ಆರೋಗ್ಯದಾಯಕ ಮೂಲಂಗಿ
ಮೂಲಂಗಿಯನ್ನು ಹಸಿಯಾಗಿ ತಿನ್ನಬಹುದು ಅಲ್ಲದೆ ಅದನ್ನು ಸಲಾಡ್ ಸಾಂಬಾರು ಉಪ್ಪಿನಕಾಯಿ ತರಹ ಮಾಡಿ ಕೂಡ ತಿನ್ನಬಹುದು ಮೂಲಂಗಿಯ ಹೂವು ಬೀಜ ಹಾಗೂ ಎಲೆಗಳು ಸಹ ದೇಹಕ್ಕೆ ತುಂಬಾ ಉಪಕಾರಿಯಾಗಿದೆ ಮೂಲಂಗಿಯು ಕಾಮಾಲೆ, ಮೂಲವ್ಯಾಧಿ, ಅಜೀರ್ಣ, ಮಲಬದ್ಧತೆ, ಉರಿಮೂತ್ರ, ಅಸ್ತಮಾ, ಸಕ್ಕರೆ ಕಾಯಿಲೆ, ಕರುಳು ಸಂಬಂಧಿತ ಕಾಯಿಲೆ ಮುಂತಾದವುಗಳಿಗೆ ತುಂಬಾ ಉಪಯುಕ್ತವಾಗಿದೆ
ಮೂಲಂಗಿಯ ಔಷಧಿ ಗುಣಗಳು
1 . ತೂಕ ಕಡಿಮೆ ಮಾಡುತ್ತದೆ
1 ರಿಂದ 2 ಮೂಲಂಗಿ ಬೇರುಗಳನ್ನು ಕತ್ತರಿಸಿ ನಂತರ ಅದಕ್ಕೆ 3 ರಿಂದ 4 ಗ್ಲಾಸ್ ಅಷ್ಟು ನೀರನ್ನು ಸೇರಿಸಿ ಈ ಮಿಶ್ರಣವನ್ನು 1 ರಿಂದ 2 ಗಂಟೆ ಗಳ ಕಾಲ ನೆನೆಯಲು ಬಿಡಿ ನಂತರ ದಿನಪೂರ್ತಿ ಈ ಮಿಶ್ರಣವನ್ನ ಕುಡಿಯುವುದರಿಂದ ನಿಮ್ಮ ದೇಹದ ತೂಕ ಕಡಿಮೆ ಮಾಡಲು ಸಹಕಾರಿಯಾಗುತ್ತದೆ.
2 ಕೆಟ್ಟ ಕೊಬ್ಬಿನ ಅಂಶ ನಿವಾರಣೆ
ಅರ್ಧ ಲೋಟದಷ್ಟು ಮೂಲಂಗಿ ರಸ ಹಾಗೂ ಅಷ್ಟೇ ಪ್ರಮಾಣದ ನೀರು ಹಾಗೂ ಅದಕ್ಕೆ ಸ್ವಲ್ಪ ನಿಂಬೆ ರಸವನ್ನು ಸೇರಿಸಿ ಸೇವಿಸಿ ನಂತರ ಈ ಮಿಶ್ರಣವನ್ನು ಊಟದ ಮೊದಲು ಕುಡಿಯಿರಿ ಇದರಿಂದಾಗಿ ನಿಮ್ಮ ದೇಹದಲ್ಲಿರುವ ಕೆಟ್ಟ ಕೊಬ್ಬನ್ನು ನಿಧಾನವಾಗಿ ನಿವಾರಣೆ ಮಾಡುತ್ತದೆ.
3 . ಕಣ್ಣಿನ ರಕ್ಷಣೆ ಹಾಗೂ ಇರುಳು ಕುರುಡು ನಿವಾರಣೆ
ಮೂಲಂಗಿ ಎಲೆಗಳನ್ನು ಬೇರ್ಪಡಿಸಿ ಅದನ್ನು ರುಬ್ಬಿ ನಂತರ ದೊರೆತ ಪಾನಿ ಅವನ್ನು 40-50 ಮಿಲಿಯಷ್ಟು ತೆಗೆದುಕೊಂಡು ದಿನಕ್ಕೆ ಎರಡು ಬಾರಿ ಕುಡಿಯುವುದರಿಂದ ಕಣ್ಣಿನ ತೊಂದರೆ ಕಣ್ಣಿನ ಉರಿಯೂತ ಇರುಳು ಕುರುಡು ಮುಂತಾದ ತೊಂದರೆಗಳಿಂದ ತಪ್ಪಿಸಿಕೊಳ್ಳಬಹುದು
4 ಚರ್ಮದ ಕಾಂತಿಯನ್ನು ಹೆಚ್ಚಿಸುತ್ತದೆ
ಒಂದರಿಂದ ಎರಡು ಮೂಲಂಗಿಯ ಬೇರುಗಳನ್ನು ತೆಗೆದುಕೊಂಡು ಅದನ್ನು ರುಬ್ಬಿಕೊಳ್ಳಿ ರುಬ್ಬಿದ ಮಿಶ್ರಣವನ್ನು ಚರ್ಮ ಮತ್ತು ಮುಖದ ಮೇಲೆ ಹಚ್ಚಿಕೊಳ್ಳಿ 15-20 ನಿಮಿಷ ಹಾಗೇ ಬಿಟ್ಟು ನಂತರ ಮುಖ ತೊಳೆದುಕೊಂಡು ಹೀಗೆ ಮಾಡುವುದರಿಂದ ಮುಖ ಹಾಗೂ ಚರ್ಮದ ಕಾಂತಿಯನ್ನು ಹೆಚ್ಚಿಸುತ್ತದೆ
ಡಾ ರಾಜೇಶ್ ಬಾಯಾರಿ
ಚಿತ್ರಕೂಟ ಆಯುರ್ವೇದ ಚಿತ್ತೂರು
ಸಂಪರ್ಕಿಸಿ www.chithrakoota.com