ಉಡುಪಿ: ಮೇ 31ರ ವರೆಗೆ ಸೆಕ್ಷನ್ 144(3)ವಿಸ್ತರಣೆ, ಹೊಸ ಆದೇಶದ ಪೂರ್ಣ ಮಾಹಿತಿ ಇಲ್ಲಿದೆ

ಉಡುಪಿ: (ಉಡುಪಿ ಟೈಮ್ಸ್ ವರದಿ) ದೇಶದಾದ್ಯಂತ ಮೇ 31ರ ವರೆಗೆ ಲಾಕ್ ಡೌನ್ ವಿಸ್ತರಣೆ ಮಾಡಿದ ಹಿನ್ನಲೆಯಲ್ಲಿ ಉಡುಪಿ ಜಿಲ್ಲೆಯಲ್ಲಿ ನಿಷೇಧಾಜ್ಞೆಯನ್ನು ಮುಂದುವರೆಸಿ ಜಿಲ್ಲಾಧಿಕಾರಿ ಜಿ ಜಗದೀಶ್ ಆದೇಶ ಹೊರಡಿಸಿದ್ದಾರೆ.


ಮೇ 19 ರಿಂದ ಮೇ 31 ರ ವರೆಗೆ ಸೆಕ್ಷನ್ 144(3) ಜಾರಿಗೆ ಮಾಡಲಾಗಿದ್ದು ಭಾನುವಾರ ಹೊರತು ಪಡಿಸಿ ಇತರ ದಿನಗಳಲ್ಲಿ ಸಂಜೆ 7.00 ರಿಂದ ಬೆಳಿಗ್ಗೆ 7.00 ರ ವರೆಗೆ ಸಾರ್ವಜನಿಕರ ಸಂಚಾರವನ್ನು ನಿರ್ಬಂಧಿಸಲಾಗಿದೆ, ಭಾನುವಾರದಂದು ಸಂಪೂರ್ಣ ಲಾಕ್ ಡೌನ್ ಇದೆ , ಸಾರ್ವಜನಿಕರ ಸಂಚಾರವನ್ನು ಸಂಪೂರ್ಣವಾಗಿ ನಿರ್ಬಂಧಿಸಲಾಗಿದೆ.


ಈ ನಿಷೇಧಾಜ್ಞೆ ಅವಧಿಯಲ್ಲಿ ಸಾರ್ವಜನಿಕ ಸ್ಥಳಗಳಲ್ಲಿ ಕೋವಿಡ್ 19 ರ ಶುಶ್ರೂಷಾ ಉದ್ದೇಶಗಳನ್ನು ಮತ್ತು ಶಾಸನಬದ್ದ ಹಾಗೂ ನಿಯಂತ್ರಣ ಪ್ರಕಾರ್ಯಗಳನ್ನು ಹೊರತುಪಡಿಸಿ 05 ವ್ಯಕ್ತಿಗಳಿಗಿಂತ ಹೆಚ್ಚಿನ ಎಲ್ಲಾ ಸಮೂಹ ಒಗ್ಗೂಡುವಿಕೆಯನ್ನು ನಿಷೇಧಿಸಲಾಗಿದೆ.


1) ಜಿಲ್ಲೆಯಾದ್ಯಂತ ಧಾರ್ಮಿಕ ಕೇಂದ್ರಗಳಲ್ಲಿ ನಡೆಯುವ ಉತ್ಸವ/ಜಾತ್ರೆಗಳನ್ನು ನಿರ್ಬಂಧಿಸಿದೆ.

2) ದೇವಸ್ಥಾನ , ಚರ್ಚ್ ,ಮಸೀದಿ ಮುಂತಾದ ಎಲ್ಲಾ ಧಾರ್ಮಿಕ / ಪೂಜಾ ಸ್ಥಳಗಳಿಗೆ ಸಾರ್ವಜನಿಕ ಪ್ರವೇಶವನ್ನು ಹಾಗೂ ಧಾರ್ಮಿಕವಾಗಿ ಜನರ ಒಟ್ಟು ಗೂಡುವಿಕೆಯನ್ನು ಮತ್ತು ಸಾಮೂಹಿಕ ಪ್ರಾರ್ಥನೆಗಳನ್ನು ನಿರ್ಬಂಧಿಸಿದೆ

.3) ಎಲ್ಲಾ ರಾಜಕೀಯ / ಸಾಮಾಜಿಕ /ಕ್ರೀಡಾ/ ಮನೋರಂಜನಾ/ಶೈಕ್ಷಣಿಕ /ಸಾಂಸೃತಿಕ ಮತ್ತು ದಾರ್ಮಿಕ ಮತ್ತು ಇತರ ಜನಸೇರುವ ಕಾರ್ಯಕ್ರಮಗಳನ್ನು ನಿರ್ಬಂಧಿಸಿದೆ.

