ಕೆಸರುಗದ್ದೆಯಲ್ಲಿ ಚಿಣ್ಣರ ಕಲರವ,ಭತ್ತ ನೇಜಿ ನಾಟಿ ಮಾಡಿ ಹಿಗ್ಗಿದ ಪುಟಾಣಿಗಳು
ಹೆಬ್ರಿ: ಕೆಸರುಗದ್ದೆಯಲ್ಲಿ ಚಿಣ್ಣರ ಚಿಲಿಪಿಲಿ, ಕೆಸರಲ್ಲಿ ಮಿಂದೆದ್ದ ಮಕ್ಕಳು, ,ಭತ್ತ ನೇಜಿ ನಾಟಿ ಮಾಡಿ ಹಿಗ್ಗಿದ ಪುಟಾಣಿಗಳು. ಹೌದು, ಹೆಬ್ರಿಯ ಸಂತೆಕಟ್ಟೆ ಸರಕಾರಿ ಹಿರಿಯ ಪ್ರಾಥಮಿಕ ಶಾಲಾ ವಿಧ್ಯಾರ್ಥಿಗಳು ರಿಲ್ಯಾಕ್ಸ್ ಮೂಡಿನಲ್ಲಿ ಕೆಸರುಗದ್ದೆ ಕ್ರೀಡಾಕೂಟದಲ್ಲಿ ಅತ್ಯಂತ ಖುಷಿಯಿಂದ ಕುಣಿದುಕುಪ್ಪಳಿಸಿದ್ದು ಮಾತ್ರವಲ್ಲದೇ ಹಿರಿಯರ ಮಾರ್ಗದರ್ಶನದಲ್ಲಿ ಭತ್ತ ನಾಟಿಯನ್ನು ಮಾಡಿ ಖುಷಿಪಟ್ಟರು.
ಹಂದಿಕಲ್ಲು ಚಾರದ ಪ್ರಗತಿಪರ ಕೃಷಿಕ ಮಿಥುನ್ ಶೆಟ್ಟಿಯವರ ಮನೆಯಂಗಳದ ಗದ್ದೆಯಲ್ಲಿ ನಕ್ಕುನಲಿದ ಚಿಣ್ಣರು. ಬೃಂದಾವನ ಪೌಂಡೇಶನ್ ಬೆಂಗಳೂರು ಹಾಗೂ ವಿವೇಕಾನಂದ ಯುವವೇದಿಕೆ ಹಂದಿಕಲ್ಲು-ಚಾರರವರು ಈ ಕಾರ್ಯಕ್ರಮವನ್ನು ಆಯೋಜಿಸಿದ್ದರು.
ಮಕ್ಕಳಲ್ಲಿ ಕೃಷಿ ಹಾಗೂ ರೈತರ ಬಗ್ಗೆ ಸಕಾರಾತ್ಮಕ ಆಲೋಚನೆಗಳನ್ನು ರೂಪಿಸುವಲ್ಲಿ ಆಯೋಜನೆಯಾದ ಕಾರ್ಯಕ್ರಮಕ್ಕೆ ಸಾರ್ವಜನಿಕ ವಲಯದಿಂದ ಬಹಳಷ್ಟು ಶ್ಲಾಘನೆ ವ್ಯಕ್ತವಾಗಿದೆ
ಭಾರತ ಕೃಷಿ ರಾಷ್ಟ್ರ ಆದರೆ ಪ್ರಸ್ತುತ ಕಾಲಘಟ್ಟದಲ್ಲಿ ಯುವ ಜನತೆ ವಿಧ್ಯಾಭ್ಯಾಸ ಮುಗಿದ ಮೇಲೆ ಕೆಲಸಕ್ಕಾಗಿ ಪಟ್ಟಣಗಳನ್ನರಸಿ ಹೋಗುತ್ತಿರುವವರ ಸಂಖ್ಯೆ ಹೆಚ್ಚಾಗಿದೆ. ಶಾಲಾ ಮಕ್ಕಳಿಗೆ ಕೃಷಿಯ ಪ್ರಾಮುಖ್ಯತೆಯನ್ನು ತಿಳಿಸುವುದು ನಮ್ಮೆಲ್ಲರ ಕರ್ತವ್ಯವಾಗಿದೆ.
ಆ ಕಾರಣಕ್ಕಾಗಿ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಮಕ್ಕಳಿಗೆ ಕೆಸರುಗದ್ದೆಯ ಕ್ರೀಡಾಕೂಟದ ಜೊತೆ ಭತ್ತ ನೇಜಿ ನಾಟಿ ಮಾಡುವುದನ್ನು ಹೇಳಿಕೊಡಲಾಗಿದೆ ಎಂದು ಪಗತಿಪರ ಕೃಷಿಕ ಮಿಥುನ್ ಶೆಟ್ಟಿ ಚಾರ ಉಡುಪಿ ಟೈಮ್ಸ್ನೊಂದಿಗೆ ತಮ್ಮ ಅನಿಸಿಕೆಗಳನ್ನು ಹಂಚಿಕೊಂಡರು.