ಇಂದ್ರಾಳಿ: 16 ಮನೆಗೆ ವಿದ್ಯುತ್ ಸಂಪರ್ಕ

ಉಡುಪಿ: ಐಟಿಡಿಪಿ ಇಲಾಖೆ ವತಿಯಿಂದ ಇಂದ್ರಾಳಿ ವಾರ್ಡ್ ಮಂಚಿ ಮಂಜುಶ್ರೀ ನಗರದಲ್ಲಿ ಕೊರಗ ಸಮುದಾಯದ 16 ಮನೆಗಳಿಗೆ ವಿದ್ಯುತ್ ಸಂಪರ್ಕಕ್ಕೆ ಶಾಸಕ ಕೆ. ರಘುಪತಿ ಭಟ್ ಚಾಲನೆ ನೀಡಿದರು.
ದೀಪಾವಳಿ ಹಬ್ಬದ ಸಡಗರದ ಮದ್ಯೆ ತನ್ಮೂಲಕ ಇಂತಹ ಉತ್ತಮ ಕಾರ್ಯಕ್ರಮದಲ್ಲಿ ಭಾಗಿಯಾಗುವಂತಹ ಅವಕಾಶ ಜೀವನದ ಸ್ಮರಣೀಯ ದೀಪಾವಳಿಯನ್ನು ಆಚರಿಸಿದ ಅನುಭವ ಉಂಟಾಗುತ್ತಿದೆ ಅವರು ಹೇಳಿದರು.

ನಗರಸಭಾ ಸದಸ್ಯ ಅಶೋಕ್ ನಾಯ್ಕ್ ಮತ್ತು ಜಿಲ್ಲಾ ನೇಕಾರ ಪ್ರಕೋಷ್ಠ ಅಧ್ಯಕ್ಷ ರತ್ನಾಕರ್ ಇಂದ್ರಾಳಿ ಕಾರ್ಯಕ್ರಮ ಸಂಘಟಿಸಿದರು. ಕಡಿಯಾಳಿ ಗಣೇಶೋತ್ಸವ ಸಮಿತಿ ಪ್ರದಾನ ಕಾರ್ಯದರ್ಶಿ ರಾಘವೇಂದ್ರ ಕಿಣಿ, ಮಾಜಿ ಜಿಲ್ಲಾ ಪಂಚಾಯತ್ ಅಧ್ಯಕ್ಷ ಉಪೇಂದ್ರ ನಾಯಕ್, ಮೆಸ್ಕಾಮ್ ಅಧಿಕಾರಿಗಳಾದ ಮಾರ್ತಾಂಡಪ್ಪ ಆರ್ ಕರಿಯಪ್ಪನವರ್ ಮತ್ತು ಶ್ರೀಧರ್ ಟಿ ಎಸ್, ಸ್ಥಳೀಯ ಕೊರಗ ಸಮುದಾಯದ ಪತ್ರಿಕೋದ್ಯಮದ ಸ್ನಾತಕೋತ್ತರ ಪದವೀಧರೆ ದಿವ್ಯಾ,

ಮುಖಂಡ ಸುಂದರ್ ಗುರಿಕಾರ, ಮಣಿಪಾಲದ ಎಂಐಟಿ ಉಪನ್ಯಾಸಕ ಡಾ. ನಾರಾಯಣ್ ಶೆಣೈ, ನಗರಸಭಾ ಸದಸ್ಯರಾದ ಪ್ರಭಾಕರ್ ಪೂಜಾರಿ, ಗಿರೀಶ್ ಅಂಚನ್, ಮಂಜುನಾಥ್ ಮಣಿಪಾಲ, ಸ್ಥಳೀಯ ಪ್ರಮುಖರಾದ ಅರವಿಂದ ಶೆಟ್ಟಿ, ರವೀಂದ್ರ ನಾಯಕ್, ಪ್ರಭಾಕರ್ ಶೆಟ್ಟಿ, ರಜನೀಶ್ ಸರಳಾಯ, ಗೋಪಾಲ್ ಪ್ರಭು, ಗೋಪಾಲ್ ಪೂಜಾರಿ, ಭಾಸ್ಕರ್ ಕಾಮತ್, ಲೋಕಯ್ಯ, ಹರೀಶ್ ದೇವಾಡಿಗ, ಹರಿಯಪ್ಪ ನಾಯಕ್, ಸೀತಾರಾಮ್ ನಾಯಕ್, ಭರತ್, ಸತೀಶ್ ಕುಡ್ವ, ಸದಾನಂದ ನಾಯಕ್, ರಾಜೇಂದ್ರ ಭಟ್, ಗಣೇಶ್ ನಾಯಕ್ ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *

error: Content is protected !!