ಕೇರಳಾದಿಂದ ಕರ್ನಾಟಕಕ್ಕೆ ಸಮುದ್ರ ಮೂಲಕ ನುಸುಳುವ ಭೀತಿ, ಕಟ್ಟೆಚ್ಚರ

ಉಡುಪಿ: ಕೋವಿಡ್-19 ಹಿನ್ನೆಲೆಯಲ್ಲಿ ತಲಪಾಡಿ ಗಡಿಭಾಗ ಮುಚ್ಚಿರುವುದರಿಂದ ಕೇರಳಾ ರಾಜ್ಯದಿಂದ ಕರ್ನಾಟಕ ರಾಜ್ಯಕ್ಕೆ ಸಮುದ್ರ ತೀರ ಪ್ರದೇಶದಿಂದ ಜನರು ಒಳ ಬರುವ ಸುದ್ದಿ ಹಬ್ಬಿದ ಹಿನ್ನೆಲೆಯಲ್ಲಿ ಕರಾವಳಿ ಕಾವಲು ಪೊಲೀಸ್ ಘಟಕದ ಅಧೀಕ್ಷಕರಾದ
ಚೇತನ್.ಆರ್ ಹಾಗೂ ಪೊಲೀಸ್ ಉಪಾಧೀಕ್ಷಕರು ಮತ್ತು ಅಧಿಕಾರಿಗಳು ಕೇರಳಾ-ಕರ್ನಾಟಕದ ಗಡಿ ಭಾಗದ ಲ್ಯಾಂಡಿಂಗ್ ಪಾಯಿಂಟ್‌ಗಳಿಗೆ ಭೇಟಿ ನೀಡಿ ಪರಿಶೀಲಿಸಿದ್ದಾರೆ.

ದಿನದ 24 ಗಂಟೆಯು ಕರಾವಳಿ ಕಾವಲು ಪೊಲೀಸ್ ಘಟಕದ ಇಂಟರ್‌ಸೆಪ್ಟರ್ ಬೋಟ್‌ಗಳಿಂದ ಗಸ್ತು ನಿರ್ವಹಿಸಲು ಹಾಗೂ ಲ್ಯಾಂಡಿಂಗ್ ಪಾಯಿಂಟ್‌ಗಳಲ್ಲಿ ಈ ಹಿಂದೆ ಚಾಲ್ತಿಯಲ್ಲಿದ್ದ ಪಾಯಿಂಟ್ ಕರ್ತವ್ಯದೊಂದಿಗೆ, ದಿನದ 24 ಗಂಟೆಯು ಸಿ.ಎಸ್.ಪಿ ಠಾಣೆಯ ಅಧಿಕಾರಿ/ಸಿಬ್ಬಂದಿಗಳು ಹಾಗೂ ಕೆ.ಎನ್.ಡಿ ಸಿಬ್ಬಂದಿಗಳು ಕರ್ತವ್ಯ ನಿರ್ವಹಿಸುವಂತೆ ಸೂಚಿಸಿರುತ್ತಾರೆ. ಯಾವುದೇ ರೀತಿಯಲ್ಲಿ ತೀರ ಪ್ರದೇಶದಲ್ಲಿ ಕೇರಳ ರಾಜ್ಯದಿಂದ ಕರ್ನಾಟಕಕ್ಕೆ ಯಾರು ಆಗಮಿಸದಂತೆ ಸೂಕ್ತ ಎಚ್ಚರಿಕೆಯನ್ನು ಹಾಗೂ
ಮುಂಜಾಗೃತಾ ಕ್ರಮಗಳನ್ನು ತೆಗೆದುಕೊಳ್ಳಲಾಗಿದೆ.

Leave a Reply

Your email address will not be published. Required fields are marked *

error: Content is protected !!