ಉಡುಪಿಗೆ ಗ್ರೀನ್ ಝೋನ್ ಪಟ್ಟ….. ಏನಿದೆ? ಏನಿಲ್ಲ?
ಉಡುಪಿ- ಜಿಲ್ಲೆ ಮಟ್ಟಿಗೆ ಗ್ರೀನ್ ಝೋನ್ ಪ್ರದೇಶ ಇದೀಗ ದಾಖಲೆಯಲ್ಲಿ ಆಗುತ್ತಿದೆ. ಜಿಲ್ಲೆಯಲ್ಲಿ ಜನರಿಗೆ ಅಗತ್ಯವಿರುವ ಎಲ್ಲಾ ಕಾರ್ಯಗಳಿಗೆ ಶರತ್ತುಬದ್ಧವಾಗಿ ವಿನಾಯತಿ ಈಗಾಗಲೇ ನೀಡಲಾಗಿದ್ದರೂ ಕೂಡ ಮೇ.3 ತನಕ ಲಾಕ್ ಡೌನ್ ಜಾರಿಯಲ್ಲಿರುವ ಕಾರಣ ಸಾಮಾಜಿಕ ಅಂತರ ಪಾಲನೆ,ಅಂಗಡಿಗಳು ಬೆಳ್ಳಿಗೆ 7 ರಿಂದ 11 ಗಂಟೆಯ ಸಮಯದ ಅವಧಿ ವೇಳೆ ಮುಚ್ಚುವ ವ್ಯವಸ್ಥೆ ಆಗಲೇಬೇಕಿದೆ. ಹಾಗಾಗಿ ಜನರು ಸಾಮಾಜಿಕ ಅಂತರ ಹಾಗು ಮಾಸ್ಕ ಬಳಕೆಯನ್ನ ಕಡ್ಡಾಯವಾಗಿ ನಿರ್ವಹಿಸಬೇಕು ಹಾಗು ಈ ವಿನಾಯತಿಯ ಸದುಪಯೋಗಪಡಿಸಿಕೊಳ್ಳಬೇಕು ಎಂದು ಉಡುಪಿ ಜಿಲ್ಲಾಧಿಕಾರಿ ಜಿ. ಜಗದೀಶ್ ಹೇಳಿದ್ದಾರೆ.
ಯಾವುದು ಇಲ್ಲ ? ಯಾವುದು ಇದೆ ?….
ಚಿನ್ನದಂಗಡಿಗಳು, ಬ್ರಾಂಡೆಡ್ ಶಾಪ್ ಗಳು, ಸಲೂನ್, ಬ್ಯುಟಿ ಪಾರ್ಲರ್ , ಸ್ಪಾ ಗಳು ತೆರೆಯಲು ಇಲ್ಲ, ಹೋಟೆಲ್ ನಲ್ಲಿ ಪಾರ್ಸೆಲ್ ನೀಡಬಹುದು .
ಗ್ರಾಮೀಣ ಪ್ರದೇಶದಲ್ಲಿ ಕೈಗಾರಿಕೆ ನಡೆಸಲು ಅನುಮತಿ ನೀಡಲಾಗಿದೆ. ಕಟ್ಟಡ ನಿರ್ಮಾಣ ಕಾರ್ಯಕ್ಕೆ, ಮನೆ ನಿರ್ಮಾಣಕ್ಕೆ, ಕೃಷಿ , ತೋಟಗಾರಿಕೆ, ಮೀನುಗಾರಿಕೆ ನಡೆಸಲು ಅನುಮತಿ ನೀಡಲಾಗಿದೆ. ಕಟ್ಟಡ ನಿರ್ಮಾಣಕ್ಕೆ ಪೂರಕವಾಗಿ ಮರಳು, ಕ್ರಷರ್ ಪ್ರಾರಂಭವಾಗಲು ಕ್ರಮಕೈಗೊಳ್ಳಲಾಗಿದೆ. ಎಲ್ಲಾ ಕಡೆ ಸಾಮಾಜಿಕ ಅಂತರ ಕಾಯ್ದುಕೊಳ್ಳಬೇಕು.
ಮಾಸ್ಕ್, ಸ್ಯಾನಿಟೈಸರ್ ಬಳಸಬೇಕು. ನಿಯಮ ಉಲ್ಲಂಘಿಸಿದರೇ ಸಂಬಂದಪಟ್ತಟ್ಟ ಮಾಲಿಕರ ವಿರುದ್ಧ ಕ್ರಮಕೈಗೊಳ್ಳಲು ಜಿಲ್ಲಾ ಎಸ್ಪಿ ಜೊತೆಗೂ ಮಾತನಾಡಿದ್ದೇನೆ ಎಂದು ಡಿಸಿ ಹೇಳಿದ್ದಾರೆ. ಅಲ್ಲದೇ ಇದೆಲ್ಲದರ ಬಗ್ಗೆ ಮುತುವರ್ಜಿ ವಹಿಸಲು ಎಸಿ ಸಹಿತ ಪೊಲೀಸ್ ಅಧಿಕಾರಿಗಳಿಗೆ ಸೂಚನೆ ನೀಡಿದ್ದು ನೋಡೆಲ್ ಅಧಿಕಾರಿಗಳನ್ನು ನಿಯೋಜಿಸಲಾಗಿದೆ ಎಂದರು.
ಸ್ವಲ್ಪ ಯಾಮಾರಿದರೂ ನಿಮ್ಮ ಗಾಡಿ ಸೀಜ್
ಇವೆಲ್ಲಾ ಚಟುವಟಿಕೆಗಳು ನಡೆದರೂ ಕೂಡ ಜನರು ಇಚ್ಚಾನುಸಾರ ಸುಖಾಸುಮ್ಮನೆ ತಿರುಗಾಡುವಂತಿಲ್ಲ. ಮೇ.3 ತನಕ ಲಾಕ್ ಡೌನ್ ನಡೆಯಲಿದೆ. ಓಡಾಡುವವರು ತಮ್ಮತಮ್ಮ ಕೆಲಸ ನಿರ್ವಹಣೆ ಸಂಸ್ಥೆಯಿಂದ ಪಾಸ್ ಪಡೆದು ಪೊಲೀಸರಿಗೆ ತೋರಿಸಬೇಕು. ಅಂಗಡಿಗಳು ಬೆಳಿಗ್ಗೆ 7 ರಿಂದ ಬೆಳಿಗ್ಗೆ 11ರವರೆಗೆ ತೆರೆಯಬೇಕು. ಆಟೋ ರಿಕ್ಷಾ ಸೇರಿದಂತೆ ಯಾವುದೇ ಸಾರ್ವಜನಿಕ ಸಾರಿಗೆ ವ್ಯವಸ್ಥೆಯಿರಬಾರದು. ಈಗಾಗಲೇ 750ಕ್ಕೂ ಅಧಿಕ ವಾಹನಗಳು ವಶಕ್ಕೆ ಪಡೆಯಲಾಗಿದೆ.