4) ನಾಟಕಗಳು, ಯಕ್ಷಗಾನಗಳನ್ನು ನಡೆಸುವಂತಿಲ್ಲ ಮತ್ತು ರಂಗಮಂದಿರಗಳನ್ನು ತೆರೆಯುವಂತಿಲ್ಲ.

5) ಸಿನಿಮಾ ಹಾಲ್ಗಳು/ ಥಿಯೆಟರ್ , ಮಲ್ಟಿಪ್ಲೆಕ್ಸ್ ಶಾಪಿಂಗ್ ಮಾಲ್ , ಜಿಮ್ ಗಳು, ಈಜುಕೊಳಗಳು, ಮನರಂಜನಾ ಪಾರ್ಕ್ ಗಳು , ಬಾರ್ಗಳು ಮತ್ತು ಸಭಾಂಗಣಗಳು, ಅಸೆಂಬ್ಲಿ ಹಾಲ್ ಗಳನ್ನು ತೆರೆಯತಕ್ಕದ್ದಲ್ಲ. ಕ್ರೀಡಾ ಸಂಕೀರ್ಣ ಮತ್ತು ಸ್ಟೇಡಿಯಂಗಳನ್ನು ತೆರೆಯಬಹುದು ಆದರೆ ಪ್ರೇಕ್ಷಕರ ಪ್ರವೇಶವನ್ನು ನಿರ್ಬಂಧಿಸಲಾಗಿದೆ.

6) ಸೆಲೂನ್, ಸ್ಪಾ, ಮತ್ತು ಬ್ಯೂಟಿ ಪಾರ್ಲರ್ ಗಳನ್ನು ಷರತ್ತುಗಳೊಂದಿಗೆ ತೆರೆಯಲು ಅವಕಾಶ ಕಲ್ಪಿಸಲಾಗಿದೆ. ಸಾಮಾಜಿಕ ಅಂತರವನ್ನು ಕಡ್ಡಾಯವಾಗಿ ಕಾಯ್ದುಕೊಳ್ಳತಕ್ಕದ್ದು .ಹಾಗೂ ಸರ್ಕಾರದ ಮಾರ್ಗಸೂಚಿಯನ್ನು ಕಡ್ಡಾಯವಾಗಿ ಪಾಲಿಸತಕ್ಕದ್ದು .

7) ಸರಕಾರಿ/ ಮುನ್ಸಿಪಲ್ ಪಾರ್ಕ್ ಗಳನ್ನು ಸರ್ಕಾರದ ಮಾರ್ಗಸೂಚಿಯಂತೆ ಬೆಳಿಗ್ಗೆ 7.00 ರಿಂದ 9.00 ಹಾಗೂ ಸಂಜೆ 4.00 ರಿಂದ 7.00 ರವರೆಗೆ ಸಾರ್ವಜನಿಕರಿಗಾಗಿ ತೆರೆದಿರುತ್ತವೆ. ಸರ್ಕಾರದ ಮಾರ್ಗಸೂಚಿಯನ್ನು ಕಡ್ಡಾಯವಾಗಿ ಪಾಲಿಸತಕ್ಕದ್ದು .

8) ಶಾಲೆಗಳು, ಕಾಲೇಜುಗಳು, ವಿಶ್ವವಿದ್ಯಾನಿಲಯಗಳು, ವಾಣಿಜ್ಯ ಶಾಲೆಗಳನ್ನು , ಟ್ಯುಟೋರಿಯಲ್ಸ್ ಮತ್ತು ಕೋಚಿಂಗ್ ಸೆಂಟರ್ ಗಳನ್ನು ಬಂದ್ ಮಾಡಲಾಗಿದ್ದು , ಅವುಗಳನ್ನು ತೆರೆಯತಕ್ಕದ್ದಲ್ಲ. Online / distance learningಗೆ ಅವಕಾಶ ಕಲ್ಪಿಸಲಾಗಿದೆ.

