ಮಣ್ಣಿನಲ್ಲಿ ಗುದ್ದಾಡಿದರೆ ಬಂಗಾರವನ್ನು ಪಡೆಯಬಹುದು- ಜನಾರ್ಧನ್ ತೋನ್ಸೆ

ಉಡುಪಿ: ಮಣ್ಣಿನಲ್ಲಿ ಗುದ್ದಾಡಿದರೆ ಬಂಗಾರವನ್ನು ಪಡೆಯಬಹುದು ಮನುಷ್ಯನೊಂದಿಗೆ ಗುದ್ದಾಡಿದರೆ ಮಣ್ಣು ತಿನ್ನಬಹುದು ಎಂಬುದಾಗಿ ಜಿಲ್ಲಾ ಪಂಚಾಯತ್ ಸದಸ್ಯ ಜನಾರ್ಧನ್ ತೋನ್ಸೆ ನುಡಿದರು. ಅವರು ಭಾನುವಾರ ವೀರ ಮಾರುತಿ  ವ್ಯಾಯಾಮ ಶಾಲೆ ಕೆಳಾರ್ಕಳಬೆಟ್ಟು ,ಯುವಜನ ಸೇವಾ ಮತ್ತು ಕ್ರೀಡಾ ಇಲಾಖೆ ವತಿಯಿಂದ ಆಯೋಜಿಸಿದ ಕೆಸರ್ಡೊಂಜಿ ಗಮ್ಮತ್ತು ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡುತ್ತ  ಆಧುನಿಕ ಯುಗದಲ್ಲಿ ಯುವಜನರು ಕೃಷಿ ಹಾಗು ಕೃಷಿಯೇತರ ಚಟುವಟಿಕೆಗಳಲ್ಲಿ ತಮ್ಮನ್ನು ತಾವು ತೊಡಗಿಸಿಕೊಳ್ಳುವುದರಲ್ಲಿ ಹಿಂಜರಿಯುತ್ತಾರೆ  .ಆದರೆ ಕೃಷಿ ಪ್ರಧಾನವಾದ ನಮ್ಮ ದೇಶದಲ್ಲಿ ಕೃಷಿಗೆ ಅತೀ ಮುಖ್ಯವಾದ ಸ್ಥಾನವಿದೆ, ಆದ್ದರಿಂದ ಯುವಕರು ಕೃಷಿಗೆ ಹೆಚ್ಚಿನ ಒತ್ತುಕೊಟ್ಟು ದೇಶವನ್ನು ಸದೃಢಗೊಳಿಸಲು ಮುನ್ನುಗ್ಗಬೇಕು ಎಂದರು.


ಯುವಜನ ಸೇವಾ ಕ್ರೀಡಾ ಇಲಾಖೆಯ ಉಪ ನಿರ್ದೇಶಕರಾದ ರೋಶನ್‌ ಕುಮಾರ್ ಮಾತನಾಡಿ ಸರ್ಕಾರದಿಂದ ಗ್ರಾಮೀಣ-ಕ್ರೀಡೆ ಕ್ರೀಡೆಗಳಿಗೆ ಅತಿ ಹೆಚ್ಚು ಅನುದಾನ ಒದಗಿಸಿಕೊಡುವಲ್ಲಿ ನಾವು ಮನವಿ ಮಾಡುತ್ತಿದ್ದೇವೆ, ಸರಕಾರವೂ ಇದಕ್ಕೆ ಉತ್ತಮ ರೀತಿಯಲ್ಲಿ ಸ್ಪಂದಿಸುತ್ತಿದ ಎಂದರು. ವೀರಮಾರುತಿ ನಮ್ಮ ಶಾಲೆಯ ಅಧ್ಯಕ್ಷರಾದ ಪ್ರಖ್ಯಾತ್ ಶೆಟ್ಟಿ ಮಾತನಾಡಿ ಕೆಸರಿನ ಮಹತ್ವ ಊರಿನ ಯುವಜನರಿಗೆ ನೀಡಬೇಕೆನ್ನುವ ಹಂಬಲದಲ್ಲಿ ನಾವು ಕಳೆದ ನಾಲ್ಕು ವರ್ಷಗಳಿಂದ ಗ್ರಾಮೀಣ ಕ್ರೀಡೆಯನ್ನು ನಡೆಸುತ್ತಿದ್ದೇವೆ.

 

ಯುವಜನರಿಗೆ ಕೆಸರಿನ ಮುಜುಗರವನ್ನು ತಪ್ಪಿಸಲು ಕೃಷಿಯಲ್ಲಿ ತೊಡಗಿಸಿಕೊಳ್ಳಲು ನಮ್ಮ ಸಂಘವು  ಕಳೆದ ನಾಲ್ಕು ವರ್ಷಗಳಿಂದ  “ಕೆಸರ್ಡೊಂಜಿ ಗಮ್ಮತು” ಗ್ರಾಮೀಣ ಕ್ರೀಡಾಕೂಟವನ್ನು ಆಯೋಜಿಸುತ್ತಿದ್ದೇವೆ. ಇಂತಹ  ಕ್ರೀಡೆಯಿಂದ ಕೆಸರಿಗೆ ಮೈಯೊಡ್ಡಿ ನಾವು ಆಟವಾಡಿದರೆ ದೇಹಕ್ಕೆ ಬರುವ ಚರ್ಮರೋಗಗಳನ್ನು ತಡೆಗಟ್ಟಬಹುದೆಂದು  ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಕಾರ್ಯಕ್ರಮದಲ್ಲಿ ತಾಲೂಕು ಪಂಚಾಯತ್ ಸದಸ್ಯ ಧನಂಜಯ್ ಕುಂದರ್, ತೆಂಕನಿಡಿಯೂರು ಗ್ರಾಮ ಪಂಚಾಯತ್ ಅಧ್ಯಕ್ಷ ಕೃಷ್ಣಯ್ಯಶೆಟ್ಟಿ, ಶೇಖರ್ ಕೋಟ್ಯಾನ್ ,ಮಮತ ಶೆಟ್ಟಿ, ಅಂಜನ ಮಾತೃ ಮಂಡಳಿ ಅಧ್ಯಕ್ಷೆ ಜಯಂತಿ ,ವೀರ ಮಾರುತಿ ವ್ಯಾಯಾಮಶಾಲೆ ಅಣ್ಣಯ್ಯ ಪಾಲನ್, ಅಶೋಕ್ ಕೋಟ್ಯಾನ್ ,ಮಧುಕರ್, ಉದಯ್ ಉಪಸ್ಥಿತರಿದ್ದರು

ಅನಿಲ್ ಪಾಲನ್ ಕಾರ್ಯಕ್ರಮ ನಿರೂಪಿಸಿ ವಂದಿಸಿದರು .ಮಧ್ಯಾಹ್ನ ಗ್ರಾಮೀಣ ಆಹಾರವಾದ ಗಂಜಿ , ಹುರುಳಿ ಚಟ್ನಿ ,ನಾಟಿಕೋಳಿ ಯನ್ನ ಕ್ರೀಡಾಳುಗಳು ಸವಿದರು ..

Leave a Reply

Your email address will not be published. Required fields are marked *

error: Content is protected !!