ಹಿರಿಯಡ್ಕ: ಓಯಸಿಸ್ ಹಾಲ್ ಬಳಿ ಯುವಕನ ಅಸ್ಥಿಪಂಜರ ಪತ್ತೆ
ಹಿರಿಯಡ್ಕ: ಇಲ್ಲಿನ ಓಯಸಿಸ್ ಹಾಲ್ ಬಳಿಯ ಗೇರು ತೋಟದ ಹಾಡಿಯಲ್ಲಿ ಯುವಕನೊರ್ವನ ಅಸ್ಥಿ ಪಂಜರ ಪತ್ತೆಯಾಗಿದೆ. ಮೃತ ದೇಹದ ೧೫ ಮೀಟರ್ ದೂರದಲ್ಲಿ ದೊರೆತ ಬ್ಯಾಗ್ನಲ್ಲಿ ಪತ್ತೆಯಾದ ಕಾಂತಾವರದ ನಯಾತೋಟ ಗೋಪಾಲ ದೇವಾಡಿಗರ ಮಗ ರಾಜೇಶ್ ದೇವಾಡಿಗ (37)ವಿಳಾಸ ವಿರುವ ಮತದಾರರ ಗುರುತಿನ ಚೀಟಿ ದೊರೆತಿದ್ದಾಗಿ ಹಿರಿಯಡ್ಕ ಪೊಲೀಸರು ತಿಳಿಸಿದ್ದಾರೆ.
ಯುವಕ ಅವಿವಾಹಿತನಾಗಿದ್ದು, ಮಂಗಳೂರು ಕೆಎಂಸಿ ಆಸ್ಪತ್ರೆಯ ಕ್ಯಾಂಟಿನ್ನ ಉದ್ಯೋಗಿಯಾಗಿ ದುಡಿಯುತ್ತಿದ್ದ, ಈತ ಕಳೆದ ಒಂದು ತಿಂಗಳ ಹಿಂದೆ ನಾಪತ್ತೆಯಾದ ಬಗ್ಗೆ ಮಂಗಳೂರು ಪಾಂಡೇಶ್ವರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿತ್ತು. ಯಾವುದೋ ವಿಷಯಕ್ಕೆ ನೊಂದು ಯುವಕ ಮರಕ್ಕೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದು, ಆತ್ಮಹತ್ಯೆಗೂ ಮುನ್ನ ನನ್ನ ಸಾವಿಗೆ ನಾನೇ ಕಾರಣವೆಂದು ಡೆತ್ ನೋಟ್ ಬರೆದಿದ್ದ. ರಾಜೇಶ್ ಮಾನಸಿಕ ತೊಂದರೆ ಅನುಭವಿಸುತ್ತಿದ್ದು, ತಾನು ದುಡಿಯುತ್ತಿದ್ದ ಕ್ಯಾಂಟೀನ್ ಮಾಲಕರಿಗೂ ತನ್ನನ್ನು ಕ್ಷಮಿಸುವಂತೆ ಡೆತ್ ನೋಟ್ ನಲ್ಲಿ ಬರೆದಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.