಉಡುಪಿ ವಲಯದ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಮಾತನಾಡಿದರು.

ಖಾದಿ ಮತ್ತು ಗ್ರಾಮೋದ್ಯೋಗ ಆಯೋಗ ಉಡುಪಿ ವಲಯದ ನೇತೃತ್ವದಲ್ಲಿ ಕಳೆದ ಮೂರು ತಿಂಗಳುಗಳಿಂದ ಸ್ವ ಉದ್ಯೋಗ ಮಾಡುವವರಿಗೆ ತರಬೇತಿ ಮತ್ತು ಪ್ರೋತ್ಸಾಹ ನೀಡಲಾಗಿತ್ತು. ಸೂಕ್ಷ್ಮ, ಲಘು ಮತ್ತು ಮಧ್ಯಮ ಉದ್ಯಮಗಳನ್ನು ಮಾಡುವವರಿಗೆ ತರಬೇತಿ ನೀಡಿ  ಸಾಲದ ಸರ್ಟಿಫಿಕೇಟ್ಗಳನ್ನು ನೀಡುವ ಭರವಸೆ ನೀಡಲಾಗಿತ್ತು.


ಖಾದಿ ಮತ್ತು ಗ್ರಾಮೋದ್ಯೋಗ ಆಯೋಗ ಉಡುಪಿ ವಲಯದ ಉದ್ಯೋಗ ಸಂಬಂಧಿತ ವೃತ್ತಿಪರ ತರಬೇತುದಾರರಾದ ಮೊಹಮ್ಮದ್ ಅನ್ಸಾರ್ ರವರು ತರಬೇತಿ ಹೊಂದಿದವರಿಗೆ ಸರ್ಟಿಫಿಕೇಟ್ ವಿತರಿಸಿ ಶುಭ ಹಾರೈಸಿದರು.

ವೇದಿಕೆಯಲ್ಲಿ ತರಬೇತುದಾರರಾದ ಆಲ್ಫೋನ್ಸ್ ಮಿನೇಜಸ್, ಸಂತೋಷ್, ಜೈಸನ್ ಪಿಂಟೊ, ಶಿವರಾಜ್, ಆತಿಫ್, ಹರೀಶ್, ಸಂದೀಪ್, ನಾಗರಾಜ ಉಪಸ್ಥಿತರಿದ್ದರು.
 300 ಕ್ಕೂ ಅಧಿಕ ಸ್ವ ಉದ್ಯೋಗ ಮಾಡುವವರಿಗೆ ಸರ್ಟಿಫಿಕೇಟ್ ಅನ್ನು ಈ ಸಂದರ್ಭದಲ್ಲಿ ಅತಿಥಿಗಳು ವಿತರಣೆ ವಿತರಿಸಿದರು.

ತರಬೇತುದಾರ ಆತಿಫ್ ಸ್ವಾಗತಿಸಿದರೆ, ಹರೀಶ್ ಧನ್ಯವಾದ ಸಮರ್ಪಿಸಿದರು. ಡಾ ಸತೀಶ್ ರಾವ್ ಕಾರ್ಯಕ್ರಮ ನಿರ್ವಹಿಸಿದರು.

Leave a Reply

Your email address will not be published. Required fields are marked *

error: Content is protected !!