ಬೈಂದೂರಿನಲ್ಲಿ ತಯಾರಾಗುತ್ತಿದ್ದೆ ಕೊರೋನಾ ಪ್ರೋಟೆಕ್ಷನ್ ಕಿಟ್
ಬೈಂದೂರು: ಕೊರೋನಾ ಎಮೆರ್ಜೆನ್ಸಿ ಯಿಂದಾಗಿ ರಾಜ್ಯದ ಎಲ್ಲಾ ಫ್ಯಾಕ್ಟರಿಗಳು ಲಾಕ್ ಡೌನ್ ಆಗಿ ನೌಕರ ವರ್ಗ ಮನೆಯಲ್ಲಿ ಉಳಿದಿದೆ. ಆದರೆ ಉಡುಪಿ ಜಿಲ್ಲೆಯ ಬೈಂದೂರಿನ ಈ ಫ್ಯಾಕ್ಟರಿ ಮಾತ್ರ ಲಾಕ್ ಡೌನ್ ಆಗದೆ ದಿನದ 24 ಗಂಟೆಯು ಪ್ರೋಡಕ್ಷನ್ ನಲ್ಲಿ ನಿರತವಾಗಿದೆ. ಇದಕ್ಕೆ ಡಿಸಿ ವಿಶೇಷ ಅನುಮತಿ ನೀಡಲು ಕಾರಣ ಇದು ಜನರ ಜೀವ ಉಳಿಸುವ ಕೊರೋನಾ ಪ್ರೋಟೆಕ್ಷನ್ ಕಿಟ್ ತಯಾರಾಗುವ ಘಟಕ.
ಉಡುಪಿ ಜಿಲ್ಲೆಯ ಬೈಂದೂರು ತಾಲೂಕುನಲ್ಲಿರುವ ಈ ಫ್ಯಾಕ್ಟರಿ ಲಾಕ್ ಡೌನ್ ಸಂದರ್ಭ ತನ್ನ ಪ್ರೋಡಕ್ಷನ್ ನಿಲ್ಲಿಸುವ ಬದಲು ಹೆಚ್ಚಿಸಿದೆ. ಡೇ ಶೀಫ್ಟ್ ಮಾತ್ರ ನಡೆಸುತ್ತಿದ್ದ ಫ್ಯಾಕ್ಟರಿ ಈಗ ಸೇವಾ ಮನೋಭಾವದಿಂದ ರಾತ್ರಿಯೂ ಕೂಡ ಪ್ರೋಡಕ್ಷನ್ ಮಾಡ್ತಾ ಇದೆ. ಇಲ್ಲಿ ತಯಾರಾಗ್ತಾ ಇರೋದು ಕೊರೋನಾ ಪ್ರೋಟೆಕ್ಷನ್ ಕಿಟ್. ವೈದ್ಯಕೀಯ ಭಾಷೆಯಲ್ಲಿ ಪರ್ಸನಲ್ ಪ್ರೋಟೆಕ್ಷನ್ ಎಕ್ವಿಪ್ಮೆಂಟ್ ಕಿಟ್ ಎಂದು ಕರೆಯುವ ಈ ಕಿಟ್ ವೈದ್ಯರಿಗೆ ಈ ಸಂದರ್ಭದಲ್ಲಿ ಅತೀ ಅಗತ್ಯವಾದ ಸಾಧನ ಎಂದೆ ಹೇಳಬಹುದು. ಯಾವುದೇ ಸಾಂಕ್ರಾಮಿಕ ರೋಗ ವಿರಲಿ, ಯಾವುದೇ ವೈದ್ಯಕೀಯ ಶಸ್ತೃ ಚಿಕಿತ್ಸೆ ಇರಲಿ ಆ ಸಂದರ್ಭದಲ್ಲಿ ಈ ಪಿಪಿಇ ಕಿಟ್ ವೈದ್ಯರು ಧರಿಸಿಕೊಂಡೆ ರೋಗಿಗಳನ್ನು ಆಪರೇಟ್ ಮಾಡ್ತಾರೆ. ಈ ಕಿಟ್ ಅನ್ನುವಂತದ್ದು ವೈದ್ಯರ ರಕ್ಷಾ ಕವಚ ಎಂದರೆ ತಪ್ಪಾಗಲಾರದು, ಕರೋನಾದಂತಾ ಮಾರಕ ಸಾಂಕ್ರಾಮಿಕ ರೋಗಕ್ಕೆ ತುತ್ತಾದ ರೋಗಿಗಳನ್ನು ಹ್ಯಾಂಡಲ್ ಮಾಡಲು ಈ ಕಿಟ್‌ನ್ನು ನರ್ಸ್‌ಗಳು ಮತ್ತು ವೈದ್ಯರು ಕಡ್ಡಾಯ ಧರಿಸಿದರೆ ಮಾತ್ರ ಸ್ವತಃ ರೋಗದಿಂದ ಬಚಾವ್ ಆಗಲು ಸಾಧ್ಯವಿದೆ. ಅಂತಹ ಕಿಟ್ ನ್ನು ಉಡುಪಿ ಜಿಲ್ಲಾಧಿಕಾರಿ ಅವರ ಸ್ಪೇಶಲ್ ಅನುಮತಿ ಮೇರೆ ಉಪ್ಪುಂದದ ಸುಮುಖ ಸರ್ಜಿಕಲ್ ಫ್ಯಾಕ್ಟರಿಯಲ್ಲಿ ರಾಶಿ ರಾಶಿಯಾಗಿ ಉತ್ಪಾದನೆ ಮಾಡಲಾಗುತ್ತದೆ.