9) ರೆಸ್ಟೋರೆಂಟ್ / ಉಪಾಹಾರ ಗೃಹ/ ಹೋಟೆಲ್ /ಕೆಫೆಗಳಲ್ಲಿ ಊಟ /ಉಪಹಾರ ಮಾಡುವುದನ್ನು ನಿಷೇದಿಸಲಾಗಿದೆ. ಅಡುಗೆ ಮನೆಗಳು ತೆರೆದಿದ್ದು,ನಿಗದಿತ ಅವಧಿಯಲ್ಲಿ ಗ್ರಾಹಕರು ಆಹಾರವನ್ನು ಖರೀದಿಸಿ ಕೇವಲ ತೆಗೆದುಕೊಂಡು ಹೋಗಲು (Take away) ಅನುಮತಿಸಲಾಗಿದೆ.

10) ಮಾರ್ಗಸೂಚಿಯಂತೆ ಶೇಕಡ 50 ರಷ್ಟು ಸಾಮರ್ಥ್ಯದಲ್ಲಿ ಜಿಲ್ಲೆಯೊಳಗೆ ಮತ್ತು ಅಂತರ್ ಜಿಲ್ಲೆಗಳಿಗೆ ಬಸ್ಸುಗಳು ಇತರ ಪ್ರಯಾಣಿಕ ವಾಹನಗಳನ್ನು ಬೆಳಿಗ್ಗೆ 7.00 ರಿಂದ ಸಂಜೆ 7.00 ರವರೆಗೆ ಸಂಚರಿಸಲು ಅವಕಾಶ ಕಲ್ಪಿಸಲಾಗಿದೆ. ಸಾಮಾಜಿಕ ಅಂತರವನ್ನು ಕಡ್ಡಾಯವಾಗಿ ಕಾಯ್ದುಕೊಳ್ಳತಕ್ಕದ್ದು .ಹಾಗೂ ಸರ್ಕಾರದ ಮಾರ್ಗಸೂಚಿಯನ್ನು ಕಡ್ಡಾಯವಾಗಿ ಪಾಲಿಸತಕ್ಕದ್ದು .

11) ರಿಕ್ಷಾ ಮತ್ತು ಟ್ಯಾಕ್ಸಿಗಳಲ್ಲಿ ಚಾಲಕ ರೊಂದಿಗೆ ಇಬ್ಬರು ಪ್ರಯಾಣಿಕರ ಪ್ರಯಾಣಕ್ಕೆ ಅವಕಾಶ ಕಲ್ಪಿಸಲಾಗಿದೆ ಮ್ಯಾಕ್ಸಿ ಕ್ಯಾಬ್ ಗಳ ಸಂಚಾರಕ್ಕೆ ಅವಕಾಶವಿರುತ್ತದೆ. ಚಾಲಕ ಹಾಗೂ ಪ್ರಯಾಣಿಕರು ಕಡ್ಡಾಯವಾಗಿ ಮಾಸ್ಕ್ ಅಥವಾ ಇತರ face cover ಧರಿಸತಕ್ಕದ್ದು.

12) ಭಾನುವಾರ ಹೊರತು ಪಡಿಸಿ ಇತರ ದಿನಗಳಲ್ಲಿ ಸಂಜೆ 7.00 ರಿಂದ ಬೆಳಿಗ್ಗೆ 7.00 ರವರೆಗೆ ಸಾರ್ವಜನಿಕರ ಸಂಚಾರವನ್ನು ನಿರ್ಭಂಧಿಸಲಾಗಿದೆ. ಭಾನುವಾರದಂದು ಸಂಪೂರ್ಣ ಲಾಕ್ ಡೌನ್ ಇದ್ದು , ಸಾರ್ವಜನಿಕರ ಸಂಚಾರವನ್ನು ಸಂಪೂರ್ಣವಾಗಿ ನಿರ್ಬಂಧಿಸಲಾಗಿದೆ.

13) 65 ವರ್ಷ ಜಾಸ್ತಿ ಪ್ರಾಯದ ವ್ಯಕ್ತಿಗಳು ಹಾಗೂ 10 ವರ್ಷಕ್ಕಿಂತ ಕಡಿಮೆ ಪ್ರಾಯದ ಮಕ್ಕಳು ಮತ್ತು ಗರ್ಭಿಣಿಯರು, ಅಸ್ವಸ್ಥರು , ತುರ್ತು ವೈದ್ಯಕೀಯ ಕಾರಣ ಹೊರತ್ತು ಪಡಿಸಿ ಮನೆಯಿಂದ ಹೊರಗೆ ಬರಲು ಅವಕಾಶವಿರುವುದಿಲ್ಲ.

