“ಉತ್ತರದೊಂದಿಗೆ ಉಡುಪಿ ಟೈಮ್ಸ್ ಅಭಿಯಾನಕ್ಕೆ” ಸ್ಪಂದಿಸುತ್ತಿರುವ ಹೃದಯಗಳು
ಉಡುಪಿ– ವರುಣನ ಆರ್ಭಟಕ್ಕೆ ನಲುಗಿದ ಉತ್ತರ ಕರ್ನಾಟಕಕ್ಕೆ ಪರಿಹಾರ ಕಾರ್ಯ “ಉತ್ತರದೆಡೆಗೆ ಉಡುಪಿ ಟೈಮ್ಸ್ ಅಭಿಯಾನಕ್ಕೆ” ಜನತೆ ಉತ್ತಮ ಪ್ರತಿಕ್ರಿಯೆ ನೀಡುತ್ತಿದ್ದು ಮಾನವೀಯತೆ ಮೆರೆಯುತ್ತಿದ್ದಾರೆ , ಅನೇಕ ಸಂಘ ಸಂಸ್ಥೆಗಳು ಈ ಕಾರ್ಯಕ್ಕೆ ಕೈ ಜೋಡಿಸಿದ್ದು ತಮ್ಮ ಭಾಗಗಳಲ್ಲಿ ಜನರನ್ನು ಈ ಕಾರ್ಯದಲ್ಲಿ ತೊಡಗಲು ಉತ್ತೇಜಿಸುತ್ತಿದ್ದಾರೆ ,
ಸಾಸ್ತಾನದ ಕನ್ಯಾನ ಕೋಡಿಯಿಂದ ಹರಿದು ಬಂತು 1 ಏಸ್ ಗಾಡಿ ಸಾಮಗ್ರಿಗಳು ...ಉಡುಪಿ ಟೈಮ್ಸ್ ಅಭಿಯಾನಕ್ಕೆ ಕೈ ಜೋಡಿಸಿರುವ ಜೆಸಿಐ ಕುಂದಾಪುರ ಸಂಸ್ಥೆಯ ನೆರವು ನೀಡುವ ಮನವಿಗೆ ವಿಶೇಷವಾಗಿ ಸ್ಪಂದಿಸಿದ ಕನ್ಯಾನ ಕೋಡಿ ಯ ಗ್ರಾಮಸ್ಥರು ವಸ್ತು ರೂಪದ ಕೊಡುಗೆಗಳನ್ನು ಕುಂದಾಪುರದ ಜೆಸಿ ಭವನಕ್ಕೆ ತಂದು ನೀಡಿದರು. ಕೋಡಿ ಕನ್ಯಾನ ಗ್ರಾಮಸ್ಥರ ಈ ಮಾನವೀಯ ಕಾಳಜಿ ನಿಜಕ್ಕೂ ಅದ್ಭುತ….ಈ ನಿಟ್ಟಿನಲ್ಲಿ ಪರಿಶ್ರಮ ವಹಿಸಿದ ಕೋಡಿ ಕನ್ಯಾನ ಯುವಕರಾದ ಪ್ರದೀಪ್, ಸಂತೋಷ, ವಿಶ್ವನಾಥ, ಹರೀಶ್, ಸುದೀನ, ವಿಘ್ನೇಶ್, ದಿನೇಶ್ ಹಾಗೂ ಸುಖೇಶ್ ಇವರಿಗೆ ವಿಶೇಷ ಧನ್ಯವಾದಗಳು.
ಮಾನವೀಯತೆ ಮೆರೆದ ಶಿಕ್ಷಕಿಯರು
ಶಿಕ್ಷಕಿ, ಹಾಗು ಯಕ್ಷಗಾನ ಕಲಾವಿದೆ ನಾಗರತ್ನ ಜಿ ಹೇರ್ಳೆ ,ಕೋಡಿ ಬೆಂಗ್ರೆಯ ಶಾಲೆಯ ಶಿಕ್ಷಕಿ ಜಯಲಕ್ಷ್ಮಿಯವರು ಈ ಅಭಿಯಾನಕ್ಕೆ ತಮ್ಮ ಸಹಾಯ ಹಸ್ತ ನೀಡಿರುವುದು ಸಂತೋಷ ನೀಡಿದೆ
ಉಡುಪಿಯಲ್ಲಿ ನೆರೆ ಪರಿಹಾರಕ್ಕೆ ಮಿಡಿದ ಯುವ ಮನಸ್ಸುಗಳು – ಉಡುಪಿಯಲ್ಲಿ “ಉಡುಪಿ ಟೈಮ್ಸ್” ನ ಅಭಿಯಾನಕ್ಕೆ ಅತ್ಯುತ್ತಮ ಪ್ರತಿಕ್ರಿಯೆ ಸಿಕ್ಕಿದ್ದು, ಯುವಕರು ಪರಿಹಾರ ಕಾರ್ಯಕ್ಕೆ ಮುಂದೆ ಬಂದಿದ್ದಾರೆ , ಭರತ್ , ಉಮೇಶ್ , ಅಶೋಕ್ ಭಟ್ ಮುಂತಾದ ದಾನಿಗಳು ತಮ್ಮ ಸಹಾಯ ಹಸ್ತ ನೀಡಿದ್ದಾರೆ ಎಲ್ಲರಿಗೂ ಉಡುಪಿ ಟೈಮ್ಸ್ ಕಡೆಯಿಂದ ಕ್ರತಜ್ಞತೆಗಳು..
ದಿನಾಂಕ 17 ರಂದು ಪರಿಹಾರ ವಸ್ತುಗಳನ್ನು ಪಡೆದುಕೊಳ್ಳಲು ಕೊನೆಯ ದಿನವಾಗಿದ್ದು. ಆದಷ್ಟು ಬೇಗ ಸಹ್ರದಯಿಗಳು ಸಹಕರಿಸಬೇಕು…..