ಗ್ರಾಮ ಸಹಾಯಕ ಹುದ್ದೆ ಖಾಯಂಗೊಳಿಸುವಿಕೆ ಚಿಂತನೆ: ಆರ್.ಅಶೋಕ್
ಬೀಜಾಡಿ – ಗ್ರಾಮ ಸಹಾಯಕ ಹುದ್ದೆಯನ್ನು ಖಾಯಂಗೊಳಿಸುವ ಬಗ್ಗೆ ಸರ್ಕಾರ ಚಿಂತನೆ ನಡೆಸಲಾಗುತ್ತದೆ. ಈ ಕುರಿತು ಬೈಂದೂರು ತಾಲೂಕು ಗ್ರಾಮ ಸಹಾಯಕ ನಿಯೋಗವು ಮನವಿ ನೀಡಿದೆ. ಇಲಾಖೆಯ ಹಿರಿಯ ಅಧಿಕಾರಿಗಳ ಜತೆ ಚರ್ಚಿಸಿ ಮುಂದಿನ ದಿನದಲ್ಲಿ ಸೂಕ್ತವಾದ ನ್ಯಾಯವನ್ನು ನೀಡಲು ಪ್ರಯುತ್ನಿಸುತ್ತೇನೆ ಎಂದು ಕಂದಾಯ ಸಚಿವ ಆರ್ ಅಶೋಕ್ ಹೇಳಿದರು. ಕುಂದಾಪುರ ತಾಲೂಕಿನ ಬೀಜಾಡಿ ಐಶ್ವರ್ಯ ಸ್ಟುಡೀಯೋಗೆ 2 ನೇ ಬಾರಿಗೆ ಖಾಸಗಿ ಬೇಟಿ ನೀಡಿದ ಸಚಿವ ಆರ್.ಅಶೋಕ್ ಸುದ್ದಿಗಾರರೊಂದಿಗೆ ಮಾತನಾಡಿದರು.
ಅವರು ಕುಂದಾಪುರದಲ್ಲಿ ಎಸಿ ಕಚೇರಿ ಇದ್ದು, ಜಿಲ್ಲೆಯ ಎಲ್ಲಾ ಭಾಗದ ಸಾರ್ವಜನಿಕರೂ ಒಂದೇ ಕಚೇರಿಯನ್ನು ಅವಲಂಬಿತರಾಗಿದ್ದರು. ಈ ಒತ್ತಡವನ್ನು ನಿಭಾಯಿಸಲು ಉಡುಪಿ ಸಬ್‌ಡಿವಿಜನ್ ವ್ಯಾಪ್ತಿಯನ್ನು ರೂಪಿಸಿ ನೂತನ ಎಸಿ ಕಚೇರಿಯನ್ನು ಸರ್ಕಾರದ ವತಿಯಿಂದ ಮಂಜೂರಾತಿ ಮಾಡಲಾಗಿದೆ. ಈಗಾಗಲೇ ಪ್ರಥಮ ದರ್ಜೆ, ದ್ವೀತಿಯ ದರ್ಜೆ, ಡಿ ಗ್ರೂಪ್ ಸಿಬ್ಬಂದಿಗಳ ನೇಮಕಾತಿಗೆ ಸರ್ಕಾರ ಚಿಂತನೆ ನಡೆಸಲಾಗಿದೆ. ೫೭ರ ಅರ್ಜಿಯಲ್ಲಿ ಬಗರ್ ಹುಕುಂ ಸಾಗುವಳಿ ಜಮೀನು ಮಂಜೂರಾತಿಗೆ ಅರ್ಜಿಸಲಿದ್ದನ್ನು ಸರ್ಕಾರದ ಪರಿಶೀಲನಾ ಹಂತದಲ್ಲಿದೆ ಎಂದರು.
ಇದೇ ಸಂದರ್ಭದಲ್ಲಿ ಸಂಸ್ಥೆಯ ವತಿಯಿಂದ ಸಚಿವರನ್ನು ಸನ್ಮಾನಿಸಿ ಗೌರವಿಸಲಾಯಿತು.
ಕುಂದಾಪುರ ಎಸಿ ಕೆ.ರಾಜು, ಬೀಜಾಡಿ ಗ್ರಾ.ಪಂ ಸದಸ್ಯ ವಾದಿರಾಜ ಹೆಬ್ಬಾರ್, ಗೋಪಾಡಿ ಗ್ರಾ.ಪಂ ಸದಸ್ಯ ಸುರೇಶ್ ಶೆಟ್ಟಿ, ಸ್ಥಳೀಯರಾದ ಪ್ರಭಾಕರ ಬಿ ಕುಂಭಾಸಿ, ಪತ್ರಕರ್ತ ಚಂದ್ರಶೇಖರ ಬೀಜಾಡಿ, ಕುಂದಾಪುರ ಚಾಲೇಂಜರ್‍ಸ್ ಪೌಂಡಶೇನ್‌ನ ಮುಖ್ಯಸ್ಥರಾದ ಸಂದೇಶ್ ಪುತ್ರನ್, ಅರುಣ ಪೂಜಾರಿ, ದಿನೇಶ್ ಕೋಡಿ, ರಮೇಶ್ ಪೂಜಾರಿ, ಶ್ರೀಕಾಂತ್ ಕೋಟೇಶ್ವರ, ಶಂಶಾಕ್ ಮಂಜ, ಸಂಸ್ಥೆಯ ಪ್ರಮುಖರು ಸೇರಿದಂತೆ ಸ್ಥಳೀಯ ಜನ ಪ್ರತಿನಿಧಿಗಳು, ಊರ ಗ್ರಾಮಸ್ಥರು ಉಪಸ್ಥಿತರಿದ್ದರು.