14) ವೈದ್ಯಕೀಯ ವೃತ್ತಿಪರರು, ದಾದಿಯರು ಮತ್ತು ಪಾರಾ ವೈದ್ಯಕೀಯ ಸಿಬ್ಬಂದಿ, ನೈರ್ಮಲ್ಯ ಸಿಬ್ಬಂದಿ ಮತ್ತು ಆಂಬುಲೆನ್ಸ್ ಗಳ ಅಂತರ್ -ರಾಜ್ಯ ಮತ್ತು ಅಂತರ್-ಜಿಲ್ಲೆ ಗೆ ಸಂಚರಿಸಲು ಅನುಮತಿಸಲಾಗಿದೆ.

15) ಖಾಲಿ ಟ್ರಕ್ಗಳು ಸೇರಿದಂತೆ ಎಲ್ಲಾ ರೀತಿಯ ಸರಕು ಸಾಗಣೆ ವಾಹನಗಳ ಅಂತರ್-ರಾಜ್ಯ ಸಂಚಾರಕ್ಕೆ ಅನುಮತಿಸಲಾಗಿದೆ.

16) ಮಾರ್ಗಸೂಚಿಯಂತೆ ಜನರಿಗೆ ಅವಶ್ಯಕ ಸಾಮಾಗ್ರಿಗಳ ಅಂಗಡಿಗಳನ್ನು ತೆರೆಯಲು ಅವಕಾಶವಿದ್ದು, ಸರಕಾರದ ಆದೇಶದಂತೆ, ಬೆಳಿಗ್ಗೆ 07 ರಿಂದ ಸಂಜೆ 07 ರವರೆಗೆ ನಿಗದಿಪಡಿಸಲಾಗಿದೆ.

17) ಬೀಚ್ಗಳಿಗೆ ಸಾರ್ವಜನಿಕರ ಪ್ರವೇಶವನ್ನು ನಿರ್ಬಂಧಿಸಿದೆ.

18) ಸ್ಥಳೀಯಾಡಳಿತ ಸಂಸ್ಥೆಗಳ ನಿರ್ದೇಶನದಂತೆ ವಿಶಾಲವಾದ ಸ್ಥಳಗಳನ್ನು ಗುರುತಿಸಿ , ಸಾಮಾಜಿಕ ಅಂತರವನ್ನು ಕಾಪಾಡಿಕೊಂಡು ವಾರದ ಸಂತೆಗಳನ್ನು ನಿರ್ವಹಿಸತಕ್ಕದ್ದು. 19) ಪಬ್ ಗಳು, ಕ್ಲ ಬ್ ಗಳು,ಹಾಗು ನೈಟ್ ಕ್ಲಬ್ ಗಳನ್ನು ತೆರೆಯತಕ್ಕದ್ದಲ್ಲ.

20) ಸಾರ್ವಜನಿಕರು ಎಲ್ಲಾ ಸಾರ್ವಜನಿಕ ಸ್ದಳಗಳಲ್ಲಿ ಮುಖಗವಸನ್ನು ಕಡ್ಡಾಯವಾಗಿ ಧರಿಸುವುದು.

21) ಸ್ದಳೀಯ ಪ್ರಾಧಿಕಾರಗಳು ಅದರ ಕಾನೂನುಗಳು, ನಿಯಮಗಳು ಅಥವಾ ನಿಬಂಧನೆಗಳಿಗೆ ಅನುಗುಣವಾಗಿ ಸಾರ್ವಜನಿಕ ಸ್ದಳಗಳಲ್ಲಿ ಉಗಿಯುವುದನ್ನು ನಿರ್ಬಂಧಿಸಿದೆ ಹಾಗೂ ಇದರ ಉಲ್ಲಂಘನೆಗಾಗಿ ನಿಗದಿಪಡಿಸಿದ ದಂಡವನ್ನು ವಿಧಿಸುವುದು.

22) ಸಾರ್ವಜನಿಕ ಸ್ದಳಗಳಲ್ಲಿ ಮತ್ತು ಸಾರಿಗೆಯಲ್ಲಿ ಎಲ್ಲಾ ವ್ಯಕ್ತಿಗಳು ಸಾಮಾಜಿಕ ಅಂತರವನ್ನು ಅನುಸರಿಸುವುದು.

23) ವಿವಾಹದ ಸಂಧರ್ಭಗಳಲ್ಲಿ ಸಾಮಾಜಿಕ ಅಂತರವನ್ನು ಖಾತರಿಪಡಿಸಿಕೊಂಡು ಗರಿಷ್ಟ 50 ಅತಿಥಿಗಳನ್ನು ಮಾತ್ರ ಅಹ್ವಾನಿಸತಕ್ಕದ್ದು.ಈ ಬಗ್ಗೆ ಹೊರಡಿಸಲಾದ ಸರಕಾರದ ಎಲ್ಲಾ ನಿಯಮಾವಳಿಗಳನ್ನು ಪಾಲಿಸುವುದು.

