ಅಕ್ರಮ ಚಿನ್ನ ಸಾಗಾಟ:11 ಅಂತರಾಜ್ಯ ಚೋರರು ಅಂದರ್
ಕುಂದಾಪುರ: ದುಬೈ ಯಿಂದ ಕ್ಯಾಲಿಕಟ್ ಏರ್ಪೋರ್ಟ್ ಗೆ ಬಂದಿಳಿದ ಭಟ್ಕಳದ ಮೂಲದ ವ್ಯಕ್ತಿಗಳ ಬಳಿಯಿಂದ ಸುಮಾರು 56 ಲಕ್ಷ ಮೌಲ್ಯದ ಚಿನ್ನಾಭರಣಗಳನ್ನು ವಶಪಡಿಸಿಗೊಂಡು 11 ಜನರ ತಂಡವನ್ನು ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ .
ಘಟನೆಯ ವಿವರ – ದುಬೈಯಿಂದಗೆ ಕ್ಯಾಲಿಕಟ್ ಏರ್ಪೋರ್ಟ್ ಗೆ ಬಂದಿಳಿದು ರೈಲಿನಲ್ಲಿ ಮಂಗಳೂರುಗೆ ಪ್ರಯಾಣಿಸಿದ್ದು ,ಅಲ್ಲಿಂದ 2 ಟವೆರಾ ದಲ್ಲಿ ಭಟ್ಕಳಕ್ಕೆ ಪ್ರಯಾಣಿಸುತ್ತಿದ್ದ ಸುಮಾರು 11 ಮಂದಿಯ ತಂಡವನ್ನು ಖಚಿತ ಮಾಹಿತಿಯ ಮೇರೆಗೆ ಉಡುಪಿ ಜಿಲ್ಲಾ ಅಧೀಕ್ಷಕ ವಿಷ್ಣುವರ್ಧನ್ , ಹಾಗು ಹೆಚ್ಚುವರಿ ಪೋಲೀಸರ ಅಧೀಕ್ಷಕರಾದ ಕುಮಾರ್ ಚಂದ್ರ ನೇತೃತ್ವದಲ್ಲಿ ಕುಂದಾಪುರದ ಪೊಲೀಸ್ ವೃತ್ತ ನಿರೀಕ್ಷಕರಾದ ಗೋಪಿಕೃಷ್ಣ ಕೆ ಆರ್ ರವರ ತಂಡ ಕುಂದಾಪುರ ಪ್ರಭು ಪೆಟ್ರೋಲ್ ಬಂಕ್ ಬಳಿ 2 ಟವೆರಾ ಕಾರುಗಳಲ್ಲಿ ಚಿನ್ನದ ನಾಣ್ಯಗಳು ಸೇರಿದಂತೆ ಸುಮಾರು 56 ಲಕ್ಷ ಮೌಲ್ಯದ ಅಕ್ರಮ ಚಿನ್ನವನ್ನು ವಶಪಡಿಸಿಕೊಂಡಿದ್ದಾರೆ ಹಾಗು ಬಂಧಿತರನ್ನು ಹೆಚ್ಚಿನ ವಿಚಾರಣೆ ನಡೆಸಲಾಗುತ್ತಿದ್ದೆ ಎಂಬುದಾಗಿ ಪೊಲೀಸ್ ಮಾಹಿತಿ ತಿಳಿಸಿದೆ.