ಹಿಂದೂ,ಮುಸಲ್ಮಾನರು ಸಮಚಿತ್ತದಿಂದ ತೀರ್ಪನ್ನು ಸ್ವೀಕರಿಸಬೇಕು: ಪೇಜಾವರ ಶ್ರೀ ಕರೆ
ಉಡುಪಿ – ನನ್ನ ಜೀವನದಲ್ಲಿ ಇಂತಹ ದಿನ ನೋಡಲು ಸಿಗುತ್ತೆ ಎಂದು ಭಾವಿಸಿರಲಿಲ್ಲ, ಹಿಂದೂಗಳು ಮುಸಲ್ಮಾನರು ಸಮಚಿತ್ತದಿಂದ ಈ ತೀರ್ಪನ್ನು ಸ್ವೀಕರಿಸಬೇಕು, ಮುಸ್ಲಿಮರಿಗೂ ಐದು ಎಕರೆ ಕೊಡಬೇಕು ಎಂದು ತೀರ್ಪಿನಲ್ಲಿ ಹೇಳಿದ್ದಾರೆ .
ಸರಕಾರವೇ ರಾಮಮಂದಿರ ನಿರ್ಮಾಣ ಮಾಡಬೇಕು ಎಂಬ ತೀರ್ಪು ಬಂದಿದೆ, ಇದು ಎಲ್ಲರಿಗೂ ಅನುಕೂಲವಾಗುವ ತೀರ್ಪು ಎಂಬುದಾಗಿ ಪೇಜಾವರ ಶ್ರೀಗಳು ಸರ್ವೋಚ್ಛ ನ್ಯಾಯಾಲಯದ ತೀರ್ಪನ್ನು ಸ್ವಾಗತಿಸಿದರು.
ಅಯೋದ್ಯೆಯ ಕುರಿತಾದ ಐತಿಹಾಸಿಕ ತೀರ್ಪಿನ ಹಿನ್ನೆಲೆಯಲ್ಲಿ ಉಡುಪಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡುತ್ತ ಭಾವುಕರಾದ ಅವರು “ನನಗೆ ವೈಯಕ್ತಿಕವಾಗಿ ಈ ತೀರ್ಪು ಸಮ್ಮತವಾಗಿದೆ , ಹಿಂದೂ ಪವಿತ್ರ ಕ್ಷೇತ್ರದಲ್ಲಿ ಪೂಜೆಗೆ ಅವಕಾಶ ಸಿಕ್ಕಂತಾಗಿದೆ, ಎಲ್ಲರೂ ಈ ತೀರ್ಪನ್ನು ಸ್ವೀಕಾರ ಮಾಡಬೇಕು, ಈ ತೀರ್ಪು ಹಿಂದೂ ಮುಸಲ್ಮಾನರಲ್ಲಿ ಬಾಂಧವ್ಯ ಬೆಳೆಯಲು ಉತ್ತಮ ಅವಕಾಶ, ಹಿಂದೂಗಳಿಗೆ ಜನ್ಮಭೂಮಿಯ ಹಕ್ಕು ಮುಖ್ಯ ,ಮುಸಲ್ಮಾನರಿಗೆ ಮಸೀದಿಗೆ ಜಾಗ ಮುಖ್ಯ ,ಹಿಂದೂ ಮುಸಲ್ಮಾನರು ಒಟ್ಟು ಸೇರಿ ಸೂಕ್ತ ಸ್ಥಳವನ್ನು ಮಸೀದಿಗೆ ಕೊಡಬೇಕು, ಎಲ್ಲರಿಗೂ ಸಮ್ಮತವಾಗುವ ಯೋಗ್ಯ ಸ್ಥಳ ಹುಡುಕಿ ಮಸೀದಿಯ ನಿರ್ಮಾಣಕ್ಕೆ ಹಿಂದೂಗಳು ಸಹಕರಿಸಬೇಕು ,ಮಂದಿರ ನಿರ್ಮಾಣ ವಿಚಾರದಲ್ಲಿ ಮುಸ್ಲಿಮರೂ ಸಹಕರಿಸಬೇಕು, ಬಾಂಧವ್ಯದ ಹೊಸ ಯುಗ ಆರಂಭವಾಗಲಿದೆ.
ಹಿಂದೂಗಳು ಅತಿರೇಖದ ಭಾವೋದ್ವೇಗ ತೊರಿಸಬಾರದು ,ವಿಜಯೋತ್ಸವ ,ಮೆರವಣಿಗೆ ಬೇಡ ಎಂದು ನಿನ್ನೆಯೇ ಹೇಳಿದ್ದೆ.ಈಗಲೂ ಪುನರುಚ್ಚಾರ ಮಾಡುವೆ, ಮುಸಲ್ಮಾನರು ಕೂಡಾ ಸಮಚಿತ್ತದಿಂದ ಸ್ವೀಕರಿಸಬೇಕು, ಹಿಂದೂಗಳ ಶೃದ್ದೆ ನಂಬಿಕೆಗೆ ಗೌರವ ನೀಡಬೇಕು, ದೇಶದ ಎಲ್ಲರೂ ಕೋಮು ಸೌಹಾರ್ದದಿಂದ ಇರಬೇಕು ಎಂದು ಮನವಿ ಮಾಡುವೆ ,ಮುಂದೇನು ಮಾಡಬೇಕು ಎಂದು ಸಂತರು ವಿಚಾರ ಮಾಡ್ತೇವೆ ಸರ್ಕಾರಕ್ಕೆ ಕೋರ್ಟ್ ಹೆಚ್ಚಿನ ಜವಾಬ್ದಾರಿ ಕೊಟ್ಟಿದೆ ,ಕೇವಲ ಸರ್ಕಾರ ಮಾತ್ರವಲ್ಲದೆ ಸರ್ಕಾರ, ಸಂತರು, ಮುಸ್ಲೀಮರಿಗೆ ಹೊಣೆಗಾರಿಕೆ ಇದೆ ಇದು ನನ್ನ ವೈಯಕ್ತಿಕ ಅಭಿಪ್ರಾಯ ಉಳಿದ ಸಂತರ ಜೊತೆ ಸಮಾಲೋಚಿಸಿ ವಿವರ ತಿಳಿಸುವೆ ಎಂದು ಶ್ರೀಗಳು ತಿಳಿಸಿದರು.