ರೈಲಿನ ಇಂಜಿನ್ ನಲ್ಲಿ ಇಂಧನ ಸೋರಿಕೆ; ಸಮಯ ಪ್ರಜ್ಞೆ ಮೆರೆದ ಚಾಲಕ

ಬೈಂದೂರು : ರೈಲಿನ ಇಂಜಿನ್ ನಲ್ಲಿ ಇಂಧನ ಸೋರಿಕೆಯನ್ನು ಗಮನಿಸಿ ಬದಲಿ ಇಂಜಿನ್ ನ್ನು ಬಳಸಿ ಚಾಲಕನ ಸಮಯ ಪ್ರಜ್ಞೆಯಿಂದ ಪ್ರಯಾಣಿಕರಿಗೆ ಆಗುವ ತೊಂದರೆಯನ್ನ ತಪ್ಪಿಸಿದ ಘಟನೆ ಬೈಂದೂರು ಸಮೀಪದ ಬಿಜೂರಿನಲ್ಲಿ ನಡೆದಿದೆ.

ಪುಣೆಯಿಂದ ಕೇರಳಕ್ಕೆ ಹೋಗುವ ಪ್ಯಾಸೆಂಜರ್ ರೈಲು ಉಡುಪಿ ಜಿಲ್ಲೆಯ ಬೈಂದೂರು ತಾಲೂಕಿನ ಬಿಜೂರು ರೈಲು ನಿಲ್ದಾಣದ ಬಳಿ ಪಾಸಿಂಗ್ ಸಮಯದಲ್ಲಿ ನಿಂತುಕೊಂಡಿದ್ದು..ಈ ವೇಳೆಯಲ್ಲಿ ಧಿಡೀರನ್ ಇಂಜಿನಲ್ಲಿ ಇಂಧನ ಸೋರುತ್ತಿರುವುದನ್ನು ಕಂಡ ಚಾಲಕ ಬದಲಿ ಇಂಜಿನ್ ನನ್ನ ಬಳಸಿ ಪ್ರಯಾಣಿಕರ ಪ್ರಯಾಣವನ್ನ ಸಸೂತ್ರ ಗೊಳಿಸಿದರು ರೈಲ್ವೆ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ರೈಲನ್ನು ನಿಲ್ಲಿಸಿ ತುರ್ತು ವ್ಯೆವಸ್ಥೆಯನ್ನು ಕಲ್ಪಿಸಿದರು..

Leave a Reply

Your email address will not be published. Required fields are marked *

error: Content is protected !!