ತುಳು ಶಿವಳ್ಳಿ ಬ್ರಾಹ್ಮಣ ವಿಶ್ವ ಮಹಾ ಸಮ್ಮೇಳನದ ಕಾರ್ಯಾಲಯ ಉದ್ಘಾಟನೆ

ಉಡುಪಿ:ಪರ್ಯಾಯ ಶ್ರೀ ಪಲಿಮಾರು ಮಠದ ಆಶ್ರಯದಲ್ಲಿ ದಶಂಬರ 13, 14 ಹಾಗು15 ಮೂರು ದಿನ ಪರಿಯಂತ ನಡೆಯಲಿರುವ ತುಳು ಶಿವಳ್ಳಿ ಬ್ರಾಹ್ಮಣರ ಪ್ರಥಮ ವಿಶ್ವ ಮಾ ಸಮ್ಮೇಳನದ ಉಡುಪಿ ಕಾರ್ಯಾಲಯವನ್ನು ಪಾರ್ಕಿಂಗ್ ಸಮುಚ್ಛಯದ ಬಳಿ ಇರುವ ಶ್ರೀರಾಮ ಧಾಮದಲ್ಲಿ ವಿಜಯದಶಮಿಯಂದು ಪರ್ಯಾಯ ಶ್ರೀ ಪಲಿಮಾರು ಮಠಾಧೀಶರಾದ ಶ್ರೀ ವಿದ್ಯಾಧೀಶ ತೀರ್ಥ ಶ್ರೀಪಾದರು ಹಾಗೂ ಕಿರಿಯ ಸ್ವಾಮಿಗಳಾದ ಶ್ರೀ ವಿದ್ಯಾರಾಜೇಶ್ವರ ತೀರ್ಥ ಶ್ರೀಪಾದರು ವಿದ್ಯುಕ್ತವಾಗಿ ಉದ್ಘಾಟಿಸಿದರು.


ತುಳು ಶಿವಳ್ಳಿ ಸಂಸ್ಕೃತಿಯನ್ನು ಜಗದಗಲಕೆ ಪರಿಚಯಿಸುವ ಈ ಸಮ್ಮೇಳನದಲ್ಲಿ ದೇಶ ವಿದೇಶಗಳಲ್ಲಿರುವ ಶಿವಳ್ಳಿ ಬ್ರಾಹ್ಮಣರು ಸಕ್ರಿಯವಾಗಿ ಭಾಗವಹಿಸುವ ಮೂಲಕ ಸಮ್ಮೇಳನದ ಯಶಸ್ಸಿಗೆ ಸಹಕರಿಸಬೇಕೆಂದು ಕರೆಯಿತ್ತರು. ಸಮ್ಮೇಳನದ ರೂಪುರೇಷೆಯನ್ನು ಕೆ ಬಾಲಕೃಷ್ಣ ಮಡಮಂತ್ತಾಯ ಇವರು ಸವಿವರವಾಗಿ ತಿಳಿಸಿದರು. ಕಾರ್ಯಾಧ್ಯಕ್ಷ ಪರ್ಕಳ ಮಂಜುನಾಥ ಉಪಾಧ್ಯ ಉಪಯುಕ್ತ ಸಲಹೆ ಸೂಚನೆಗಳನ್ನು ಇತ್ತರು.
ಕಾರ್ಯಕ್ರಮದಲ್ಲಿ ಭಾಗವಹಿಸಿದ ವಾಸುದೇವ ಭಟ್ ಮೈಸೂರು ಹಾಗೂ ಡಾ| ಗೋಪಾಲ್ ಮೊಗೆರಾಯ ಗೋವರವರು ರಚನಾತ್ಮಕ ಹಾಗೂ ಸಂಘಟನಾತ್ಮಕ ದೃಷ್ಟಿಯಲ್ಲಿ ಉಪಯುಕ್ತವಾಗುವ ವಿಚಾರಗಳನ್ನು ಮಂಡಿಸಿದರು. ಈ ಸಂದರ್ಭದಲ್ಲಿ ಶ್ರೀಕೃಷ್ಣ ಮಠದ ಪಿಆರ್‌ಒ ಶ್ರೀಷ ಭಟ್ ಕಡೆಕಾರ್, ಜನನೀ ಭಾಸ್ಕರ ಭಟ್, ಶ್ರೀಕಾಂತ ಆಚಾರ್ಯ, ಜನಾರ್ದನ್ ಕೊಡವೂರು,ನಾಗರಾಜ್ ಆಚಾರ್ಯ ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *

error: Content is protected !!