ಗೋಲ್ಡನ್ ಟೈಗರ್ಸ್- ತೃತೀಯ ವರ್ಷದ ಹುಲಿವೇಷ

ಉಡುಪಿ – ಅಷ್ಟಮಿ ಬಂದರೆ ಸಾಕು ಪೊಡವಿಗೊಡೆಯನ ಊರಿನಲ್ಲಿ ಹುಲಿಗಳದ್ದೇ ಕಾರುಬಾರು, ಅಷ್ಟಮಿಯ ಸಂದಭದಲ್ಲಿ ಉಡುಪಿ ರಸ್ತೆಯ ಗಲ್ಲಿ ಗಲ್ಲಿಯಲ್ಲಿ ಹುಲಿಯನ್ನ ಕಾಣಬಹುದು, ಪ್ರತಿ ವರ್ಷ ಅಷ್ಟಮಿಯ ಸಂದರ್ಭದಲ್ಲಿ ಬೇರೆ ಬೇರೆ ಉದ್ದೇಶಗಳಿಗೆ ಹುಲಿ ವೇಷವನ್ನ ಹಾಕಿ ಆ ಹಣವನ್ನ ತಮ್ಮ ಸಮಾಜಮುಖಿ ಕಾರ್ಯಕ್ಕಾಗಿ ಅನೇಕ ಸಂಘ ಸಂಸ್ಥೆಗಳು ಬಳಸುತ್ತಿದ್ದಾರೆ , ಅದೇ ರೀತಿಯಾಗಿ ಸತತ ಎರಡು ವರ್ಷದಿಂದ ಗೋಲ್ಡನ್ ಟೈಗರ್ಸ್ ಬೇರೆ ಬೇರೆ ಉದ್ದೇಶಗಳಿಗಾಗಿ ಹುಲಿವೇಷವನ್ನ ಹಾಕುತ್ತಿದ್ದಾರೆ ಈ ಬಾರಿ ಗೋಲ್ಡನ್ ಟೈಗರ್ಸ್ ವತಿಯಿಂದ ತೃತೀಯ ವರ್ಷದ ಹುಲಿವೇಷವನ್ನ ಹಾಕಲಿದ್ದಾರೆ. ಗೋಲ್ಡನ್ ಟೈಗರ್ಸ್ ನವರು ಇದೇ 23 ಹಾಗು 24 ರಂದು ಹುಲಿವೇಷವನ್ನ ಹಾಕಲಿದ್ದಾರೆ. ಕಾನ್ಸರ್ ಪೀಡಿತ ಮಕ್ಕಳ ಚಿಕಿತ್ಸೆಯ ಸಹಾಯಾರ್ಥವಾಗಿ ಈ ಹುಲಿವೇಷವನ್ನ ಹಾಕಲಿದ್ದಾರೆ.

Leave a Reply

Your email address will not be published. Required fields are marked *

error: Content is protected !!