24) ಶವ ಸಂಸ್ಕಾರ / ಅಂತಿಮ ಯಾತ್ರೆಯ ಸಮಯದಲ್ಲಿ ಸಾಮಾಜಿಕ ಅಂತರವನ್ನು ಖಾತರಿಪಡಿಸಿಕೊಳ್ಳುವುದು ಮತ್ತು ಗರಿಷ್ಟ 20 ಜನರಿಗಿಂತ ಮೇಲೆ ಸೇರದೇ ಇರುವುದನ್ನು ಖಚಿತಪಡಿಸಿಕೊಳ್ಳತಕ್ಕದ್ದು.

25) ಸಾರ್ವಜನಿಕ ಸ್ದಳಗಳಲ್ಲಿ ಮಧ್ಯಪಾನ , ಗುಟ್ಕಾ, ತಂಬಾಕು ಇತ್ಯಾದಿಗಳ ಬಳಕೆಗೆ ಅವಕಾಶವಿಲ್ಲ.

26) ಅಂಗಡಿಗಳ ಮಾಲಕರು ಮತ್ತು ಗ್ರಾಹಕರ ನಡುವೆ ಕನಿಷ್ಟ ಆರು (6 ) ಅಡಿ ದೂರದಲ್ಲಿರುವುದನ್ನು ಖಚಿತಪಡಿಸಿಕೊಳ್ಳುವುದು ಮತ್ತು ಅಂಗಡಿಗಳಲ್ಲಿ 5 ಕ್ಕೂ ಹೆಚ್ಚು ವ್ಯಕ್ತಿಗಳನ್ನು ಅನುಮತಿಸಬಾರದು.ಈ ಆದೇಶವನ್ನು ಉಲ್ಲಂಘಿಸುವವರ ವಿರುದ್ದ ಭಾರತೀಯ ದಂಡ ಸಂಹಿತೆಯ ಕಲಂ 188 ಮತ್ತು 270 ಹಾಘೂ ವಿಪತ್ತು ನಿರ್ವಹಣಾ ಕಾಯ್ದೆ 2005 ರ ಸೆಕ್ಷನ್ 51 ರಿಂದ 60 ರ ಪ್ರಕಾರ ಕ್ರಮ ಜರುಗಿಸಲಾಗುವುದು ಎಂದು ಅವರು ತಿಳಿಸಿದ್ದಾರೆ. 

4 thoughts on “ಉಡುಪಿ: ಮೇ 31ರ ವರೆಗೆ ಸೆಕ್ಷನ್ 144(3)ವಿಸ್ತರಣೆ, ಹೊಸ ಆದೇಶದ ಪೂರ್ಣ ಮಾಹಿತಿ ಇಲ್ಲಿದೆ

  1. Good morning sir / madam

    list of rules are seems to be good but according to my personal observation no one is following rules strictly in vegetable stores,kiran stores and other public places atleast most of people still will not ready to wear mask or maintain social distance….
    please awake this to district administration and intruct them take corrective action as soon as possible before spreading of covid 19(corona) in to community
    its my humble request to safe n save lives……

  2. In order to control Gen Public’s movement interdistrict and interstate, effectively, a system of issuing a Temporary pass valid for upto 30 days, by the Administration at the receiving District or State, upon an application by the applicant, giving confirmed room bookinhg and Address of the Hotel, lodge, or Relative’s / Friends House, with no of class 1 Family members(not more than Four) and their ID proof and phone numbers of each or of the main applicant and the details of Vehice (if Travelling by own vehicle) and the return journey date which has to be stamped on the pass to make it invalid, should be enforced. Acceptance or Rejection by the receiving administration should be based on the Certificate to show Covid 19 Negative at the departing end not older than 5 days before the date of application for pass.

  3. Good luck for all the team of District administration. Strict action should be taken against the people who are going against the 144 (3) Section & breaking the rules of night curfew. Some of the mischievous people are not wearing the mask or the face cover, roaming unnecessarily on the Shiriyara Guddettu Road. During the night curfew time all types of vehicles are running on the road carelessly, breaking the night curfew decipline. S

  4. Good luck for all the team of District administration. Strict action should be taken against the people who are going against the 144 (3) Section & breaking the rules of night curfew. Some of the mischievous people are not wearing the mask or the face cover, roaming unnecessarily on the Shiriyara Guddettu Road. During the night curfew time all types of vehicles are running on the road carelessly, breaking the night curfew decipline.

Leave a Reply

Your email address will not be published. Required fields are marked *

error: Content is protected !!