ತಬ್ಲೀಘಿಗಳ ವರ್ತನೆ ಖಂಡಿಸುತ್ತೇನೆ, ಕಾರ್ಯಕರ್ತರ ಬೆಂಬಲಕ್ಕೆ ನಿಲ್ಲುತ್ತೇನೆ: ಸುನಿಲ್ ಕುಮಾರ್
ಉಡುಪಿ (ಉಡುಪಿ ಟೈಮ್ಸ್ ವರದಿ) ದೆಹಲಿ ನಿಜಾಮುದ್ದಿನ್ ಪ್ರಕರಣದ ಬಳಿಕ ದೇಶದಲ್ಲಿ ಕೊರೋನಾ ಹೆಚ್ಚಳ ಆರೋಪ ಒಂದು ಸಮುದಾಯದ ಮೇಲೆ ಬಂದಿದ್ದು, ಕಾರ್ಯಕರ್ತರು, ಜನಸಾಮಾನ್ಯರುಹಾಗು ಅನೇಕ ರಾಜಕಾರಣಿಗಳು ಸಾಮಾಜಿಕ ಜಾಲತಾಣದಲ್ಲಿ ಮುಸ್ಲಿಂ ಸಮುದಾಯದ ವಿರೋಧ ವ್ಯಕ್ತಪಡಿಸಿದರು.
ಇದರಿಂದ ಗರಂ ಅದ ಮುಖ್ಯಮಂತ್ರಿ ಯಡಿಯೂರಪ್ಪರವರು ಒಬ್ಬರು ಮಾಡಿದ ತಪ್ಪಿಗೆ ಇಡೀ ಸಮುದಾಯವನ್ನ ದೂಷಿಸುವುದು ಸರಿಯಲ್ಲ, ಮುಸ್ಲಿಂ ವಿರುದ್ಧ ಮಾತನಾಡಿದವರಿಗೆ ಕಠಿಣ ಕ್ರಮ ಕೈಗೊಳ್ಳಾಗುವುದು ಎಂದು ಎಚ್ಚರಿಸಿದರು. ಮುಖ್ಯಮಂತ್ರಿಗಳ ಈ ಮಾತಿಗೆ ಬಿಜೆಪಿ ಪಕ್ಷದವರಿಂದ ವಿರೋದ ವ್ಯಕ್ತವಾಗಿದ್ದು, ಈ ಹೇಳಿಕೆ ಕಾಂಗ್ರೆಸ್ ವಲಯದಿಂದ ಹರ್ಷ ವ್ಯಕ್ತವಾಗಿತ್ತು. ಆದರೆ ನಿನ್ನೆ ರೇಣುಕಾಚಾರ್ಯ ತಬ್ಲೀಘಿಗಳ ವಿರುದ್ಧ ಮಾತಾಡಿ ಸುದ್ದಿಯಾಗಿದ್ದ ಬೆನ್ನಲ್ಲೇ ಇಂದು ಕಾರ್ಕಳ ಶಾಸಕ ಸುನಿಲ್ ಕುಮಾರ್ ತಬ್ಲೀಕ್ ಗಳ ವಿರುದ್ಧ ಗರಂ ಆಗಿ ಟ್ವಿಟ್ ಮಾಡಿದ್ದಾರೆ.
ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಟ್ವಿಟ್ ಮಾಡಿದ ಸುನಿಲ್ ತಬ್ಲೀಘಿ ಗಳ ವರ್ತನೆಯನ್ನು ನಾನು ಉಗ್ರವಾಗಿ ಖಂಡಿಸುತ್ತೇನೆ, ಅವರ ವಿರುದ್ಧ ಮಾತನಾಡಿದ ಕಾರ್ಯಕರ್ತರ ಬೆಂಬಲಕ್ಕೆ ನಾನು ನಿಲ್ಲುತ್ತೇನೆ,ಇದೆ ನನ್ನ ಪ್ರಥಮ ಆದ್ಯತೆ ಎಂದು ಟ್ವೀಟ್ ಮಾಡಿದ್ದಾರೆ.