ಐಸಿವೈಎಂ ಉದ್ಯಾವರ: ಮೀನು ಮಾರಾಟ ಮಹಿಳೆಯರಿಗೆ ಸನ್ಮಾನ

ಉಡುಪಿ: ಐಸಿವೈಎಂ ಉದ್ಯಾವರ ಸುವರ್ಣ ಮಹೋತ್ಸವ ಸಮಿತಿ ಹಾಗೂ ಸಂತ ಫ್ರಾನ್ಸಿಸ್ ಕ್ಲೇವಿಯರ್ ದೇವಾಲಯ ಉದ್ಯಾವರ ಇವರ ನೇತೃತ್ವದಲ್ಲಿ ವಿಶ್ವ ಮಹಿಳಾ ದಿನಾಚರಣೆ ಅಂಗವಾಗಿ ಮೀನು ಮಾರಾಟ ಮಾಡುವ ಹಿರಿಯ ಮಹಿಳೆಯರನ್ನು ಶನಿವಾರ ಸನ್ಮಾನಿಸಲಾಯಿತು.


ಉಡುಪಿ ಹೈಟೆಕ್ ಮಾರುಕಟ್ಟೆಯಲ್ಲಿ ಮೀನು ಮಾರಾಟ ವೃತ್ತಿ ಮಾಡುತ್ತಿರುವ 100 ಕ್ಕೂ ಮಂದಿಯನ್ನು ಗೌರವಿಸಲಾಯಿತು. ನಗರಸಭಾ ಸದಸ್ಯೆ ಅಮೃತಾ ಕೃಷ್ಣಮೂರ್ತಿ ಮಾತನಾಡಿ, ನಾವೆಲ್ಲ ಪ್ರಸ್ತುತ ಸಮಾನತೆಯ ಬಗ್ಗೆ ಮಾತನಾಡುತ್ತಿದ್ದೇವೆ. ಆದರೆ ಮೀನುಗಾರರ ಕುಟುಂಬದಲ್ಲಿ ಬಹಳ ಹಿಂದಿನಿಂದಲೂ ಸಮಾನತೆಯನ್ನು ಅಳವಡಿಸಿಕೊಂಡಿದ್ದರು. ಪುರುಷರು ಬೋಟ್‌ಗೆ ತೆರಳಿ ಮೀನು ಹಿಡಿದು ತಂದರೆ ಮೀನುಗಾರ ಮಹಿಳೆಯರು ತಲೆಯ ಮೇಲೆ ಹೊತ್ತುಕೊಂಡು ಮಾರಾಟ ಮಾಡುವ ಮೂಲಕ ಆರ್ಥಿಕವಾಗಿ ಪುರುಷರಷ್ಟೇ ಸದೃಢರಾಗಿದ್ದರು.

ಇದು ಈ ಸಮುದಾಯದ ವಿಶೇಷ. ಈ ರೀತಿಯ ಬದಲಾವಣೆ ಪ್ರತಿ ಸಮಾಜದಲ್ಲೂ ಆಗಬೇಕೆಂದು ಸಲಹೆ ನೀಡಿದರು.

ಉಡುಪಿ ಮೀನು ಮಾರುಕಟ್ಟೆಯಲ್ಲಿ ಹಿರಿಯ ಮೂರು ಮಹಿಳೆಯರಿಗೆ ಅವರ ಸೇವೆಯನ್ನು ಗುರುತಿಸಿ ಐಸಿವೈಎಂ ಉದ್ಯಾವರ ಸುವರ್ಣ ಮಹೋತ್ಸವ ಸಮಿತಿ ಸನ್ಮಾನಿಸಿತು. ಬೇಬಿ ಸಾಲ್ಯಾನ್ ಕೊಡವೂರು, ಲಲಿತಾ ಅಮೀನ್ ಪಡುಕೆರೆ, ಸುಮತಿ ಬಂಗೇರ ಪಿತ್ರೋಡಿ ಇವರನ್ನು ಅತಿಥಿಗಳು ಸನ್ಮಾನಿಸಿದರು.


