ಜುಲೈ 13 : ಇಂಡಿಯನ್  ಕ್ರಿಶ್ಚನ್ ಯೂನಿಯನ್ ನೇತೃತ್ವದಲ್ಲಿ “ಜನಸ್ಪಂದನ” ಕಾರ್ಯಕ್ರಮ

ಕೇಂದ್ರ ಮತ್ತು ರಾಜ್ಯ ಸರಕಾರದಿಂದ ಕ್ರೈಸ್ತರಿಗೆ ಸಿಗುವ ಸವಲತ್ತುಗಳ ಮಾಹಿತಿ ಮತ್ತು ಅಧಿಕಾರಿಗಳ ಸಮ್ಮುಖದಲ್ಲಿ ಅಹವಾಲುಗಳ ಸ್ವೀಕರ ಮತ್ತು ಮುಖ್ಯಮಂತ್ರಿ ಪರಿಹಾರ ನಿಧಿಗಳ ವಿತರಣೆಯ ‘ಜನಸ್ಪಂದನ’ ಕಾರ್ಯಕ್ರಮವು ಉಡುಪಿ ಕ್ರೈಸ್ತ ಧರ್ಮ ಪ್ರಾಂತ್ಯದ ಕ್ರೈಸ್ತ ಸಮಾಜ ಬಾಂಧವರಿಗೆ, ಇಂಡಿಯನ್ ಕ್ರಿಶ್ಚನ್ ಯೂನಿಯನ್ ಉಡುಪಿ ಜಿಲ್ಲೆ ಇವರ ನೇತೃತ್ವದಲ್ಲಿ  ನಡೆಯಲಿದೆ ಎಂದು ಸಂಘಟನೆಯ ಸಹ ಕಾರ್ಯದರ್ಶಿ ಸ್ಟೀವನ್ ಕುಲಾಸೊ ಉದ್ಯಾವರ  ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.
ವಿಧಾನಪರಿಷತ್ ಸದಸ್ಯರು ಮತ್ತು ಮುಖ್ಯಮಂತ್ರಿಗಳ ಸಂಸದೀಯ ಕಾರ್ಯದರ್ಶಿ ಐವನ್ ಡಿಸೋಜರವರ ಉಪಸ್ಥಿತಿಯಲ್ಲಿ, ಜಿಲ್ಲಾಧಿಕಾರಿ, ತಹಶೀಲ್ದಾರ್ ಮತ್ತು ವಿವಿಧ ಇಲಾಖೆಗಳ ಅಧಿಕಾರಿಗಳ ಉಪಸ್ಥಿತಿಯಲ್ಲಿ, ಜುಲೈ 13 ಶನಿವಾರ ಮಧ್ಯಾಹ್ನ 3.00 ಗಂಟೆಗೆ ಉಡುಪಿ ಬಾಸೆಲ್ ಮಿಷನ್ ಸಭಾಭವನದ  ಬಳಿಯ ಹುಡುಗರ ವಸತಿ ಶಾಲೆ  ಸ್ನೇಹಾಲಯ ಸಭಾಭವನದಲ್ಲಿ ನಡೆಯಲಿದೆ ಎಂದು ತಿಳಿಸಿದರು.

ರಾಜ್ಯ ಮತ್ತು ಕೇಂದ್ರ ಸರಕಾರಗಳಿಂದ ಅಲ್ಪಸಂಖ್ಯಾತರಿಗೆ ಅದರಲ್ಲೂ ವಿಶೇಷವಾಗಿ ಕ್ರೈಸ್ತರಿಗೆ ಮಾಹಿತಿಯ ಕೊರತೆಯಿಂದ ಮತ್ತು ಅಧಿಕಾರಿಗಳ ಅಸಡ್ಡೆಯಿಂದ ಕೆಲವೊಂದು ಸೌಲಭ್ಯಗಳು ಸಿಗದೇ ಇರುವುದರಿಂದ ಇಂಡಿಯನ್ ಕ್ರಿಶ್ಚಿಯನ್ ಯೂನಿಯನ್ ನೇತೃತ್ವದಲ್ಲಿ ಈ ಕಾರ್ಯಕ್ರಮವು ನಡೆಯಲಿದ್ದು ಉಡುಪಿ ಕ್ರೈಸ್ತ ಧರ್ಮ ಪ್ರಾಂತ್ಯದ ಕ್ರೈಸ್ತ ಸಮಾಜ ಬಾಂಧವರು ಇದರ ಸದುಪಯೋಗವನ್ನು ಪಡೆಯಬೇಕಾಗಿ ಸ್ಟೀವನ್ ಕುಲಾಸೊ ಉದ್ಯಾವರ  ತಿಳಿಸಿದ್ದಾರೆ.
ಇಂಡಿಯನ್ ಕ್ರಿಶ್ಚಿಯನ್ ಯೂನಿಯನ್ ಇದರ ಗೌರವಾಧ್ಯಕ್ಷರಾಗಿ ಡೊನಾಲ್ಡ್ ಮನೋಹರ್ ಕರ್ಕಡ ಉದ್ಯಾವರ, ಅಧ್ಯಕ್ಷರಾಗಿ ಸುನಿಲ್ ಕಾಬ್ರಲ್ ಶಿರ್ವ ಮತ್ತು ಕಾರ್ಯದರ್ಶಿಯಾಗಿ ಚಾರ್ಲ್ಸ್ ಆಮ್ಲ೦ರ್ ಮತ್ತು ಕಾರ್ಯಕಾರಿ ಸಮಿತಿಯಲ್ಲಿ ಒಂಭತ್ತು ಸದಸ್ಯರಿದ್ದು, ಸಂಘಟನೆಯ ಕಚೇರಿಯು ಜೋಡುಕಟ್ಟೆ ರಸ್ತೆಯ ವೈಎಂಸಿ ಕಟ್ಟಡದಲ್ಲಿ ಇದು ಕ್ರೈಸ್ತರು ಯಾವುದೇ ಸಮಸ್ಯೆಗಳು ಅಥವಾ ವಿವಿಧ ಸೌಲಭ್ಯಗಳ ಮಾಹಿತಿಯನ್ನು ಈ ಕಚೇರಿಯಿಂದ ಪಡೆಯಬೇಕಾಗಿ ಈ ಸಂದರ್ಭದಲ್ಲಿ ತಿಳಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಸಂಘಟನೆಯ ಅಧ್ಯಕ್ಷ ಸುನೀಲ್ ಕಬ್ರಾಲ್ ಶಿರ್ವ, ಉಪಾಧ್ಯಕ್ಷ ಮೆಲ್ವಿನ್ ಡಿಸೋಜಾ ಶಿರ್ವ, ಕಾರ್ಯದರ್ಶಿ ಚಾರ್ಲ್ಸ್ ಆಮ್ಲ೦ರ್ ಉಡುಪಿ, ಸಾರ್ವಜನಿಕ ಸಂಪರ್ಕಾಧಿಕಾರಿ ಡಿಯಾನ್ ಡಿಸೋಜಾ ಕಲ್ಮಾಡಿ ಮತ್ತು ಉಪಾಧ್ಯಕ್ಷೆ ಶೀಲಾ ಸೋನ್ಸ್ ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *

error: Content is protected !!