ಗೆಳೆಯರ ಬಳಗ ಮಾರ್ಪಳ್ಳಿ: 37ನೇ ವಾರ್ಷಿಕೋತ್ಸವ ಸಮಾರಂಭ
ಉಡುಪಿ: ಗೆಳೆಯರ ಬಳಗ ಮಾರ್ಪಳ್ಳಿ ಇದರ 37ನೇ ಹಾಗೂ ಮಹಿಳಾ ಮಂಡಳಿಯ 11 ನೇ ವಾರ್ಷಿಕೋತ್ಸವ ಸಮಾರಂಭ ಶನಿವಾರ ಬಲ್ಲಾಳ್ ನಗರ ಮಾರ್ಪಳ್ಳಿಯಲ್ಲಿ ನಡೆಯಿತು.
ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಮಣಿಪಾಲ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಮೆಂಟ್ ಇದರ ಫ್ರೊ. ರವೀಂದ್ರನಾಥ್ ನಾಯಕ್ ಮಾತನಾಡಿ ಇಂದಿನ ಇಂದಿನ ಕಂಪ್ಯೂಟರ್ ಯುಗದಲ್ಲಿ ತಮ್ಮ ವಿದ್ಯಾಭ್ಯಾಸ ಮುಂದುವರಿಸಲು ಕಾಲೇಜುಗಳಿಗೆ ಹೋಗಿ ಕಲಿಯ ಬೇಕಿಂದಿಲ್ಲ, ಅದಕ್ಕಾಗಿಯೇ ಆನ್ಲೈನ್ ಶಿಕ್ಷಣ ಪಡೆಯಬಹುದು. ಇದರಿಂದ ವಿದ್ಯಾರ್ಥಿಗಳು ಎಸ್‌ಎಸ್‌ಎಲ್ಸಿ ಪಿಯುಸಿ ನಂತರ ವಿಶ್ವವಿದ್ಯಾನಿಲಯಗಳಲ್ಲಿ ಆನ್ಲೈನ್ ಶಿಕ್ಷಣವನ್ನು ಕಲಿತು ಅದರಲ್ಲಿ ತೇರ್ಗಡೆಯಾಗಿ ಉನ್ನತ ಭವಿಷ್ಯ ರೂಪಿಸಿ ಕೊಳ್ಳಬಹುದೆಂದರು.
ಅದೇ ರೀತಿ ಯುವಕ-ಯುವತಿಯರಿಗೆ ತಾವು ಅತಿ ಹೆಚ್ಚು ಇಷ್ಟಪಡುವ ವಿಭಾಗಗಳಲ್ಲಿ ತರಬೇತಿ ಪಡೆಯಲು ರುಡೆಶೆಡ್ ನಂತಹ ತರಬೇತಿ ಸಂಸ್ಥೆಗಳು ಉಡುಪಿಯಲ್ಲಿದೆ. ಇಲ್ಲಿ ತಮ್ಮ ಆಸಕ್ತಿಯ ಕ್ಷೇತ್ರಗಳಲ್ಲಿ ಒಂದು ವಿಭಾಗವನ್ನು ಆರಿಸಿ ಅದರಲ್ಲಿ ಉತ್ತಮ ತರಬೇತಿ ಪಡೆದು ಸಮಾಜದಲ್ಲಿ ಒಳ್ಳೆಯ ವ್ಯಕ್ತಿಗಳಾಗಿ ಬದುಕಲು ಸಾಧ್ಯವಾಗುತ್ತದೆ ಎಂದು ಕಿವಿಮಾತು ಹೇಳಿದರು.
ಸಭಾ ಕಾರ್ಯಕ್ರಮದಲ್ಲಿ ಕರ್ನಾಟಕ ಕ್ರಿಶ್ಚಿಯನ್ ಸಂಘಗಳ ಒಕ್ಕೂಟದ ಅಧ್ಯಕ್ಷ ಲೂಯಿಸ್ ಲೋಬೋ, ಅಲೆವೂರು ಗ್ರಾಮ ಪಂಚಾಯತ್ ಉಪಾಧ್ಯಕ್ಷೆ ಜಯಲಕ್ಷ್ಮೀ ಹಂಸರಾಜ್,ಜ್ಯೋತಿ ದೇವಾಡಿಗ, ಸಂಘದ ಅಧ್ಯಕ್ಷ ಪಾಂಡುರಂಗ ನಾಯ್ಕ್. ಮಹಿಳಾ ಮಂಡಳಿಯ ಗೌರವಾಧ್ಯಕ್ಷೆ ಅನುರಾಧ ಶೆಟ್ಟಿಗಾರ್, ಅಧ್ಯಕ್ಷೆ ಲಲಿತಾ ಉಪಸ್ಥಿತರಿದ್ದರು.
ಇದೇ ಸಂದರ್ಭ ಸಂಘದ ವಿವಿಧ ಕ್ಷೇತ್ರಗಳಲ್ಲಿ ಸೇವೆ ಸಲ್ಲಿಸಿದ ಸದಸ್ಯರಾದ ತುಳು ರಂಗಭೂಮಿಯಲ್ಲಿ ವಿಶೇಷ ಸಾಧನೆಗೈದ ವಿಜಯ್ ಆರ್ ನಾಯಕ್, ಎಲ್‌ಐಸಿ ಅಧಿಕಾರಿಯಾಗಿ ನಿವೃತ್ತಿಯಾದ ರಮೇಶ್ ಮಾರ್ಪಳ್ಳಿ, ದಕ್ಷಿಣ ಕನ್ನಡ ಸಹಕಾರಿ ನೌಕರರ ಸಂಘದ ನಿರ್ದೇಶಕರಾಗಿ ಆಯ್ಕೆಯಾದ ವಿಶ್ವನಾಥ್ ಅಮಿನ್, ನಿಟ್ಟೆ ತಾಂತ್ರಿಕ ಮಹಾ ವಿದ್ಯಾಲಯದ ಪ್ರಾಧ್ಯಾಪಕರಾಗಿ ಡಾಕ್ಟರೇಟ್ ಪಡೆದ ಉದಯ ದೇವಾಡಿಗ, ಶಿವಗಿರಿ ಕ್ರೆಡಿಟ್ ಕೋ-ಆಪರೇಟಿವ್ ಸೊಸೈಟಿಯ ನಿರ್ದೇಶಕರಾಗಿ ಆಯ್ಕೆಯಾದ ರಾಜೇಶ್ ಅಲೆವೂರು ಅವರನ್ನು ಸನ್ಮಾನಿಸಲಾಯಿತು.
ಸಂಘದ ಗೌರವ ಅಧ್ಯಕ್ಷ ಕುಂಞು ಮೋನ್ ಸ್ವಾಗತಿಸಿ, ಕಾರ್ಯದರ್ಶಿ ಹರಿಶ್ಚಂದ್ರ ಮಾರ್ಪಳ್ಳಿ ವರದಿ ವಾಚಿಸಿ, ಕಾರ್ಯಕಾರಿ ಸಮಿತಿಯ ಸದಾಶಿವ ಆಚಾರ್ಯ ವಂದಿಸಿದರು. ಬಳಿಕ ಶ್ರೀಕೃಷ್ಣ ಕಲಾವಿದರು ಕಿನ್ನಿಮೂಲ್ಕಿ ಉಡುಪಿ ಅಭಿನಯಿಸಿದ “ಆನಿದ ಮನದಾನಿ” ತುಳು ಹಾಸ್ಯ ನಾಟಕ ಪ್ರದರ್ಶನಗೊಂಡಿತು.