ಸೌದಿಯಲ್ಲಿ ಹರೀಶ್ ಬಂಧನ- ಸಹಾಯ ಕೋರಿ ಪತ್ನಿಯಿಂದ ಮುಖ್ಯಮಂತ್ರಿಗೆ ಮನವಿ
ಉಡುಪಿ- ಸಾಮಾಜಿಕ ಜಾಲತಾಣದಲ್ಲಿ ಸೌದಿ ದೊರೆಯ ಬಗ್ಗೆ ಅವಹೇಳನಕಾರಿ ಪೋಸ್ಟ್ ಹಾಕಿದ್ದಾರೆ ಎಂಬ ಆರೋಪದಲ್ಲಿ ಬಂಧನ ಕೊಳ್ಳಗಾದ ಕುಂದಾಪುರದ ಹರೀಶ್ ಬಂಗೇರ ರವರನ್ನು ಆದಷ್ಟು ಬೇಗ ಬಿಡಿಸಿ ಸಹಾಯ ಮಾಡುವಂತೆ ಹರೀಶ್ ಬಂಗೇರ ಅವರ ಪತ್ನಿ ಸುಮನ ರವರು ಮುಖ್ಯಮಂತ್ರಿ ಯಡಿಯೂರಪ್ಪರಿಗೆ ಮನವಿ ಮಾಡಿದರು.
ಮುಖ್ಯಮಂತ್ರಿಗಳ ಉಡುಪಿ ಕೃಷ್ಣ ಮಠದ ಭೇಟಿಯ ಸಂದರ್ಭದಲ್ಲಿ, ಉಡುಪಿ ಶಾಸಕ ರಘುಪತಿ ಭಟ್ ಮತ್ತು ಸಚಿವ ಕೋಟ ಶ್ರೀನಿವಾಸ ಪೂಜಾರಿಯವರ ಮೂಲಕ ಮನವಿಯನ್ನ ಮಾಡಲಾಯಿತು ಇದಕ್ಕೆ ಪ್ರತಿಕ್ರಿಯಿಸಿದ ಬಿ ಎಸ್ ವೈ ವಿದೇಶಾಂಗ ಸಚಿವರ ಬಳಿ ಮಾತಾಡಿರುವುದಾಗಿ ತಿಳಿಸಿದರು . ಭಾರತೀಯ ರಾಯಭಾರಿ ಕಛೇರಿಯಿಂದ ಸೌದಿ ಸರ್ಕಾರಕ್ಕೆ ವಿವರಗಳನ್ನ ಈಗಾಗಲೇ ತಲುಪಿಸಲಾಗಿದೆ ಎಂಬುದಾಗಿ ಅವರು ತಿಳಿಸಿದರು.