ಮದ್ಯ ಪ್ರೀಯರಿಗೆ ಗುಡ್ ನ್ಯೂಸ್: ಸೋಮವಾರದಿಂದ ರಾಜ್ಯಾದ್ಯಂತ ಮದ್ಯ ಮಾರಾಟಕ್ಕೆ ಅನುಮತಿ

ಬೆಂಗಳೂರು: ಕೊರೊನಾ ವೈರಸ್‌ ಹಿನ್ನೆಲೆಯಲ್ಲಿ ದೇಶಾದ್ಯಂತ ಕಳೆದ 39 ದಿನಗಳಿಂದ ಜಾರಿಯಲ್ಲಿರುವ ಲಾಕ್‌ಡೌನ್‌ ಮಾರ್ಗಸೂಚಿಗಳು ನಾಳೆ ಮಧ್ಯರಾತ್ರಿ (ಮೇ 3)ಗೆ ಕೊನೆಯಾಗಲಿವೆ.
 
ಕೆಂದ್ರ ಸರ್ಕಾರದ ಸೂಚನೆಯಂತೆ ರಾಜ್ಯವನ್ನು ಮೂರು ವಲಯಗಳನ್ನಾಗಿ ವಿಂಗಡನೆ ಮಾಡಲಾಗಿದೆ. ಕೇಂದ್ರದ ಮಾರ್ಗಸೂಚಿಯನ್ವಯ ಹೊಸ ಮಾರ್ಗಸೂಚಿಗಳನ್ನು ರಾಜ್ಯ ಸರ್ಕಾರ ಬಿಡುಗಡೆ ಮಾಡಿದೆ. ಹೊಸ ಮಾರ್ಗಸೂಚಿ ಅನ್ವಯ ಕರ್ನಾಟಕ ರಾಜ್ಯಾದ್ಯಂತ ಮದ್ಯ ಮಾರಾಟಕ್ಕೆ ಅನುಮತಿ ಕೊಡಲಾಗಿದೆ.

ರಾಜ್ಯವನ್ನು ರೆಡ್​, ಗ್ರೀನ್​​, ಆರೆಂಜ್ ಎಂದು ಮೂರು ಝೋನ್​ಗಳನ್ನಾಗಿಸಿ ವಿಂಗಡಣೆ ಮಾಡಲಾಗಿದೆ. ಕೇಂದ್ರ ಸರ್ಕಾರದ ಸಂಪೂರ್ಣ ಮಾರ್ಗಸೂಚಿಯನ್ನು ಪಾಲನೆಯನ್ನು ರಾಜ್ಯ ಸರ್ಕಾರ ಪಾಲನೆ ಮಾಡಿದ್ದು, ರೆಡ್​ ಝೋನ್​​ನಲ್ಲಿ ಕರ್ನಾಟಕದ ಆರು ಜಿಲ್ಲೆಗಳಿವೆ. ಬೆಂಗಳೂರು ನಗರ, ಮೈಸೂರು, ಬೆಳಗಾವಿ, ಕಲಬುರಗಿ, ಬಾಗಲಕೋಟೆ, ವಿಜಯಪುರ ರೆಡ್​ಝೋನ್‌ಲ್ಲಿರುವ ಜಿಲ್ಲೆಗಳು. ರೆಡ್ ಝೋನ್​​ಗಳಲ್ಲಿ ಯಾವುದೇ ಸಾರಿಗೆ ಸಂಚಾರ ಇರುವುದಿಲ್ಲ. ಆದರೆ ಎಲ್ಲಾ ಮೂರು ಜಿಲ್ಲೆಗಳಲ್ಲಿ ಮದ್ಯ ಮಾರಾಟಕ್ಕೆ ಅವಕಾಶ ಮಾಡಿಕೊಡಲಾಗಿದೆ. 

ಎಲ್ಲಾ ಮೂರೂ ಝೋನ್​ಗಳಲ್ಲೂ ಮೇ 4ರಿಂದ ಮದ್ಯ ಮಾರಾಟಕ್ಕೆ ಸರ್ಕಾರ ಅನುಮತಿ ನೀಡಲಾಗಿದೆ. ಸೋಮವಾರ ಬೆಳಗ್ಗೆ 10 ಗಂಟೆಯಿಂದಲೇ ಮದ್ಯದ ಅಂಗಡಿಗಳು ತೆರೆಯಲಿವೆ. ಕನಿಷ್ಠ 6 ಅಡಿ ಅಂತರ ಕಾಯ್ಡುಕೊಂಡು ಎಣ್ಣೆ ಖರೀದಿ ಮಾಡಬೇಕೆಂದು ಮಾರ್ಗಸೂಚಿಯಲ್ಲಿ ತಿಳಿಸಲಾಗಿದೆ. 

ರೆಡ್​ ಝೋನ್​​ನಲ್ಲಿ ಸಿಂಗಲ್​​ ಶಾಪ್​ಗಳಿಗೆ ಮಾತ್ರ ಅನುಮತಿ ಕೊಡಲಾಗಿದ್ದು, ಮದ್ಯವನ್ನು ಪಾರ್ಸೆಲ್ ತೆಗೆದುಕೊಂಡು ಹೋಗಲು ಮಾತ್ರ ಅವಕಾಶವಿದೆ. ಮದ್ಯ ಖರೀದಿಸುವಾಗ ಒಂದು ಸಲಕ್ಕೆ 5 ಜನರು ಮಾತ್ರ ಅಂಗಡಿ ಒಳಗಿರಬೇಕು. ಜೊತೆಗೆ ಪಾನ್​​​, ಗುಟ್ಕಾ, ಮಸಾಲಾ ಮಾರಾಟಕ್ಕೂ ಸರ್ಕಾರ ಅನುಮತಿಯನ್ನು ಕೊಟ್ಟಿದೆ. 

ಅಂತಾರಾಜ್ಯ ಓಡಾಟಕ್ಕೆ ಅವಕಾಶ ಹೊಸ ಮಾರ್ಗಸೂಚಿಯಲ್ಲಿಯೂ ಅನುಮತಿ ಇಲ್ಲ. ಅಂತರ್​​ ರಾಜ್ಯ, ಅಂತರ್​​ ಜಿಲ್ಲೆ ಬಸ್ ಸಂಚಾರ ಇರುವುದಿಲ್ಲ. ಆಯಾ ಜಿಲ್ಲೆಗಳಲ್ಲೇ ಶೇ.50ರಷ್ಟು ಬಸ್ ಸಂಚಾರಕ್ಕೆ ಅನುಮತಿ ಕೊಡಲಾಗಿದೆ. ಆದರೆ ಬೆಂಗಳೂರಿನಲ್ಲಿ ಬಿಎಂಟಿಸಿ ಬಸ್​ಗಳು ಓಡಾಟಕ್ಕೆ ಅನುಮತಿ ಕೊಟ್ಟಿಲ್ಲ. ಜೊತೆಗೆ ಮೆಟ್ರೋ ರೈಲುಗಳ ಸಂಚಾರವೂ ಇರುವುದಿಲ್ಲ.

Leave a Reply

Your email address will not be published. Required fields are marked *

error: Content is protected !!