ಉಡುಪಿ: ಹೊರ ರಾಜ್ಯ, ಜಿಲ್ಲೆಗಳಿಂದ ತಪ್ಪಿಸಿಕೊಂಡು ಬಂದವರ ಮಾಹಿತಿ ನೀಡಲು ಜಿಲ್ಲಾಡಳಿತ ಸೂಚನೆ
ಉಡುಪಿ: ಜಿಲ್ಲೆಯಲ್ಲಿನ ಗಡಿಭಾಗಗಳನ್ನು ಈಗಾಗಲೇ ಬಂದ್ ಮಾಡಿ ಬೇರೆ ಜಿಲ್ಲೆಗಳನ್ನು ಸಂಪರ್ಕಿಸುವ ಚೆಕ್‌ಪೋಸ್ಟ್ ಗಳಲ್ಲಿ ದಿನದ 24 ಗಂಟೆ ಬಂದೋಬಸ್ತೆ ಮಾಡಲಾಗಿದೆ. ತೀರ ತುರ್ತು ವೈದ್ಯಕೀಯ ಅಗತ್ಯದ ವಾಹನ ಹಾಗೂ ಅಗತ್ಯ ವಸ್ತಗಳ ಸಾಗಾಟ ವಾಹನಗಳನ್ನು ಮಾತ್ರ ಬಿಡಲಾಗುತ್ತಿದೆ. ಆದರೆ ಮುಂಬೈ , ಬೆಂಗಳೂರು , ಭಟ್ಕಳ, ಹೈದ್ರಾಬಾದ್, ಮೈಸೂರು ಮುಂತಾದ ಕಡೆಗಳಿಂದ ಈ ಚೆಕ್ ಪೋಸ್ಟ್ಗಳನ್ನು ತಪ್ಪಿಸಿ ಜನರು ಒಳ ಬರುತ್ತಿರುವುದು ಜಿಲ್ಲಾಡಳಿತದ ಗಮನಕ್ಕೆ ಬಂದಿದೆ.
ಅಂತವರನ್ನು ಗುರುತಿಸಿ Quarantine ನಲ್ಲಿ ಇಡಬೇಕಾದ ಅವಶ್ಯಕತೆ ಇದೆ. ಆದ್ದರಿಂದ ಜಿಲ್ಲೆಯ ಸಾರ್ವಜನಿಕರಲ್ಲಿ ವಿನಂತಿಸುವುದೇನಂದರೆ ಈ ತರಹ ಗಡಿ ತಪ್ಪಿಸಿ ದಿನಾಂಕ:01-04-2020 ರ ನಂತರ ಒಳ ಬಂದಿರುವವರ ಬಗ್ಗೆ ವಿವಿರದೊಂದಿಗೆ (ವಿಳಾಸ, ಮೊಬೈಲ್ ನಂ, ಬಂದ ದಿನಾಂಕ, ಎಲ್ಲಿಂದ ಬಂದಿದ್ದಾರೆ ) ಮಾಹಿತಿಯನ್ನು ಈ ಕೆಳಕಂಡ ಅಧಿಕಾರಿಗಳಿಗೆ ಅವರ ಮೊಬೈಲ್ ನಂ. ಗಳಿಗೆ ನೀಡಲು ಅಥವಾ Whatsapp ಮೂಲಕ ಕಳುಹಿಸಲು ಸಾರ್ವಜನಿಕರಲ್ಲಿ ಕೋರಲಾಗಿದೆ. ಅಂತವರನ್ನು ವೈದ್ಯಕೀಯ ತಪಾಸಣೆಗೆ ಒಳಪಡಿಸಿ Quarantine ನಲ್ಲಿ ಇಡಲು ಕ್ರಮಕೈಗೊಳ್ಳಲಾಗುವುದು. ಸಾರ್ವಜನಿಕರಲ್ಲಿ ಜಿಲ್ಲಾಡಳಿತದೊಂದಿಗೆ ಸಹಕರಿಸಲು ಕೋರಿದೆ.
1.ಚಂದ್ರಶೇಖರ್ ನಾಯ್ಕ, ಉಪನಿರ್ದೇಶಕರು, ಕೃಷಿ ಇಲಾಖೆ, ಉಡುಪಿ.-ಮೊ-8277932501
2.ಕೃಷ್ಣ ಹೆಬೂರ್, ಕಾರ್ಯನಿರ್ವಾಹಕ ಇಂಜಿನಿಯರ್, KRIDL, ಉಡುಪಿ ಮೊ-9449534792
3, ರೋಶನ್ ಕುಮಾರ್ ಶೆಟ್ಟಿ, ಸಹಾಯಕ ನಿರ್ದೇಶಕರು, ಯೋಜನಾ ಮತ್ತು ಕ್ರೀಡಾ ಇಲಾಖೆ, ಉಡುಪಿ ಮೊ-9845432303
ಕೋವಿಡ್-19 ಗೆ ಸಂಬಂಧಿಸಿದಂತೆ ಜಿಲ್ಲೆ ಪ್ರಜ್ಞಾವಂತ ನಾಗರೀಕರ
ಸಹಕಾರದೊಂದಿಗೆ ರೋಗ ಹರಡುವುದನ್ನು ತಡೆಗಟ್ಟುವುದರಲ್ಲಿ ಆದಷ್ಟು ಮಟ್ಟಿಗೆ ಪ್ರಗತಿಯನ್ನು ಕಂಡಿದ್ದೇವೆ. ಆದರೆ ನಾವು ಇನ್ನೂ ಕೂಡ ಜಾಗೃತರಾಗಿ ಲಾಕ್‌ಡೌನ್ ಅನ್ನು ಪಾಲಿಸುವ ಅಗತ್ಯತೆ ಇದೆ. ಕೆಲವಷ್ಟು ಜನ ಕೆಲಸವಿಲ್ಲದಿದ್ದರೂ ಹೊರಗಡೆ ತಿರುಗಾಡುವುದು ಲಾಕ್ಡೌನ್ ಮೂಲ ಉದ್ದೇಶವನ್ನು ಅರಿತುಕೊಳ್ಳದೆ ಅದನ್ನು ದಿಕ್ಕರಿಸುವುದು ಕಂಡುಬಂದಿದೆ. ಈ ಬಗ್ಗೆ ಕಾನೂನು ಕ್ರಮಗಳನ್ನು ತೆಗೆದುಕೊಂಡು 413 ಕ್ಕೂ ಹೆಚ್ಚು ವಾಹನಗಳನ್ನು ಮುಟ್ಟುಗೋಲು ಹಾಕಿಕೊಳ್ಳಲಾಗಿದೆ.