ಸನಾತನ ಸಂಸ್ಥೆ ಮತ್ತು ಹಿಂದೂ ಜನಜಾಗೃತಿ ಸಮಿತಿ ವತಿಯಿಂದ ಗುರುಪೂರ್ಣಿಮಾ ಮಹೋತ್ಸವ

ಉಡುಪಿ- ಆಷಾಢಪೂರ್ಣಿಮೆ ಎಂದರೆ ವ್ಯಾಸಪೂರ್ಣಿಮೆ ಅಂದರೆ ಗುರುಪೂರ್ಣಿಮೆಯಾಗಿದೆ. ಶಿಷ್ಯನು ಗುರುಗಳಿಗೆ ಕೃತಜ್ಞತೆಯನ್ನು ಅರ್ಪಿಸುವಂತಹ ದಿನ ಇದಾಗಿದೆ. ಶಿಷ್ಯ, ಸಾಧಕ, ಜಿಜ್ಞಾಸು ಮತ್ತು ಭಕ್ತ ಇವರ ಜೀವನದಲ್ಲಿ ಗುರುಪೂರ್ಣಿಮೆಗೆ ವಿಶೇಷ ಮಹತ್ವವಿದೆ. ಇಂದಿನ ದಿನ ಗುರುತತ್ವವು ನಿತ್ಯದ ತುಲನೆಯಲ್ಲಿ ಸಾವಿರಪಟ್ಟು ಜಾಸ್ತಿ ಪ್ರಮಾಣದಲ್ಲಿ ಕಾರ್ಯನಿರತವಿರುತ್ತದೆ. ಈ ಸಂದರ್ಭದಲ್ಲಿ ಸನಾತನ ಸಂಸ್ಥೆ ಮತ್ತು ಹಿಂದೂ ಜನಜಾಗೃತಿ ಸಮಿತಿವತಿಯಿಂದ ಗುರುಪೂರ್ಣಿಮೆಯು ಕಿದಿಯೂರು ಹೋಟೆಲಿನ ಶೇಷ ಶಯನ ಸಭಾಗೃಹದಲ್ಲಿ ನೆರವೇರಿತು.

ಈ ಕಾರ್ಯಕ್ರಮದಲ್ಲಿ ಸನಾತನ ಸಂಸ್ಥೆಯ ಸಂಸ್ಥಾಪಕರಾದ ಪರಾತ್ಪರ ಗುರು ಡಾ.ಆಠವಲೆ ಇವರ ಗುರುಪೂರ್ಣಿಮಾ 2019 ನಿಮಿತ್ತ ಸಂದೇಶವನ್ನು ಶೋಭಾ ವಾಚನ ಮಾಡಿದರು.
ಹಿಂದೂ ರಾಷ್ಟ್ರ ಸ್ಥಾಪನೆಗಾಗಿ ಕಾರ್ಯನಿರತ ಹಿಂದೂ ಜನಜಾಗೃತಿ ಸಮಿತಿಯ ಹಿಂದೂ ಸಂಘಟನೆಯ ಅದ್ವಿತೀಯ ಕಾರ್ಯ” ಮತ್ತು ಪರಾತ್ಪರ ಗುರು ಡಾ.ಜಯಂತ ಬಾಳಾಜಿ ಆಠವಲೆಯವರ ಅಲೌಕಿಕ ಕಾರ್ಯ.
ದೇವತೆಗಳ ಉಪಾಸನೆ, ಹಿಂದೂ ಸಂಸ್ಕಾರಗಳು ಮತ್ತು ಪರಂಪರೆ, ಗುರುಕೃಪಾಯೋಗಾನುಸಾರ ಸಾಧನೆ, ಬಾಲಸಂಸ್ಕಾರ, ಹಿಂದೂ ಧರ್ಮ ರಕ್ಷಣೆ, ಧರ್ಮಜಾಗೃತಿ, ಸಂಸ್ಕೃತಿ ಪಾಲನೆ , ಆಯುರ್ವೇದ, ಹಿಂದೂ ರಾಷ್ಟ್ರದ ಸ್ಥಾಪನೆ, ಅಗ್ನಿಹೋತ್ರ, ಅಗ್ನಿಶಮನ ಪ್ರಶಿಕ್ಷಣ ಮತ್ತು ಔಷಧೀಯ ವನಸ್ಪತಿಗಳ ತೋಟ ಸಹಿತ `ಕೈಕಾಲುಗಳ ಅಂಗೈ ಮೇಲೆ ಬಿಂದುಒತ್ತಡ ಅಂದರೆ ರೆಪ್ಲೆಕ್ಸಾಲಜಿ ಹಾಗೂ ಬಿಂದು ಒತ್ತಡ, ರೋಗ ನಿವಾರಣೆಗಾಗಿ ಉಪಯುಕ್ತವಿರುವ ನಾಮಜಪ, ಇತರ ಹಲವು ವಿಷಯಗಳ ಕುರಿತಾದ ಗ್ರಂಥಗಳ ಪ್ರದರ್ಶನ ಮತ್ತು ಮಾರಾಟ, ಕಾಶ್ಮೀರಿ ಹಿಂದೂಗಳ ಮೇಲಿನ ಅತ್ಯಾಚಾರಗಳು ಮುಂತಾದ ವಿಷಯಗಳ ಕುರಿತಾದ ಫಲಕಗಳ ಪ್ರದರ್ಶನ ಏರ್ಪಡಿಸಲಾಯಿತು .

