ಹಸಿರು ಗಿಳಿಯಾರು

ಅದೊಂದು ಅಮ್ರತಗಳಿಗೆಯಲ್ಲಿ ಪಡುಕರೆ ಉದಯಣ್ಣ ‘ಹಸಿರು ಗಿಳಿಯಾರು’ ಮಾಡೋಣ ಎಂದರು..! ನಾವೆಲ್ಲಾ ಅಸ್ತು ಎಂದೆವು.!

ಗೀತಾನಂದ ಪೌಂಡೇಶನ್ ಕೋಟ, ಫ್ರೆಂಡ್ಸ್ ಗಿಳಿಯಾರು,ಹಾಗೂ ನಾವು ಜನಸೇವಾ ಟ್ರಸ್ಟ್ (ರಿ) ಸೇರಿಕೊಂಡು ನಾಡಿದ್ದು ಭಾನುವಾರ ‘ಹಸಿರು ಗಿಳಿಯಾರಿ’ನ ಮೊದಲನೆ ಕಂತಿನ ಭಾಗವಾಗಿ ಕೋಟ ಗಿಳಿಯಾರಿನ ಪಶು ಆಸ್ಪತ್ರೆ ಸುತ್ತ ಒಂದಿಷ್ಟು ಔಷಧಿಯ ಗಿಡಗಳನ್ನು ನೆಡಲಿದೆ.

ನೆಟ್ಟ ಅಷ್ಟೂ ಗಿಡಗಳ ಪೋಷಣೆಯ ಹೊಣೆಯನ್ನು ಪಶು ಆಸ್ಪತ್ರೆ ಅಡಳಿತ ಮಂಡಳಿ ವಹಿಸಿಕೊಳ್ಳಲಿದೆ, ಜನಸೇವಾ ಟ್ರಸ್ಟ್ ಈ ಹಿಂದೆ ಸಾಲಿಗ್ರಾಮ ಪೇಟೆಯ ಒಂದಷ್ಟು ವಾಣಿಜ್ಯ ಕಟ್ಟಡಗಳ ಎದುರು, ಆನೆಗುಡ್ಡೆ ದೇವಸ್ಥಾನದ ರಸ್ತೆಗಳ ಇಕ್ಕೆಲಗಳಲ್ಲಿ ಖುದ್ದು ತಾವೆ ನೆಟ್ಟ ಗಿಡಗಳನ್ನು ಪೋಷಿಸುವ ಕೆಲಸ ಮಾಡುತ್ತಿದೆ, ಕೇವಲ ಪೋಟೊ ಕ್ಲಿಕ್ಕಿಸುವುದಕ್ಕಷ್ಟೇ ಗಿಡನೆಡುವ ಕೆಲಸವಾಗದೇ ಅವುಗಳ ಪೋಷಿಸುವ ಜವಬ್ದಾರಿಯೂ ನಮ್ಮದಾಗಬೇಕಿದೆ..!!

ಜನಸೇವಾ ಟ್ರಸ್ಟ್ ನೇತ್ರತ್ವದಲ್ಲಿ ಈ ‘ಹಸಿರು ಗಿಳಿಯಾರು’ ಇನ್ನಷ್ಟೂ ಹೆಚ್ಚಿನ ಕಂತುಗಳಲ್ಲಿ ನಡೆಯಲಿದ್ದು ನಿಮ್ಮೆಲ್ಲರ ಪ್ರೀತಿಯ ಸಹಭಾಗಿತ್ವವನ್ನು ಜನಸೇವಾ ಟ್ರಸ್ಟ್(ರಿ) ಮೂಡುಗಿಳಿಯಾರು ಎದುರುನೋಡುತ್ತಿದೆ.
ನಾಡಿದ್ದು ಭಾನುವಾರ ನೀವೆಲ್ಲಾ ಬಿಡುವು ಮಾಡಿಕೊಂಡು ಬಂದು ಬಿಡಿ.ಜೊತೆಯಾಗಿ ನಿಂತು ಒಂದಷ್ಟು ಔಷದೀಯ ಗಿಡಗಳ ನೆಟ್ಟು ಸಂಭ್ರಮಿಸುವ ಬನ್ನಿ.

ಜನಸೇವಾ ಟ್ರಷ್ಟ್ ರಿ.
ಮೂಡುಗಿಳಿಯಾರು.

Leave a Reply

Your email address will not be published. Required fields are marked *

error: Content is protected !!