ಮಾರಕ ರೋಗ ಕರೋನಾ ವಕ್ಕರಿಸಿದ ದಿನದಿಂದ ಸುಮುಖ ಸರ್ಜಿಕಲ್ ಫ್ಯಾಕ್ಟರಿಗೆ ಬಿಡುವೆ ಇಲ್ಲ ಎನ್ನುವಂತಾಗಿದೆ. ಈ ತುರ್ತು ಸಂದರ್ಭದಲ್ಲಿ ವ್ಯವಹಾರಿಕವಾಗಿ ಕಿಟ್ ಉತ್ಪಾದನೆಯನ್ನು ನೋಡದೆ ಸೇವೆ ಉದ್ದೇಶಕ್ಕಾಗಿ ಸಂಸ್ಥೆಯ ಮುಖ್ಯಸ್ಥ ಹಗಲು ರಾತ್ರಿ ನಡೆಸುತ್ತಿದ್ದಾರೆ. ಈ ಕಿಟ್ ನಲ್ಲಿ ವೈದ್ಯರಿಗೆ ಗ್ಲೌಸ್, ತಲೆಧರಿಸಿಸುವ ಕ್ಯಾಪ್, ಮಾಸ್ಕ್, ಗೌನ್, ಶೂ ಲೆಗ್ಗಿಂಗ್, ಏಪ್ರಾನ್ ಗಳು ಬರುತ್ತವೆ. ಇದನ್ನು ವಿವಿಧ ಸ್ಥರಗಳಲ್ಲಿ ಇಲ್ಲಿ ಉತ್ಪಾದಿಸಲಾಗುತ್ತಿದೆ. ಇಲ್ಲಿನ ನೌಕರರ ಆರೋಗ್ಯವನ್ನು ಮನದಲ್ಲಿರಿಸಿ ಅವರಿಗೆ ವೈದ್ಯಕೀಯ ಚೆಕ್ ಅಪ್, ಧರಿಸಲು ಮಾಸ್ಕ್, ಗ್ಲೌಸ್, ತಲೆಗೆ ಸ್ಕಾರ್ಪ್ ನೀಡಲಾಗುತ್ತಿದೆ. ಹೈಜಿನ್ ಉದ್ದೇಶಕ್ಕೆ ಬಿಸಿ ನೀರು ನೀಡಲಾಗುತ್ತಿದ್ದು, ತೊಳೆಯಲಿ ಹ್ಯಾಂಡ್ ಸ್ಯಾನಿಟೈಸರ್ ನೀಡಲಾಗುತ್ತಿದೆ. ಸದ್ಯ ಸೇವಾ ಮನೋಭಾವವಿರುವ ಉತ್ಸಾಹಿ ನೌಕರ ಸಹಕಾರದಿಂದ ಕಿಟ್ ತಯಾರಿಸಲಾಗುತ್ತಿದ್ದು, ರಾಜ್ಯ ಮತ್ತು ಹೊರ ರಾಜ್ಯಗಳಿಗೆ ಇಲ್ಲಿಂದಲೆ ಪಿಪಿಇ ಕಿಟ್ ಸರಬರಾಜು ಮಾಡಲಾಗುತ್ತಿದೆ. ಸದ್ಯ ಉತ್ಪಾದನೆಗೆ ಕಚ್ಚಾ ಸಾಮಗ್ರಿ ಸರಬರಾಜಿಗೆ ಸೂಕ್ತ ಸಾರಿಗೆ ವ್ಯವಸ್ಥೆ ಇಲ್ಲದೇ ಸಮಸ್ಯೆ ಉಂಟಾಗುತ್ತಿದ್ದರು ಅಧಿಕಾರಿ ಸಹಕಾರದಿಂದ ನಿರಂತರವಾಗಿ ಉತ್ಪಾದನೆ ಮಾಡಿ ರಾಜ್ಯ ಮೂಲೆ ಮೂಲೆ ಕಳುಹಿಸಲಾಗುತ್ತಿದೆ.
ಒಟ್ಟಾರೆಯಾಗಿ ಕೊರೋನಾ ಎರ್ಮಜೆನ್ಸಿ ಸಂದರ್ಭದಲ್ಲಿ ಅತೀ ಅಗತ್ಯವಾಗಿ ವೈದ್ಯಕೀಯ ಕಿಟ್ ಹಗಲು ರಾತ್ರಿ ತಯಾರಾಗಿ ಸರಕಾರಿ ಮತ್ತು ಖಾಸಗಿ ಆಸ್ಪತ್ರೆಗೆ ಸೇರುತ್ತಿದೆ. ಇದರಿಂದ ಕರೋನಾ ರೋಗಿಗಳ ಶುಶ್ರೂಷೆಯಲ್ಲಿ ತೊಡಗುವ ವೈದ್ಯರು ಮತ್ತು ನರ್ಸ್‌ಗಳು ಆರೋಗ್ಯ ಸುರಕ್ಷೆಯಾಗುತ್ತಿದೆ ಎಂದರೆ ತಪ್ಪಾಗಲಾರದು.
Good decision…..
Good decision…..