ಹಿರಿಯಡ್ಕ:ಭೀಕರ ಅಪಘಾತ, ಕಾರ್ಕಳ ಉದ್ಯಮಿ ಸ್ಥಳದಲ್ಲೆ ಸಾವು

ಉಡುಪಿ: ಹಿರಿಯಡ್ಕ ಠಾಣಾ ವ್ಯಾಪ್ತಿಯ ಗುಡ್ಡೆಯಂಗಡಿಯಲ್ಲಿ ಇಂದು ಮಧ್ಯಾಹ್ನ ಬಸ್ ಮತ್ತು ಕಾರ್ ಮುಖಾಮಖಿ ಡಿಕ್ಕಿಯಾಗಿ ಕುಕ್ಕುಂದೂರು ಉದ್ಯಮಿ ಸ್ಥಳದಲ್ಲೆ ಮೃತಪಟ್ಟ ಘಟನೆ ನಡೆದಿದೆ.


ಕಾರ್ಕಳದ ಅಯ್ಯಪ್ಪ ನಗರದ ನಿವಾಸಿ ಕೆ.ಕೃಷ್ಣ ಪೈ (62) ಅವರು ತಮ್ಮ ಕಾರಿನಲ್ಲಿ ಮಣಿಪಾಲಕ್ಕೆಂದು ಬರುತ್ತಿದ್ದಾಗ ಹಿರಿಯಡ್ಕ ಗುಡ್ಡೆಂಗಡಿಯ ಸೂರಜ್ ಇಂಡಸ್ಟ್ರೀಸ್ ಬಳಿ ಉಡುಪಿಯಿಂದ ಕಾರ್ಕಳಕ್ಕೆ ಹೋಗುತ್ತಿದ್ದ ಖಾಸಗಿ ಬಸ್ ವಿಶಾಲ್‌ಗೆ ಡಿಕ್ಕಿ ಹೊಡೆಯಿತು.
ಮುಖಾಮುಖಿ ಡಿಕ್ಕಿಯಿಂದ ಕಾರು ಬಸ್‌ನ ತಳ ಭಾಗದಲ್ಲಿ ಸಿಲುಕಿಕೊಂಡು ಸಂಪೂರ್ಣ ನಜ್ಜುಗುಜ್ಜು ಆಗಿತ್ತು. ಡಿಕ್ಕಿ ಹೊಡೆದ ರಭಸಕ್ಕೆ ಕೆ.ಕೃಷ್ಣ ಪೈ ಸ್ಥಳದಲ್ಲೆ ಮೃತ ಪಟ್ಟಿದ್ದಾರೆಂದು ತಿಳಿದುಬಂದಿದೆ.

ಬಸ್ ಮತ್ತು ಕಾರಿನ ನಡುವೆ ಸಿಲುಕಿಕೊಂಡ ಪೈ ಅವರ ಮೃತ ದೇಹ ಹೊರ ತೆಗೆಯಲು ಅರ್ಧ ಗಂಟೆ ತಗಲಿದೆಂದು ಪೊಲೀಸರು ತಿಳಿಸಿದರು. ಇಂದು ಬೆಳಿಗ್ಗೆ ಪೈ ಅವರು ಆಸ್ಟ್ರೇಲಿಯಾದಲ್ಲಿರು ಮಗನಿಗೆ ತಾನು ವ್ಯವಹಾರ ನಿಮಿತ್ತ ಮಣಿಪಾಲಕ್ಕೆ ಹೋಗುತ್ತಿರುವುದಾಗಿ ಪೋನ್ ಮಾಡಿದ್ದರು. ಮೃತರ ಇನ್ನೋರ್ವ ಪುತ್ರ ಆಳ್ವಸ್ ಶಿಕ್ಷಣ ಸಂಸ್ಥೆಯಲ್ಲಿ ಪ್ರಾಧ್ಯಾಪಕರೆಂದು ತಿಳಿದು ಬಂದಿದೆ. ಹಿರಿಯಡ್ಕ ಠಾಣೆಯಲ್ಲಿ ದೂರು ದಾಖಲಾಗಿದ್ದು ಮುಂದಿನ ತನಿಖೆ ನಡೆಸುತ್ತಿದ್ದಾರೆ.

1 thought on “ಹಿರಿಯಡ್ಕ:ಭೀಕರ ಅಪಘಾತ, ಕಾರ್ಕಳ ಉದ್ಯಮಿ ಸ್ಥಳದಲ್ಲೆ ಸಾವು

Leave a Reply

Your email address will not be published. Required fields are marked *

error: Content is protected !!