ಉಡುಪಿ: ಅಕ್ರಮ ಮರಳು ದಂಧೆಯಲ್ಲಿ ರಾಜಕೀಯ ಮುಖಂಡರೇ ಶಾಮೀಲು
ಉಡುಪಿ: ಬ್ರಹ್ಮಾವರ ಪೇತ್ರಿಯಲ್ಲಿ ಅಕ್ರಮ ಮರಳು ಸಾಗಟದ ಟೆಂಪೋ ವಶಕ್ಕೆ ಓರ್ವನ ಬಂಧನ.
ಪೇತ್ರಿಯ ಮಡಿ ಹೊಳೆಯಲ್ಲಿ ಹಲವಾರು ದಿನಗಳಿಂದ ಅಕ್ರಮವಾಗಿ ಮರಳುಗಾರಿಕೆ ನಡೆಯುತಿತ್ತು .ಈ ಬಗ್ಗೆ ಸ್ಥಳೀಯ ಪೊಲೀಸರಿಗೆ ಮಾಹಿತಿ ಇದ್ದರೂ ಯಾವುದೇ ಕ್ರಮ ಕೈಗೊಳ್ಳದಿರುವುದರಿಂದ ನಿನ್ನೆ ರಾತ್ರಿ 10.30 ಗಂಟೆಗೆ ಗಣಿ ಇಲಾಖೆಯ ಅಧಿಕಾರಿಗಳೆ ಸ್ವತ: ದಾಳಿ ನಡೆಸಿ ಅಕ್ರಮವಾಗಿ ಸಾಗಿಸುತ್ತಿದ್ದ ಮರಳು ಟೆಂಪೋವನ್ನು ವಶಕ್ಕೆ ಪಡೆದಿದ್ದಾರೆ. ಅಕ್ರಮ ಮರಳು ಸಾಗಟದ ಟೆಂಪೋ, ಹಾಗೂ ಮರಳನ್ನು ವಶಕ್ಕೆ ಪಡೆಯಾಲಾಗಿದೆ.
ಜಿಲ್ಲೆಯಲ್ಲಿ ಮತ್ತೆ ಅಕ್ರಮ ಮರಳುಗಾರಿಕೆ ಪ್ರಾರಂಭವಾಗಿದ್ದು,ಕೆಲವೊಂದು ಕಡೆಗಳಲ್ಲಿ ಯಾಂತ್ರಿಕ ಮರಳುಗಾರಿಕೆ ನಡೆಸಲಾಗುತ್ತಿದ್ದರೂ ರಾಜಕೀಯಾ ಒತ್ತಡದ ಕಾರಣ ದಾಳಿಗಳು ನಡೆಯುತ್ತಿಲ್ಲವೆಂಬ ಆರೋಪ ಕೇಳಿ ಬರುತ್ತಿದೆ. ಮರಳು ದಿಬ್ಬ ತೆರವು ಗೊಳಿಸಲು ಕೆಲವೊಂದು ಕಡೆ ರಾಜಕೀಯಾ ವ್ಯಕ್ತಿಗಳಿಗೆ ನೀಡಲಾಗಿದ್ದು, ಅವರ ಸುರ್ಪದಿಯಲ್ಲೇ ಅಕ್ರಮ ಮರಳುಗಾರಿಕೆ ಜಿಲ್ಲೆಯಾದ್ಯಾಂತ ನಡೆಯುತ್ತಿದೆ.
ಗಣಿ ಇಲಾಖೆ ಅಧಿಕಾರಿಗಳಿಗೆ ದಾಳಿ ನಡೆಸುವ ಸಂದರ್ಭ ರಕ್ಷಣೆ ಕೊಡಬೇಕಾದ ಪೊಲೀಸ್ ಇಲಾಖೆ ಅಧಿಕಾರಿಗಳಿಗೆ ತಿಂಗಳ ಮಾಮೂಲಿ ಸಂದಾಯವಾಗುವ ಕಾರಣ ಪೊಲೀಸ್ ಸಿಬ್ಬಂದಿಗಳು ತಮಗೆ ರಕ್ಷಣೆ ನೀಡುವ ಕೆಲಸಗಳಿಗೆ ಮುಂದೆ ಬರುತ್ತಿಲ್ಲವೆಂದು ಹೆಸರು ಹೇಳಲ್ಚಿಸದ ಅಧಿಕಾರಿಯೊಬ್ಬರು ದೂರಿದ್ದಾರೆ.
ರಾಜಕೀಯಾ ವ್ಯಕ್ತಿಯೊರ್ವ ಬೇನಾಮಿ ಹೆಸರಿನಲ್ಲಿ ಟೆಂಡರ್ ಪಡೆದು ಮರಳು ಯಾರ್ಡ್‌ಗೆ ಸಾಗಿಸುವ ಲಕ್ಷಾಂತರ ಟನ್ ಮರಳು ಸ್ಟಾಕ್ ಯಾರ್ಡ್‌ಗೆ ಹಾಕದೆ ದುಪ್ಪಟ್ಟು ಬೆಲೆಗೆ ಬಿಲ್ಡರ್‌ಗಳಿಗೆ ಮಾರಾಟ ಮಾಡುತ್ತಿದ್ದಾನೆಂದು ಟೆಂಪೋ ಚಾಲಕರು ತಮ್ಮ ಅಳಲನ್ನು ತೋಡಿಕೊಂಡರು. ಇದರಿಂದಾಗಿ ನಾವು ಬಾಡಿಗೆ ಇಲ್ಲದೆ ಉಪವಾಸ ಇರುವ ಪರಿಸ್ಥಿತಿ ಬಂದೋದಗಿದೆನ್ನುತ್ತಾರೆ ಟೆಂಪೋ ಚಾಲಕರು.ಜಿಲ್ಲೆಯಲ್ಲಿ ಎಲ್ಲೂ ಅಕ್ರಮ ಮರಳುಗಾರಿಗೆ, ಸಾಗಾಟಕ್ಕೆ ಆಸ್ಪದ ನೀಡಲ್ಲ ಎಂದು ಜಿಲ್ಲಾಧಿಕಾರಿ ಭರವಸೆ ನೀಡಿದ್ದರು. ತಕ್ಷಣ ಈ ಅಕ್ರಮಗಳಿಗೆ ಕಡಿವಾಣ ಹಾಕಬೇಕೆಂದು ಸಾರ್ವಜನಿಕರ ಒತ್ತಾಯವಾಗಿದೆ.