ಫಾರ್ಚ್ಯೂನ್ ಆರೋಗ್ಯ ವಿಜ್ಞಾನ ಕಾಲೇಜು ಉದ್ಘಾಟನೆ
ಬ್ರಹ್ಮಾವರ : ತಾಲೂಕು ಕೇಂದ್ರವಾಗಿ ಬೆಳೆಯುತ್ತಿರುವ ಬ್ರಹ್ಮಾವರಕ್ಕೆ ಉನ್ನತ ಗುಣಮಟ್ಟದ ಅರೆವೈದ್ಯಕೀಯ ಶಿಕ್ಷಣ ಸಂಸ್ಥೆಯ ಅನಿವಾರ್ಯತೆ ಇದ್ದು ಅದು ಇಂದು ಸಾಕಾರಗೊಂಡಿದೆ. ಎಂದು ಲಿಟಲ್ ರಾಕ್ ವಿದ್ಯಾಸಂಸ್ಥೆಗಳ ನಿರ್ದೇಶಕರಾದ ಪ್ರೊಫೆಸರ್ ಮ್ಯಾಥಿವ್. ಸಿ. ನೈನನ್ರವರು ತಿಳಿಸಿದರು. ಫಾರ್ಚ್ಯೂನ್ ಆರೋಗ್ಯ ವಿಜ್ಞಾನ ಸಂಸ್ಥೆಯನ್ನು ದೀಪ ಬೆಳಗಿಸಿ ಉದ್ಘಾಟಿಸಿ ಮಾತನಾಡಿದ ಅವರು ವಿಶೇಷ ಶೈಕ್ಷಣಿಕ ಕಾಳಜಿ, ಮೌಲ್ಯಯುತ ಚಿಂತನೆಗಳು ಮತ್ತು ವರ್ತಮಾನದ ಅಗತ್ಯತೆ- ಅನಿವಾರ್ಯತೆಗಳಿಗೆ ತನ್ನನು ತಾನು ಮೇಲ್ದರ್ಜೆಗೇರಿಸಿಕೊಂಡು ಹೋಗಬೇಕು ಮತ್ತು ಈ ಸಂಸ್ಥೆಯು ಆ ನಿಟ್ಟಿನಲ್ಲಿ ಒಂದು ಉತ್ತಮ ಆದರ್ಶ ಶಿಕ್ಷಣ ಸಂಸ್ಥೆಯಾಗಿ ಮೂಡಿ ಬರಲಿದೆ ಎಂಬುದಾಗಿ ಶುಭ ಹಾರೈಸಿದರು.
ಪ್ರಾಸ್ತಾವಿಕವಾಗಿ ಮಾತನಾಡಿದ ವಿಜೇತ ರೈ ಯವರು ಫಾರ್ಚ್ಯೂನ್ ನರ್ಸಿಂಗ್ ಕಾಲೇಜು, ಹಾಸ್ಪಿಟಲ್ ಅಡ್ಮಿನಿಸ್ಟ್ರೇಷನ್ ಮತ್ತು ಪ್ಯಾರಾಮೆಡಿಕಲ್ ಕಾಲೇಜುಗಳ ಮಾನ್ಯತೆ, ಕೋರ್ಸಗಳ ಅರ್ಹತೆ, ಉದ್ಯೋಗಾವಕಾಶ, ವಿದ್ಯಾರ್ಥಿ ವೇತನೆಗಳ ಬಗ್ಗೆ ತಿಳಿಸಿದರು.
ಫಾರ್ಚ್ಯೂನ್ ಅಕಾಡೆಮಿ ಅಂಡ್ ಚಾರಿಟಬಲ್ ಟ್ರಸ್ಟ್ (ರಿ )ಅಧ್ಯಕ್ಷರಾದ ಡಾ. ಬಿ. ವಿನಯಚಂದ್ರ ಶೆಟ್ಟಿ ಯವರು ಸಂಸ್ಥೆಯು ಬ್ರಹ್ಮಾವರದಲ್ಲಿ ಮೂಡಿಬರುವಲ್ಲಿ ಸಹ್ರದಯರ ಸಹಕಾರವನ್ನು ನೆನಪಿಸುತ್ತ ಮುಂದಿನ ದಿನಗಳಲ್ಲಿ ಸಂಸ್ಥೆಯು ಗುಣಮಟ್ಟದ ವೃತ್ತಿಪರ ಶಿಕ್ಷಣ ನೀಡಲು ಬದ್ಧವಾಗಿದೆ.ಗ್ರಾಮೀಣ ಬಡ ಮಧ್ಯಮ ವರ್ಗದ ವಿದ್ಯಾರ್ಥಿಗಳನ್ನು ಗಮನದಲ್ಲಿಟ್ಟುಕೊಂಡು ಸಂಸ್ಥೆ ಮುನ್ನಡೆಯಲಿದೆ ಎಂದು ಅಧ್ಯಕ್ಷೀಯ ಮಾತುಗಳಲ್ಲಿ ತಿಳಿಸಿದರು.
ಉದ್ಘಾಟನಾ ಕಾರ್ಯಕ್ರಮವನ್ನು ಡಾ. ದೈವಿಕ್ ಶೆಟ್ಟಿ, ಸ್ವಾಗತಿಸಿ ಮತ್ತು ಪ್ರಾಧ್ಯಾಪಕಿ
ಪೂರ್ಣಿಮಾ ಇವರು ವಂದನಾರ್ಪಣೆ ನಡೆಸಿಕೊಟ್ಟರು. ಕಾರ್ಯಕ್ರಮದ ವೇದಿಕೆಯಲ್ಲಿ ಟ್ರಸ್ಟಿಗಳಾದ ತಾರಾನಾಥ್ ಶೆಟ್ಟಿ , ಸುಜಿತ್ ಶೆಟ್ಟಿ, ಹರಿಪ್ರಸಾದ್ ರೈ ಮುಂತಾಡವರು ಉಪಸ್ಥಿತರಿದ್ದರು. ಉದ್ಘಾಟನಾ ಕಾರ್ಯಕ್ರಮದ ನಂತರ ವಿದ್ಯಾರ್ಥಿಗಳಿಗೆ ಪ್ರಶಿಕ್ಷಣ ಕಾರ್ಯಾಗಾರವು ನಡೆಯಿತು.