ಹೇರ್ ಕಟ್ಟಿಂಗ್, ಪಾರ್ಲರ್ ಗಳಲ್ಲಿ ಜನಸಂದಣಿ ಸೇರದಂತೆ ಮುಂಜಾಗ್ರತೆ ವಹಿಸಿ: ಡಿಹೆಚ್ಓ

ಉಡುಪಿ: ಜಿಲ್ಲೆಯಾದ್ಯಂತ ಇರುವ ವಿವಿಧ ಹೇರ್ ಕಟ್ಟಿಂಗ್ ಶಾಪ್‍ಗಳು, ಬ್ಯೂಟಿಪಾರ್ಲರ್‍ಗಳು, ಸಾರಿ ಸೆಂಟರ್ಸ್ ಮತ್ತು ಇತರೆ ಹೆಚ್ಚು ಜನಸಂದಣಿ ಸೇರುವ ಅಂಗಡಿ
ಮುಂಗಟ್ಟುಗಳು, ಕೊರೊನಾ ವೈರಸ್ ಹರಡದಂತೆ ಮುಂಜಾಗ್ರತವಾಗಿ ಜಿಲ್ಲಾಡಳಿತ ಸೂಚಿಸಿರುವ ಈ ಕೆಳಕಂಡ ಕ್ರಮಗಳನ್ನು ಪಾಲಿಸುವಂತೆ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿಗಳ ಪ್ರಕಟಣೆ ತಿಳಿಸಿದೆ.


ಹೇರ್ ಕಟ್ಟಿಂಗ್ ಶಾಪ್‍ಗಳು ಮತ್ತು ಬ್ಯೂಟಿ ಪಾರ್ಲರ್‍ಗಳಲ್ಲಿ ಕಾರ್ಯನಿರ್ವಹಿಸುವವರು ಕಡ್ಡಾಯವಾಗಿ ಮಾಸ್ಕ್ ಧರಿಸಬೇಕು, ಪ್ರತಿಯೊಬ್ಬ ಗ್ರಾಹಕರಿಗೂ ಪ್ರತ್ಯೇಕವಾಗಿ ಬಟ್ಟೆಗಳನ್ನು ಉಪಯೋಗಿಸಬೇಕು. ತಮ್ಮಲ್ಲಿರುವ ಪೀಠೋಪಕರಣಗಳನ್ನು ಆಗಾಗ ಸ್ವಚ್ಛಗೊಳಿಸುತ್ತಿರಬೇಕು. ವೈಯಕ್ತಿಕ ಸ್ವಚ್ಛತೆ ಬಗ್ಗೆ ಹೆಚ್ಚಿನ ಒತ್ತು ನೀಡಬೇಕು.
ಆಗಾಗ್ಗೆ ಸೋಪ್ ಬಳಸಿ ಹ್ಯಾಂಡ್ ವಾಶ್ ಮಾಡಬೇಕು. ಸ್ಯಾನಿಟೈಸರ್ ಬಳಸಬೇಕು. ತಮ್ಮ ಶಾಪ್‍ಗಳಲ್ಲಿ ಹೆಚ್ಚಿನ ಜನಸಂದಣಿ ಸೇರದಂತೆ ನೋಡಿಕೊಳ್ಳಬೇಕು. ಗ್ರಾಹಕರನ್ನು ಮುಟ್ಟಿದ ನಂತರ ಕಣ್ಣು, ಮೂಗು, ಬಾಯಿಯನ್ನು ಮುಟ್ಟಬಾರದು.

ಸಾರಿ ಸೆಂಟರ್‍ಗಳಲ್ಲಿ ಕಾರ್ಯನಿರ್ವಹಿಸುವವರು ಕೂಡ ಮಾಸ್ಕ್ ಧರಿಸಬೇಕು. ಗ್ರಾಹಕರಿಗೆ
ಬಟ್ಟೆಯನ್ನು ಮುಟ್ಟುವ ಮೊದಲು ಸ್ಯಾನಿಟೈಸರ್ ಬಳಸಲು ವ್ಯವಸ್ಥೆ ಮಾಡುವಂತೆ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Leave a Reply

Your email address will not be published. Required fields are marked *

error: Content is protected !!