ಮೀನುಗಾರ ಮಹಿಳೆಯರ ಸಂಘದ ಅಧ್ಯಕ್ಷೆ ಬೇಬಿ ಸಾಲ್ಯಾನ್ ಮಾತನಾಡುತ್ತಾ, ನಮ್ಮ ಮಹಿಳೆಯರು ತಮ್ಮ ಕುಟುಂಬವನ್ನು ನಡೆಸುವುದರ ಜೊತೆಗೆ, ಮೀನು ಮಾರಾಟ ಮಾಡುವ ಮೂಲಕ ತಮ್ಮ ಕುಟುಂಬವನ್ನು ನಡೆಸುತ್ತಿದ್ದಾರೆ. ಹಲವು ಬಾರಿ ತಾವು ಖರೀದಿಸಿದ ಮೀನುಗಳನ್ನು ಉತ್ತಮ ಬೆಲೆಗೆ ಮಾರಾಟ ಮಾಡಲು ಅಸಾಧ್ಯವಾದರೂ, ತಮ್ಮ ಬಳಿಗೆ ಬರುವ ಗ್ರಾಹಕರಿಗೆ ತೃಪ್ತ ರಾಗುವಂತೆ ಮಾಡುತ್ತಿದ್ದಾರೆ. ಬಂದಂತಹ ಗ್ರಾಹಕರು ಹೆಚ್ಚು ಚರ್ಚೆ ಮಾಡದೆ ಮೀನುಗಳನ್ನು ತೆಗೆದುಕೊಂಡರೆ, ಮಹಿಳೆಯರಿಗೂ ತಮ್ಮ ಕುಟುಂಬ ಜೀವನ ನಡೆಸಲು ಆಧಾರವಾಗುತ್ತದೆ ಎಂದರು.
ಉಡುಪಿ ಮೀನು ಮಾರುಕಟ್ಟೆಯಲ್ಲಿರುವ ನೂರಕ್ಕೂ ಅಧಿಕ ಮಹಿಳೆಯರಿಗೆ ಐಸಿವೈಎಂ ಉದ್ಯಾವರ ಸುವರ್ಣ ಮಹೋತ್ಸವ ಸಮಿತಿಯ ಪರವಾಗಿ ಅತಿಥಿಗಳು ಶಾಲು ಹೊದಿಸಿ, ಗುಲಾಬಿ ಹೂ ನೀಡಿ ಮತ್ತು ಸಿಹಿ ತಿಂಡಿ ನೀಡಿ ಗೌರವಿಸಿದರು.

ಅಮೃತ್ ಶೆಣೈ, ಸಂತ ಫ್ರಾನ್ಸಿಸ್ ಜೇವಿಯರ್ ದೇವಾಲಯದ ಪಾಲನಾ ಮಂಡಳಿಯ ಉಪಾಧ್ಯಕ್ಷ ಮೆಲ್ವಿನ್ ನೊರೋನ್ನ, ಮದರ್ ತೆರೇಸಾ ಸ್ತ್ರೀ ಸಂಘಟನೆಯ ಅಧ್ಯಕ್ಷೆ ಲೀನಾ ಮೆಂಡೋನ್ಸಾ, ಐಸಿವೈಎಂ ಸುವರ್ಣ ಮಹೋತ್ಸವ ಸಮಿತಿಯ ನಿರ್ದೇಶಕರಾದ ರೊನಾಲ್ಡ್ ಡಿಸೋಜ, ಜೆರಾಲ್ಡ್ ಪಿರೇರ, ಟೆರೆನ್ಸ್ ಪಿರೇರ, ಮ್ಯಾಕ್ಸಿಂ ಡಿಸಿಲ್ವ, ಪ್ರಧಾನ ಕಾರ್ಯದರ್ಶಿ ಡೋರಾ ಅರೋಜ, ಐಸಿವೈಎಂ ಅಧ್ಯಕ್ಷ ರೋಯಲ್ ಕಾಸ್ತೆಲಿನೋ, ಸಲಹೆಗಾರ ಜೂಲಿಯಾ ಡಿಸೋಜಾ ಮತ್ತು ಪ್ರಮುಖರಾದ ವಿಲ್ಫ್ರೆಡ್ ಡಿಸೋಜ, ಜಾನ್ ಪ್ರಶಾಂತ್ ಗೋಮ್ಸ್, ಪ್ರಿಯಾಂಕಾ ಡಿಸೋಜಾ, ಜೂಲಿಯನ್ ದಾಂತಿ, ಪ್ರೇಮ್ ಮಿನೇಜಸ್ ಮತ್ತಿತರರು ಉಪಸ್ಥಿತರಿದ್ದರು.

1 thought on “ಐಸಿವೈಎಂ ಉದ್ಯಾವರ: ಮೀನು ಮಾರಾಟ ಮಹಿಳೆಯರಿಗೆ ಸನ್ಮಾನ

  1. Great initiative, well-done ICYM Udyavara, keep it up and may God bless you all.
    -Richard Lewis, Udyavara/Bangalore

Leave a Reply

Your email address will not be published. Required fields are marked *

error: Content is protected !!