ಮಲ್ಪೆ ಬೋಟ್ ಬಲೆಗೆ ಬಿದ್ದ ರಕ್ಕಸ ಗಾತ್ರದ ಅಪರೂಪದ ತೊರಕೆ ಮೀನು
ಉಡುಪಿಯ ಮಲ್ಪೆ ಬಂದರಿನಲ್ಲಿ ಭಾರೀ ಗಾತ್ರದ ಅಪರೂಪದ ಮೀನು ಬಲೆಗೆ ಸಿಲುಕಿದೆ. ಆಳ ಸಮುದ್ರ ಮೀನುಗಾರಿಕೆ ನಡೆಸುವ ದಿವ್ಯಾಂಶಿ ಎಂಬ ಹೆಸರಿನ ಬೋಟಿಗೆ ಇವತ್ತು ಬಂಪರ್ ಡ್ರಾ ಹೊಡೆದಿದೆ.
ಬಲೆಗೆ ಸಿಕ್ಕ ತೊರಕೆ ಜಾತಿಯ ರಕ್ಕಸ ಗಾತ್ರದ ಮೀನು ಬರೋಬ್ಬರಿ ಸಾವಿರದ ಇನ್ನೂರು ಕೆ.ಜಿಗೂ ಅಧಿಕ ಭಾರವಿದೆ. ಈ ಗಾತ್ರದ ಮೀನು ಸಿಗೋದು ಬಲು ಅಪರೂಪವೇ ಸರಿ. ಮಿಥುನ್ ಕುಂದರ್ ಈ ಬೋಟಿನ ಮಾಲಕರು. ಬಲೆಗೆ ಸಿಕ್ಕ ಈ ಗಜಗಾತ್ರದ ಮೀನನ್ನು ದಡಕ್ಕೆ ಎಳೆಯಲು ಹರಸಾಹಸ ಪಡಬೇಕಾಯ್ತು.
ಕ್ರೈನ್ ನ ಸಹಾಯದಿಂದ ಎತ್ತಿ ಮಲ್ಪೆ ಬಂದರಿಗೆ ಸಾಗಿಸಲಾಯ್ತು.ಈ ಗಜಗಾತ್ರದ ಮೀನನ್ನು ನೋಡಲು ಮತ್ಸ್ಯಪ್ರಿಯರ ದಂಡೇ ನೆರೆದಿತ್ತು.ಮೀನುಗಾರರೇ ಗಿಜಿಗುಡುತ್ತಿರುವ ಮಲ್ಪೆಯಲ್ಲಿ ಈ ಗಜಗಾತ್ರದ ಮೀನು ಕೆಲಹೊತ್ತು ಆಕರ್ಷಣೆಯ ಕೇಂದ್ರಬಿಂದುವಾಗಿತ್ತು.
ಇಷ್ಡು ದೊಡ್ಡ ಮೀನನ್ನು ಕೊಳ್ಳುವರಾರು ಎಂದು ಜನ ಕುತೂಹಲದಿಂದ ನೋಡುತ್ತಿರುವಾಗಲೇ ಉಡುಪಿಯ ಮಾರುಕಟ್ಟೆಗೆ ಈ ಮೀನು ಸೇಲ್ ಆಗಿದೆ.ಭಾರೀ ಗಾತ್ರದ ತೊರಕೆ ಮೀನನ್ನು ಕುಯ್ದು ಮಾಂಸ ಮಾಡಿ ಕೆಜಿಗೆ ಐವತ್ತು ರೂಪಾಯಿಯಂತೆ ಮಾರಾಟ ಮಾಡುವ ಮೂಲಕ ಸಾಕಷ್ಡು ಲಾಭ ಮಾಡ್ತಾರೆ.
ನೀವು ನಂಬಲಿಕ್ಕಿಲ್ಲ , ಈ ಒಂದು ಮೀನಿನ ಬೆಲೆ ಅಂದಾಜು ಅರವತ್ತು ಸಾವಿರ ಇರಬಹುದು ಎಂದು ತಿಳಿದುಬಂದಿದೆ. ತೊರಕೆ ಮೀನಿನ ಟೆಸ್ಟ್ ತಿಂದವರಿಗೇ ಗೊತ್ತು…ಈ ಗಜಗಾತ್ರದ ಮೀನು ಸಾವಿರಾರು ಮತ್ಸ್ಯಪ್ರಿಯರ ಹೊಟ್ಟೆ ಸೇರಿ ಸಂತೃಪ್ತಿ ನೀಡೋದಂತೂ ಖಂಡಿತ.