ಮುಂಬೈಯಿಂದ ಹುಬ್ಬಳ್ಳಿಗೆ ಪ್ರಯಾಣಿಸಿದ ಉಡುಪಿಯ ಒಂದೇ ಕುಟುಂಬದ 8 ಸದಸ್ಯರಿಗೆ ಹೋಂ ಕ್ವಾರಂಟೈನ್
ಉಡುಪಿ (ಉಡುಪಿ ಟೈಮ್ಸ್ ವರದಿ ): ಮುಂಬೈಯಿಂದ ಹುಬ್ಬಳ್ಳಿಗೆ ಪ್ರಯಾಣಿಸಿದ ಉಡುಪಿಯ ಒಂದೇ ಕುಟುಂಬದ ಎಂಟು ಸದಸ್ಯರಿಗೆ ಕೊರೋನಾ ಸೋಂಕು ಹರಡಿರುವ ಸಾಧ್ಯತೆ ಇರುವುದರಿಂದ ಎಲ್ಲರನ್ನು ಹೋಂ ಕ್ವಾರಂಟೈನೆಗೆ ಒಳಪಡಿಸಲಾಗಿದೆ.
ಬ್ಯಾಂಕ್ ಉದ್ಯೋಗಿ ತನ್ನ ಏಳು ಮಂದಿ ಕುಟುಂಬದ ಸದಸ್ಯರೊಂದಿಗೆ ಮಾ.19 ರಂದು ಖಾಸಗಿ ಬಸ್‌ನಲ್ಲಿ ಮುಂಬಾಯಿಂದ ಹುಬ್ಬಳ್ಳಿಗೆ ಪ್ರಯಾಣ ಬೆಳಿಸಿದ್ದರು. ಈ ಬಸ್‌ನಲ್ಲಿ ಧಾರವಾಡ ಜಿಲ್ಲೆಯ ಸೋಂಕಿತನು ಕೂಡ ಪ್ರಯಾಣ ಮಾಡಿದ್ದರಿಂದ ಈ ಕುಟುಂಬದ ಎಂಟು ಮಂದಿಯನ್ನು ವೈದ್ಯಕೀಯ ತಪಾಸಣೆಗೆ ಒಳಪಡಿಸುವಂತೆ ಧಾರವಾಡ ಜಿಲ್ಲಾಧಿಕಾರಿ ಉಡುಪಿ ಜಿಲ್ಲಾಧಿಕಾರಿಯವರಿಗೆ ಪತ್ರ ಬರೆದಿದ್ದಾರೆ.
ಈ ಬಗ್ಗೆ “ಉಡುಪಿ ಟೈಮ್ಸ್” ಜಿಲ್ಲಾ ಆರೋಗ್ಯ ಇಲಾಖೆಯಲ್ಲಿ ಮಾತನಾಡಿಸಿದಾಗ ಕುಟುಂಬದ ಎಲ್ಲಾ ಸದಸ್ಯರನ್ನು ಕ್ವಾರಂಟೈನ್ ಮಾಡಲಾಗಿದೆ.ಇವರ ರಕ್ತ ಮಾದರಿಯನ್ನು ಮಂಗಳೂರು ಪ್ರಯೋಗಾಲಕ್ಕೆ ಕಳುಹಿಸಿದ್ದು, ಇನ್ನೆರಡು ದಿನದಲ್ಲಿ ವರದಿ ಕೈ ಸೇರುವುದಾಗಿ ತಿಳಿಸಿದ್ದಾರೆ.
ಬಸ್‌ನಲ್ಲಿ ಪ್ರಯಾಣಿಸಿದ ಸೋಂಕಿತನಿಗೆ ಏ.9 ರಂದು ಕೊರೋನಾ ಸೋಂಕು ದೃಢವಾಗಿದ್ದು, ಉಡುಪಿಯ ಕುಟುಂಬದ ಸದಸ್ಯರು ಮಾ.19 ರಂದು ಬಸ್ ನಲ್ಲಿ ಪ್ರಯಾಣ ಮಾಡಿದ್ದರಿಂದ ಸೋಂಕು ತಗಲುವ ಸಾಧ್ಯತೆ ಬಹುತೇಕ ಕಡಿಮೆ ಎಂದು ಹೇಳಿದ್ದು, ಯಾವುದಕ್ಕೂ ವರದಿ ಬಂದ ಬಳಿಕ ಸ್ಪಷ್ಟತೆ ತಿಳಿಯುತ್ತದೆಂದು ಆರೋಗ್ಯಧಿಕಾರಿಗಳು ತಿಳಿಸಿದ್ದಾರೆ.
ಸುದ್ದಿ ಪ್ರಕಟಿಸುವ ಮುನ್ನ ಸ್ವಲ್ಪ ಸತ್ಯಾ ಸತ್ಯತೆ ಅರಿತು ಜವಾಬ್ದಾರಿ ಮೆರೆಯಿರಿ .. ಈತ ಮತ್ತು ಇವನ ಸಂಸಾರ ನನಗೆ ಪರಿಚಯವಿದೆ ಹಾಗೂ ಈತ ಮುಂಬಯಿ ಇಂದ ಹುಬ್ಬಳ್ಳಿಗೆ ಪ್ರಯಾಣಿಸಿಲ್ಲ .. ಧಾರವಾಡ ಜಿಲ್ಲಾಡಳಿತದ ತಪ್ಪು ಮಾಹಿತಿ ಹಾಗೂ ಉಡುಪಿ ಜಿಲ್ಲಾಡಳಿತದ ಮಾಹಿತಿ ಸೋರಿಕೆಯಿಂದಾಗಿ ಆತ ಮತ್ತು ಅವನ ಸಂಸಾರಕ್ಕೆ ಆಗುತ್ತಿರುವ ಕಿರಿ ಕಿರಿಗೆ ಯಾರು ಹೊಣೆ ?? ಆತ ಎಲ್ಲಾ ರೀತಿಯ ಸಹಕಾರ ಕೊಟ್ಟಾಗಿದೆ . ಕೊಡುತ್ತಾನೆ ಕೂಡ. ಸುದ್ದಿಯ ಚಪಲಕ್ಕೆ ಸತ್ಯಾ ಸತ್ಯತೆ ಅರಿಯದೆ ಗೀಚಬೇಡಿ.
ಜಾಸ್ತಿ ಮಾಹಿತಿ ಬೇಕಾದಲ್ಲಿ ನನ್ನನ್ನೂ ಸಂಪರ್ಕಿಸಿ . 9980155497