ಹೊಸಬೆಳಕು ಇಸ್ರೇಲ್ ಸೇವಾ ತಂಡ 2019-20ಸಾಲಿನ ಸಮಿತಿ ಆಯ್ಕೆ

ಇಸ್ರೇಲ್ – ಹೊಸಬೆಳಕು ಇಸ್ರೇಲ್ ಸೇವಾ ತಂಡ ಸ್ವಇಚ್ಛೆ ಹಾಗು ಖಾಯಂ ಸದಸ್ಯರ ಮತ ಹಕ್ಕು ಮೂಲಕ 2019-20 ರ ಸಾಲಿನ ಹುದ್ದೆದಾರರ ಸಮಿತಿಯನ್ನ ಆಯ್ಕೆ ಮಾಡಲಾಯಿತು. ಹೊಸ ಬೆಳಕು ಇಸ್ರೇಲ್ ತಂಡ ಭಾರತದಲ್ಲಿ ಸಮಸ್ಯೆಗೀಡಾದವರಿಗೆ ಹಾಗು ಆರ್ಥಿಕವಾಗಿ ಹಿಂದುಳಿದವರಿಗೆ ಭೇದ ಭಾವವಿಲ್ಲದೆ ಸುಮಾರು ನೂರಕ್ಕೂ ಹೆಚ್ಚು ಕುಟುಂಬಗಳಿಗೆ ಧನ ಸಹಾಯ ಮಾಡಿದ್ದಾರೆ.
ಮೂರೂ ವರ್ಷಗಳ ಹಿಂದೆ ಇಸ್ರೇಲ್ ನಲ್ಲಿ ಬೆಳ್ತಂಗಡಿಯ ಪ್ರವೀಣ್ ಪಿರೇರಾ ಹಾಗು 3 ಜನರೊಂದಿಗೆ ಆರಂಭವಾದ ಈ ಸಂಸ್ಥೆ ಈಗ 50 ಜನ ಸದ್ಯಸರು ಸೇರ್ಪಡೆಗೊಂಡಿದ್ದಾರೆ. ಪ್ರತಿ ತಿಂಗಳು ಇದರ ಸದಸ್ಯರು  ತಮ್ಮ ತಿಂಗಳಿನ ಸಂಬಳದ ಒಂದು ಭಾಗವನ್ನು ಸ್ವಇಚ್ಛೆಯಿಂದ  ಯೋಜನೆಗಳಿಗೆ ನೀಡುತ್ತಾರೆ. ಬಂದ ಮನವಿಗಳನ್ನು ಸರಿಯಾಗಿ ಪರಿಶೀಲನೆ ಮಾಡಿ ಯೋಜನೆಯ ಮೊತ್ತವನ್ನು ಹಸ್ತಾಂತರಿಸುತ್ತಾರೆ .  2019-20 ಸಾಲಿನ ಅಧ್ಯಕ್ಷರಾಗಿ ಪಿಂಚು ಮೊಗರ್ನಾಡ್ ಆಯ್ಕೆ ಯಾದರು , ಉಪಧ್ಯಕ್ಷರಾಗಿ ನವೀನ  ಫೂರ್ತಾದೊ . ಕಾರ್ಯದರ್ಶಿಯಾಗಿ ರೇಶ್ಮಾ ನೊರೊನ್ಹಾ ರವರನ್ನು ಆಯ್ಕೆ ಮಾಡಲಾಯಿತು. ಸ್ಥಾಪಕಾದ್ಯಕ್ಷ ಪ್ರವೀಣ್ ಪ್ರಕ್ರಿಯೆ ನಡೆಸಿಕೊಟ್ಟರು. ಫಿಲೋಮಿನಾರವರು ಧನ್ಯವಾದ ನೀಡಿದರು 

Leave a Reply

Your email address will not be published. Required fields are marked *

error: Content is protected !!