ಇಂದ್ರಾಳಿ ರೈಲ್ವೇ ನಿಲ್ದಾಣ: ಇಬ್ಬರ ಶಂಕಿತ ಉಗ್ರರ ಬಂಧನ
ಉಡುಪಿ: ಇಂದು ನಸುಕಿನ ವೇಳೆ ಖಚಿತ ಮಾಹಿತಿಯಂತೆ ಇಂದ್ರಾಳಿ ರೈಲ್ವೇ ನಿಲ್ದಾಣದಿಂದ ಇಬ್ಬರು ಶಂಕಿತ ಉಗ್ರರನ್ನು ಬಂಧಿಸಿ ಅಜ್ಞಾತ ಸ್ಥಳಕ್ಕೆ ವಿಚಾರಣೆಗೆ ಕರೆದೊಯ್ಯಲಾಗಿದೆಂದು ತಿಳಿದುಬಂದಿದೆ.
ತಮಿಳುನಾಡಿನಲ್ಲಿ ಪೊಲೀಸ್ ಅಧಿಕಾರಿ ಹತ್ಯೆಗೈದಿದ್ದ ಉಗ್ರರು ಕೇರಳ ಮೂಲಕ ಕರ್ನಾಟಕ ಕರಾವಳಿಯಲ್ಲಿ ಬೀಡು ಬಿಟ್ಟಿರುವ ಸಾಧ್ಯತೆಯೂ ಇದೆ,ಈ ನಿಟ್ಟಿನಲ್ಲಿ ತನಿಖಾ ತಂಡ ಈ ಭಾಗದಲ್ಲಿ ಶೋಧ ಕಾರ್ಯ ಮುಂದುವರಿಸಿದ್ದಾರೆನ್ನಲಾಗಿದೆ. ಜ 8 ರಂದು ಕಲಿಯಿಕ್ಕಾವಿಲ ಚೆಕ್ ಪೋಸ್ಟ್ ಉಗ್ರರ ಗುಂಡಿಗೆ ಬಲಿಯಾಗಿದ್ದ ಪೊಲೀಸ್ ಅಧಿಕಾರಿ ವಿಲ್ಸನ್ ಅವರನ್ನು ಅಬ್ದುಲ್ ಶಮೀಮ್ ಮತ್ತು ತೌಫಿಕ್ ಹತ್ಯೆಗೈದಿದ್ದ ಆರೋಪಿಗಳು.
ಆರೋಪಿಗಳನ್ನು ತೀವ್ರವಾಗಿ ಶೋಧಿಸುತ್ತಿದ್ದ ಎನ್.ಐ.ಎ ತಂಡ ಒಟ್ಟು ಹನ್ನೆರಡು ಜನರನ್ನು ಒಳಗೊಂಡಿದ್ದ ಜಿಹಾದಿಗಳ ತಂಡ ಈ ಪೈಕಿ ಮೂವರನ್ನು ಬೆಂಗಳೂರಿನಲ್ಲಿ ಬಂಧಿಸಿದ್ದ ಪೊಲೀಸರು ಹನೀಫ್ ಖಾನ್,ಇಮ್ರಾನ್ ಖಾನ್ ಘನಿ ಮೊಹಮ್ಮದ್ ಝೈದ್ ಬೆಂಗಳೂರಲ್ಲಿ ಬಂಧಿತರಾದವರು ಬಂಧನದ ಬಗ್ಗೆ ಗೌಪ್ಯತೆ ಕಾಯ್ದುಕೊಂಡಿರುವ ಪೊಲೀಸರು ಇನ್ನಷ್ಟೇ ಖಚಿತ ಪಡಿಸಬೇಕಾಗಿದೆ.
ಏನಿದು ಪ್ರಕರಣ ?
ತಮಿಳುನಾಡು ಪೊಲೀಸ್ ಅಧಿಕಾರಿಯ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿ ಪೊಲೀಸರಿಗೆ ಬೇಕಾಗಿದ್ದ ಇಬ್ಬರನ್ನು ಇವತ್ತು ಉಡುಪಿಯಲ್ಲಿ ಬಂಧಿಸಲಾಗಿದೆ. ಬೆಂಗಳೂರಿನ ಪೊಲೀಸರು ಉಡುಪಿ ಪೊಲೀಸರ ಸಹಕಾರದೊಂದಿಗೆ ಇಂದು ಬೆಳಗಿನ ಜಾವ 6ಗಂಟೆ ಸುಮಾರಿಗೆ ಇಂದ್ರಾಳಿ ರೈಲ್ವೆ ನಿಲ್ದಾಣದಲ್ಲಿ ಇಬ್ಬರು ಆರೋಪಿಗಳನ್ನು ವಶಕ್ಕೆ ಪಡೆದುಕೊಂಡಿದ್ದಾರೆ.ಬಳಿಕ ಅವರನ್ನು ಅಜ್ಞಾ ತ ಸ್ಥಳಕ್ಕೆ ಕರೆದೊಯ್ದು ತನಿಖೆ ನಡೆಸಲಾಗುತ್ತಿದೆ.
