ವಾಟ್ಸ್‌ಆಪ್‌ನಲ್ಲಿ ತೇಜೋವಧೆ: ತನಿಖೆಗೆ ಗೃಹ ಸಚಿವರ ಆದೇಶ
ಉಡುಪಿ: ಕುಂದಾಪುರ ಶಾಸಕ ಹಾಲಾಡಿ ಶ್ರೀನಿವಾಸ ಶೆಟ್ಟಿ ವಿರುದ್ದದ ವಾಟ್ಸ್‌ಆಪ್ ಮೂಲಕ ತೇಜೊವಧೆ ಮಾಡಿದ ಬಗ್ಗೆ ಆಕ್ರೋಶಗೊಂಡ ಶಾಸಕರು ಗೃಹ ಸಚಿವ ಬಸವರಾಜ್ ಬೊಮ್ಮಯಿಯಲ್ಲಿ ಶುಕ್ರವಾರ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ಸಭೆಯಲ್ಲಿ ದೂರಿಕೊಂಡ ಘಟನೆ ನಡೆದಿದೆ.
ಜಿಲ್ಲೆಯಲ್ಲಿ ಮರಳು ಸಮಸ್ಯೆ ,ಕುಂದಾಪುರ ರಾಷ್ಟ್ರೀಯ ಹೆದ್ದಾರಿಯ ಮೇಲ್ಸೇತುವೆ, ಸಾರ್ವಜನಿಕ ಆಸ್ಪತ್ರೆ, ಕಸ್ತೂರಿ ರಂಗನ್ ವರದಿ ಬಗ್ಗೆ ಯಾವುದೇ ಮುತುರ್ವಜಿ ವಹಿಸದ ಶಾಸಕರು ತಮ್ಮ ಆಪ್ತ ವಿದೇಶದಲ್ಲಿರುವ ಉದ್ಯಮಿಗೆ ಬ್ರಹ್ಮಾವರದಲ್ಲಿ ಬಾರ್ & ರೆಸ್ಟೋರೆಂಟಿನ ಪರಾವನಿಗೆಗೆ ಜಿಲ್ಲಾಧಿಕಾರಿ ಕಛೇರಿಗೆ ಓಡೋಡಿ ಬಂದು ಅಧಿಕಾರಿಗಳ ಜೊತೆ ಚರ್ಚಿಸಿದರು ಎಂಬ ಒಕ್ಕಣೆಯಿರುವ ಮೆಸೆಜ್ ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿತ್ತು.
ಇದರಿಂದ ನನಗೆ ಬಹಳ ಬೇಸರವಾಗಿದೆ, ಮಾತ್ರವಲ್ಲದೆ ಈ ಮೆಸೆಜ್‌ನಿಂದ ನನ್ನ ತೇಜೋವಧೆ ಮಾಡಲಾಗಿದೆ ನಾನು ಇಂತಹ ವಿಷಯದ ಬಗ್ಗೆ ಜಿಲ್ಲಾಧಿಕಾರಿ ಕಛೇರಿಯಲ್ಲಿ ಚರ್ಚಿಸಿಯೇ ಇಲ್ಲ, ಅಬಕಾರಿ ಡಿಸಿ ಬಳಿ ಪ್ರವಾಸೋಧ್ಯಮ ಇಲಾಖೆ ಅಡಿ ಸಿಎಲ್ 7 ಪರಾವನಿಗೆ ನೀಡಲು ಇರುವ ಷರತ್ತು ಬಗ್ಗೆ ವಿಚಾರಿಸಿದ್ದೇನೆ ಹೊರತು ಬೇರೆ ಯಾರಿಗೂ ಪರವಾಗಿ ನೀಡುವ ಬಗ್ಗೆ ಚರ್ಚೆ ಮಾಡಿಲ್ಲವೆಂದರು.
ಈ ಬಗ್ಗೆ ಜಿಲ್ಲಾ ಉಸ್ತುವಾರಿ, ರಾಜ್ಯ ಗೃಹ ಸಚಿವ ಬಸವರಾಜ್ ಬೊಮ್ಮಯಿ ಶಾಸಕರ ತೇಜೋ ವಧೆ ಮಾಡಿದ ಯಾರೇ ಕಿಡಿಗೆಡಿಗಳಿರಲಿ ಅವರನ್ನು ಪತ್ತೆ ಹಚ್ಚಿ, ನಿರ್ದಾಕ್ಷೀಣ್ಯ ಕ್ರಮ ಕೈಗೊಳ್ಳುವಂತೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ನಿಶಾ ಜೇಮ್ಸ್‌ಗೆ ಆದೇಶ ಮಾಡಿದರು.
ಮಾತ್ರವಲ್ಲದೆ ಜಿಲ್ಲಾಧಿಕಾರಿ ಕಚೇರಿ ಬಳಿಯ ಕೊಠಡಿಯಲ್ಲಿ ಈ ಬಗ್ಗೆ ಚರ್ಚೆ ನಡೆದಿರುವುದರಿಂದ ಜಿಲ್ಲಾಧಿಕಾರಿ ಜಿ.ಜಗದೀಶ ಅವರೇ ಇದರ ಆಂತರಿಕ ತನಿಖೆ ನಡೆಸಿ ವರದಿ ನೀಡುವಂತೆ ಗೃಹ ಸಚಿವ ಬೊಮ್ಮಯಿ ಆದೇಶ ನೀಡಿದರು.