ನೋಂದಣಿ, ಗಣಿ ಇಲಾಖೆಯಲ್ಲಿ ನೂರಾರು ಕೋಟಿ ಆದಾಯ ಖೋತ
ಬೆಂಗಳೂರು: ರಾಜ್ಯ ಸರ್ಕಾರದ ಪ್ರಮುಖ ಆದಾಯ ಮೂಲಗಳಾದ ವಾಣಿಜ್ಯ ತೆರಿಗೆಗಳ ಇಲಾಖೆ, ಮುದ್ರಾಂಕ ಮತ್ತು ನೋಂದಣಿ ಇಲಾಖೆ ಹಾಗೂ ಗಣಿ ಮತ್ತು ಭೂವಿಜ್ಞಾನ ಇಲಾಖೆಯಡಿ 2017-18ನೇ ಸಾಲಿನಲ್ಲಿ ರಾಜಸ್ವಕ್ಕೆ ಸಂಬಂಧಪಟ್ಟಂತೆ ಮಹಾಲೇಖಪಾಲರ ವರದಿ ಗುರುವಾರ ಮಂಡನೆಯಾಗಿದ್ದು, ನೂರಾರು ಕೋಟಿ ರೂ. ಆದಾಯ ಖೋತಾ ಆಗಿರುವುದು ವರದಿಯಲ್ಲಿದೆ.
ಪ್ರಮುಖವಾಗಿ ಮದ್ಯ ಮಾರಾಟದ ಮೇಲೆ ತೆರಿಗೆಯನ್ನು ಕಡಿಮೆ ಪ್ರಮಾಣದಲ್ಲಿ ವಿಧಿಸಿರು ವುದು.ಲೆಕ್ಕ ಪರಿಶೋಧನೆಗೆ ಒಳಪಟ್ಟ ಲೆಕ್ಕಪತ್ರಗಳಲ್ಲಿ ಘೋಷಿಸಲಾಗಿದ್ದ ವ್ಯತ್ಯಾಸದ ತೆರಿಗೆ ಪಾವತಿಸದಿರುವುದು. ಕಾಮಗಾರಿ ಗುತ್ತಿಗೆದಾರರಿಗೆ ಸಂಬಂಧಿಸಿದಂತೆ ತೆರಿಗೆ ಕಡಿಮೆ ಪ್ರಮಾಣದಲ್ಲಿ ವಿಧಿಸಿರುವುದು. ಖರೀದಿಗಳ ಮೇಲಿನ ತೆರಿಗೆ ಜಮೆಯ ರೂಪದಲ್ಲಿ ಆದಾಯ ನಷ್ಟವಾಗಿರುವ ಬಗ್ಗೆ ವರದಿಯಲ್ಲಿ ತಿಳಿಸಲಾಗಿದೆ.
ಈ ನಡುವೆ ಲೆಕ್ಕಪರಿಶೋಧನೆಗೆ ಕಡತಗಳನ್ನು ಸಲ್ಲಿಸದಿರುವುದನ್ನೂ ವರದಿಯಲ್ಲಿ ಉಲ್ಲೇಖಿ ಸಲಾಗಿದೆ. 2017-18ನೇ ಸಾಲಿನಲ್ಲಿ ಹಣಕಾಸು, ಕಂದಾಯ, ಸಾರಿಗೆ, ವಾಣಿಜ್ಯ ಮತ್ತು ಕೈಗಾರಿಕೆ ಹಾಗೂ ಇಂಧನ ಇಲಾಖೆಗಳ 386 ಕಚೇರಿಗಳ ಪೈಕಿ ಹಣಕಾಸು,ಕಂದಾಯ ಇಲಾಖೆ ಅಡಿಯ ಲ್ಲಿ ಹಲವು ಕಚೇರಿಗಳಲ್ಲಿ ಲೆಕ್ಕ ಪರಿಶೋಧನೆಗಾಗಿ 35 ದಾಖಲೆ ಒದಗಿಸಿಲ್ಲ. ಇದರಿಂದಾಗಿ ಕರ ನಿರ್ಧಾರಣೆ ಹಾಗೂ ವಿಧಿಸಲಾದಂತಹ ತೆರಿಗೆಗಳು ಅಥವಾ ವಸೂಲಾತಿ ಸಂಗ್ರಹವಾದಂತಹ ವರಮಾನದ ಬಗ್ಗೆ ಖಚಿತತೆ ಪಡೆಯಲಾಗಿಲ್ಲ ಎಂದು ಉಲ್ಲೇಖಿಸಲಾಗಿದೆ.