ಬ್ಯಾಂಕಿಂಗ್ ಕ್ಷೇತ್ರದ ಅಭಿವೃದ್ಧಿಗೆ ಶ್ರಮಿಸಲು ಸೂಚನೆ: ಚೀಫ್ ಮ್ಯಾನೇಜರ್ ರುದ್ರೇಶ್

ಉಡುಪಿ: ಜಿಲ್ಲೆಯಲ್ಲಿ 20018-19ರ ತ್ರೈಮಾಸಿಕ ಅವಧಿಯಲ್ಲಿ23827 ಕೋಟಿ ರೂ. ಡೆಪಾಟಿಸಿಟ್ ಆಗಿದ್ದು, ವಾರ್ಷಿಕ 6.54 ಶೇ. ಬೆಳವಣಿಗೆ ದಾಖಲಾಗಿದೆ. 11,816 ಕೋಟಿ ಸಾಲ ವಿತರಿಸಿ 5.02% ವೃದ್ದಿ ದಾಖಲಾಗಿದೆ ಎಂದು ಸಿಂಡಿಕೇಟ್ ಬ್ಯಾಂಕ್‌ನ ರೀಜಿನಲ್ ಮ್ಯಾನೇಜರ್ ಸುಜಾತ ಹೇಳಿದರು.

ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ನಡೆದ ಜಿಲ್ಲಾ ಮಟ್ಟದ ಪರಿಶೀಲನಾ ಸಮಿತಿ ಸಭೆಯಲ್ಲಿ ಅವರು ಮಾತನಾಡಿ,2018-19 ಮೇ ಸಾಲಿನ 4ನೇ ತ್ರೈಮಾಸಿಕ ಅಂತ್ಯದಲ್ಲಿ 8705.63 ಕೋಟಿ ವಾರ್ಷಿಕ ಗುರಿಯಲ್ಲಿ 6515 ಕೋಟಿ ರೂ. ಲೋನ್ ವಿತರಣೆಯಾಗಿದ್ದು 74.84 ಶೇಕಡಾ ಪ್ರಗತಿ ಸಾಧಿಸಿದೆ. ಈ ಪೈಕಿ 2325 ಕೋಟಿರೂ ಕೃಷಿ ಕ್ಷೇತ್ರದಲ್ಲಿ, ಅತೀ ಸಣ್ಣ, ಸಣ್ಣ ಮತ್ತು ಮಧ್ಯಮ ಉದ್ಯಮ ಕ್ಷೇತ್ರಕ್ಕೆ 1900 ಕೋಟಿ . ಶಿಕ್ಷಣ ಕ್ಷೇತ್ರಕ್ಕೆ 110ಕೋಟಿರೂ. ವಸತಿಕ್ಷೇತ್ರಕ್ಕೆ 510ಕೋಟಿ ಹಾಗೂ ಇತರ ಕ್ಷೇತ್ರಕ್ಕೆ 670 ಕೋಟಿರೂ. ವಿತರಣೆಯಾಗಿದೆ. ಇನ್ನು ಆದ್ಯತಾ ವಲಯಕ್ಕೆ 7505.63ಕೋಟಿ ರೂ.ವಾರ್ಷಿಕ ಗುರಿಯನ್ನು ಹೊಂದಿದ್ದು 5515 ಕೋಟಿರೂ. ವಿತರಣೆಯಾಗಿದೆ ಎಂದು ಮಾಹಿತಿ ನೀಡಿದರು.

ಲೀಡ್ ಡಿಸ್ಟ್ರಿಕ್ ಚೀಫ್ ಮ್ಯಾನೇಜರ್ ರುದ್ರೇಶ್ ಡಿ.ಸಿ ಮಾತನಾಡಿ, 18 ಬ್ಯಾಂಕ್‌ಗಳು ಧನಾತ್ಮಕ ಬೆಳವಣಿಗೆ ಹೊಂದಿದ್ದು, ಕುಂಠಿತಗೊಂಡಿರುವ 13 ಬ್ಯಾಂಕ್‌ಗಳ ಸಿಡಿ ಪ್ರಮಾಣದ ಬೆಳವಣಿಗೆಗೆ ಸಲಹೆ ನೀಡಿ, ಸಿಡಿ ಪ್ರಮಾಣವನ್ನು ಹೆಚ್ಚಿಸಲು ಶ್ರಮಿಸುವಂತೆ ಸೂಚನೆ ನೀಡಿದರು. ಪ್ರಧಾನಮಂತ್ರಿ ಉದ್ಯೋಗ ಸೃಷ್ಟಿ ಯೋಜನೆ ಕಾರ್ಯಕ್ರಮದಡಿಯಲ್ಲಿ ಮಾರ್ಚ್ 2019ರ ಬ್ಯಾಂಕ್‌ಗೆ 296 ಅಪ್ಲೀಕೇಶನ್‌ಗಳು ಬಂದಿದ್ದು, 103 ಅಪ್ಲೀಕೇಶನ್‌ಗಳನ್ನು ಮಂಜೂರು ಮಾಡಲಾಗಿದೆ ಎಂದರು.

Leave a Reply

Your email address will not be published. Required fields are marked *

error: Content is protected !!