ಭಾರತಕ್ಕೆ ಬಂದು ರೋಗ ಹರಡಲು ಇಷ್ಟವಿಲ್ಲ, ಸತ್ತರೇ ಚೀನಾದಲ್ಲೇ ಸಾಯುತ್ತೇನೆ ಎಂದ ಕನ್ನಡಿಗ
ತುಮಕೂರು: ಮೂಲದ ವಿದ್ಯಾರ್ಥಿಯೋರ್ವ ಚೀನಾದಲ್ಲಿ ವೈದ್ಯಕೀಯ ವ್ಯಾಸಂಗ ಮಾಡುತ್ತಿದ್ದು ಕೊರೋನಾ ವೈರಸ್ ನಿಂದ ಕಂಗೆಟ್ಟಿರುವ ಚೀನಾದಿಂದ ಭಾರತಕ್ಕೆ ಬಂದು ಆತಂಕ ಸೃಷ್ಟಿಸಲ್ಲ, ನನಗೂ ವೈರಸ್ ಸೋಂಕಿದರೆ ಇಲ್ಲೇ ಸಾಯುತ್ತೇನೆ ಎಂದು ಹೇಳಿರುವ ವಿಡಿಯೋ ಇದೀಗ ವೈರಲ್ ಆಗಿದೆ.
ವೈದ್ಯಕೀಯ ವಿದ್ಯಾರ್ಥಿ ಸಾಹಿಲ್ ಹುಸೇನ್ ಚೀನಾದ ವಾನ್ಲಿ ಜಿಲ್ಲೆಯಲ್ಲಿ ಮೂರು ವರ್ಷಗಳಿಂದ ಉಳಿದುಕೊಂಡಿದ್ದಾರೆ. ನಾಚಂಗ್ ಸಿಟಿಯ ಜಿಯಾಂಗ್ಸಿ ಯೂನಿರ್ವಸಿಟಿ ಆಫ್ ಟ್ರಡಿಷನಲ್ ಅಂಡ್ ಚೈನೀಸ್ ಮೆಡಿಸಿನ್ಸ್ ವೈದ್ಯಕೀಯ ವಿಶ್ವವಿದ್ಯಾಲಯದಲ್ಲಿ ವೈದ್ಯಕೀಯ ವ್ಯಾಸಂಗ ಮಾಡುತ್ತಿದ್ದಾರೆ. ಇವರು ತುಮಕೂರಿನ ಶಿಕ್ಷಕ ರಿಜ್ವಾನ್ ಭಾಷಾ ಅವರ ಕಿರಿಯ ಪುತ್ರ.
ಸಾಹಿಲ್ ವಿಡಿಯೋವೊಂದನ್ನು ಮಾಡಿ ಸಾಮಾಜಿಕ ಜಾಲತಾಣಕ್ಕೆ ಹರಿಬಿಟ್ಟಿದ್ದಾರೆ. ಈ ವಿಡಿಯೋದಲ್ಲಿ ಭಾರತಕ್ಕೆ ಬಂದು ರೋಗ ಹರಡಲು ಇಷ್ಟವಿಲ್ಲ ಎಂದು ಹೇಳಿದ್ದು ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.