ಮುಖ್ಯ ಅತಿಥಿಗಳಾಗಿ ವಿಶ್ವಹಿಂದೂ ಪರಿಷತ್ತಿನಲ್ಲಿ ಉಡುಪಿ ಜಿಲ್ಲಾ ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸಿದ, ನೀಲಾವರ ಗೋಶಾಲೆಯ ಟ್ರಸ್ಟೀ ಯಾಗಿ ಸೇವೆ ಸಲ್ಲಿಸುತ್ತಿರುವ ಜಲನ್ಚಾರು ಶ್ರೀ ರಘುಪತಿ ತಂತ್ರಿಯವರು ವಿಧ್ಯಾರ್ಥಿನಿ ಕು. ವೈಷ್ಣವಿ ಇವರ ಸತ್ಕಾರಿಸಿದರು

ಈ ಸಮಯದಲ್ಲಿ ಆಪತ್ಕಾಲದಲ್ಲಿ ಸಮಾಜಸಹಾಯಕ್ಕಾಗಿ ಆವಶ್ಯಕವಿರುವ ‘ಪ್ರಥಮೋಪಚಾರ ಪ್ರಾತ್ಯಕ್ಷಿಕೆ’ ಹಾಗೂ ‘ಸ್ವಸಂರಕ್ಷಣೆ ಪ್ರಾತ್ಯಕ್ಷಿಕೆ’ಯನ್ನು ತೋರಿಸಲಾಯಿತು. ಗುರುಪೂರ್ಣಿಮೆಯ ಈ ಕಾರ್ಯಕ್ರಮದ ಸಂದರ್ಭ ಕಿದಿಯೂರು ಹೋಟೆಲಿನ ಶ್ರೀ ಜಿತೇಶ್ ಕಿದಿಯೂರವರ ಸತ್ಕಾರವನ್ನು ಮಾಡಲಾಯಿತು.

13 ಭಾಷೆಗಳಲ್ಲಿ ‘ಫೇಸ್‌ಬುಕ್ ಲೈವ್’ನ ಮಾಧ್ಯಮದಿಂದ ಲಕ್ಷಾಂತರ ಜಿಜ್ಞಾಸುಗಳು ‘ಗುರುಪೂರ್ಣಿಮಾ ಮಹೋತ್ಸವದ ಲಾಭ’ವನ್ನು ಪಡೆದರು ಈ ವರ್ಷ ಸನಾತನ ಸಂಸ್ಥೆ ಮತ್ತು ಹಿಂದೂ ಜನಜಾಗೃತಿ ಸಮಿತಿಯ ವತಿಯಿಂದ ಕನ್ನಡ, ಮರಾಠಿ, ಹಿಂದಿ, ತಮಿಳು, ತೆಲುಗು, ಮಲ್ಯಾಳಂ, ಗುಜರಾತಿ, ಪಂಜಾಬಿ, ಬಂಗಾಲಿ, ಉಡಿಯಾ, ಅಸ್ಸಾಮಿ ಈ ಭಾರತೀಯ ಭಾಷೆ, ಅದೇ ರೀತಿ ಆಂಗ್ಲ ಹಾಗೂ ನೇಪಾಳಿ ಈ ವಿದೇಶಿ ಭಾಷೆಗಳಲ್ಲಿ ಹೀಗೆ ಒಟ್ಟು 13 ಭಾಷೆಗಳಲ್ಲಿ ‘ಫೇಸ್‌ಬುಕ್ ಲೈವ್’ನ ಮಾಧ್ಯಮದಿಂದ ಗುರುಪೂರ್ಣಿಮಾ ಮಹೋತ್ಸವದ ನೇರಪ್ರಸಾರ ಮಾಡಲಾಯಿತು.

 

Leave a Reply

Your email address will not be published. Required fields are marked *

error: Content is protected !!