ರಾಜ್ಯದಲ್ಲಿ ಕಳೆದ ಕೆಲ ದಿನಗಳಿಂದ ಉಗ್ರರ ಸದ್ದು ಕೇಳಿಬರುತ್ತಿದೆ.ರಾಜ್ಯದ ಬೇರೆ ಕಡೆಗಳಲ್ಲಿ ಶಂಕಿತ ಉಗ್ರರ ಬಂಧನದ ಬೆನ್ನಲ್ಲೆ ಉಡುಪಿಯಲ್ಲೂ ಇಬ್ಬರ ಬಂಧನವಾಗಿದೆ. ಅಬ್ದುಲ್ ಶಮೀಮ್ ಮತ್ತು ತೌಫಿಕ್ ಬಂಧಿತರು.ಇವತ್ತು ಬೆಳಗಿನ ಜಾವ ಉಡುಪಿಯ ಇಂದ್ರಾಳಿ ರೈಲ್ವೆ ನಿಲ್ದಾಣದ ಫ್ಲಾಟ್ ಫಾರಂನಲ್ಲಿ ನಿಂತಿದ್ದ ಇವರಿಬ್ಬರನ್ನು ವಶಕ್ಕೆ ಪಡೆದ ಪೊಲೀಸರು ತೀವ್ರ ವಿಚಾರಣೆಗೆ ಒಳಪಡಿಸುತ್ತಿದ್ದಾರೆ. ಇವತ್ತು ಬಂಧನಕ್ಕೊಳಗಾದ ಆರೋಪಿಗಳು, ಇವರು ಜನವರಿ 8 ರಂದು ತಮಿಳುನಾಡು ರಾಜ್ಯದ ಪೊಲೀಸ್ ಅಧಿಕಾರಿಯನ್ನು ಶೂಟ್ ಮಾಡಿ ಹತ್ಯೆಗೈದು ತಲೆಮರೆಸಿಕೊಂಡಿದ್ದಾರೆನ್ನಲಾಗಿದೆ.
ಖಚಿತ ಮಾಹಿತಿಯಂತೆ ಸೋಮವಾರ ರಾತ್ರಿಯೇ ನಿಲ್ದಾಣದಲ್ಲಿ ಬಿಡು ಬಿಟ್ಟ ಪೊಲೀಸರು, ಇಂದು ಬೆಳಗಿವ ಜಾವಾ ಆರು ಗಂಟೆಗೆ ಆರೋಪಿಗಳನ್ನು ವಶ ಪಡೆದುಕೊಳ್ಳುವಲ್ಲಿ ಯಶಸ್ವಿಯಾಗಿರುವುದಾಗಿ ರೈಲ್ವೆ ಪೊಲೀಸರು ಖಚಿತ ಪಡಿಸಿದ್ದಾರೆ.
ಇವರು ಯಾವ ರೈಲಿನಲ್ಲಿ ಬಂದು ಇಳಿದು, ಯಾವ ರೈಲಿಗಾಗಿ ಕಾಯುತ್ತಿದ್ದರೆಂಬ ಮಾಹಿತಿ ಈವರೆಗೆ ದೊರೆತಿಲ್ಲ. ಅದೇ ರೀತಿ ಆರೋಪಿಗಳ ಕುರಿತ ಹೆಚ್ಚಿನ ಮಾಹಿತಿ ತಿಳಿದುಬಂದಿಲ್ಲ. ಈ ಕುರಿತು ಹೆಚ್ಚಿನ ಮಾಹಿತಿ ನೀಡಲು ಸ್ಥಳೀಯ ಪೊಲೀಸರು ನಿರಾಕರಿಸುತ್ತಿದ್ದಾರೆ. ಇನ್ನೊಂದೆಡೆ ಇವರು ಶಂಕಿತ ಉಗ್ರರು ಎನ್ನಲಾಗಿದ್ದು ಕೇರಳ ಮೂಲಕ ಕರ್ನಾಟಕ ಕರಾವಳಿಗೆ ಆಗಮಿಸಿರುವ ಶಂಕೆ ಇದೆ.
ಆರೋಪಿಗಳನ್ನು ಎನ್.ಐ.ಎ ತಂಡ ಶೋಧಿಸುತ್ತಿತ್ತು. ಇವರು ನೇಪಾಳ ಮೂಲಕ ವಿದೇಶಕ್ಕೆ ಹಾರಲು ಸಿದ್ದರಾಗಿದ್ದರು ಎಂಬ ಮಾಹಿತಿ ಲಭ್ಯವಾಗಿದೆ. ಒಟ್ಟು ಹನ್ನೆರಡು ಜನರನ್ನು ಒಳಗೊಂಡಿದ್ದ ಈ ತಂಡದ ಪೈಕಿ ಮೂವರನ್ನು ಬೆಂಗಳೂರಿನಲ್ಲಿ ಪೊಲೀಸರು ಈಗಾಗಲೇ ಬಂಧಿಸಿದ್ದಾರೆ. ಹನೀಫ್ ಖಾನ್, ಇಮ್ರಾನ್ ಖಾನ್ ಘನಿ ಮೊಹಮ್ಮದ್ ಝೈದ್ ಬೆಂಗಳೂರಲ್ಲಿ ಬಂಧಿತರಾದವರು. ಆದರೆ ಉಡುಪಿಯ ಈ ಶಂಕಿತರ ಬಂಧನದ ಬಗ್ಗೆ ಪೊಲೀಸರು ಗೌಪ್ಯತೆ ಕಾಯ್ದುಕೊಂಡಿದ್ದಾರೆ.