21 ದೇಶಗಳ ನೋಟುಗಳನ್ನು ಬಳಸಿ 12 ಅಡಿ ಎತ್ತರದ ಗಣೇಶನ ಕಲಾಕೃತಿ

ವಿಶ್ವ ಧನಾಧಿಪ ಗಣೇಶನ ವಿಶ್ವರೂಪ ದರ್ಶನ 21 ದೇಶಗಳ ನೋಟುಗಳನ್ನು ಬಳಸಿ 12 ಅಡಿ ಎತ್ತರದ ಗಣೇಶನ ಕಲಾಕೃತಿ.

ಮಣಿಪಾಲ್ ಸ್ಯಾಂಡ್ ಹಾರ್ಟ್‌ನ ಕಲಾವಿದರಾದ ಶ್ರೀನಾಥ್ ಮಣಿಪಾಲ, ವೆಂಕಿ ಪಲಿಮಾರು, ರವಿ ಹಿರೆಬೆಟ್ಟು ಇವರು ಸಾಯಿರಾಧ ಮೋಟಾರ್ಸ್ ಉಡುಪಿ ಇವರ ಸಹಯೋಗದೊಂದಿಗೆ 21 ದೇಶಗಳ ನೋಟುಗಳನ್ನು ಬಳಸಿ ಗಣೇಶನ ಕಲಾಕೃತಿ ರಚಿಸಿದ್ದಾರೆ.

ಈ ಕಲಾಕೃತಿಯು ಉಡುಪಿಯ ವಿದ್ಯಾಸಮುದ್ರ ಮಾರ್ಗದಲ್ಲಿರುವ ಸಾಯಿರಾಧ ಮೋಟಾರ್ಸ್‌ನಲ್ಲಿ (ಗೀತಾಂಜಲಿ ಮಾರ್ಗ) ಗಣೇಶ ಚತುರ್ಥಿಯ ಸಂದರ್ಭದಲ್ಲಿ ಪ್ರದರ್ಶನಗೊಳ್ಳಲಿದೆ.

ಈ ಕಲಾಕೃತಿಯಲ್ಲಿ ಭಾರತದ ನೋಟುಗಳನ್ನು ಜಾಸ್ತಿಯಾಗಿ ಬಳಸಲಾಗಿದೆ ಮತ್ತು ಶ್ರೀಲಂಕಾ, ಬಾಂಗ್ಲಾದೇಶ, ಚೀನಾ, ಅಫ್ಘಾನಿಸ್ತಾನ್, ಬುತಾನ್, ಬಹ್ರೈನ್, ಯು ಎ ಇ, ಅಮೇರಿಕಾ, ಇಸ್ರೇಲ್ ಮುಂತಾದ 21 ದೇಶಗಳ ಕೃತಕ ನೋಟುಗಳನ್ನು ಕಲಾತ್ಮಕವಾಗಿ ಪೋಣಿಸಲಾಗಿದೆ.

ಈ ಮೊದಲು ಈ ಕಲಾವಿದರು ಪೆಪರ್‌ಕಪ್ , ಹ್ಯಾಂಡ್‌ಮೆಡ್ ಪೆಪರ್, ಗುಡಿಕೈಗಾರಿಕೆಯ ವಸ್ತುಗಳು, ಬಿಸ್ಕೇಟ್ ಗಣೇಶ, ದಾನ್ಯಗಳನ್ನು ಬಳಸಿ ಗಣೇಶನ ಕಲಾಕೃತಿಗಳನ್ನು ರಚಿಸಿದ್ದರು.

Leave a Reply

Your email address will not be published. Required fields are marked *

error: Content is protected !!